ಚಿತ್ರದುರ್ಗ, (ಫೆ.10): ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವಂತ ಹಗಲು ಕನಸು ಕಾಣುತ್ತಿದ್ದಾರೆ. ಇಂತಹ ಸಿದ್ದರಾಮಯ್ಯಗೆ ತಾಕತ್ತಿದ್ದರೇ ಮುಂದಿನ ಸಿಎಂ ತಾವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಬಾಯಿಯಿಂದಲೇ ಹೇಳಿಸಲಿ ಅಂತ ಸಚಿವ ಕೆ.ಎಸ್.ಈಶ್ವರಪ್ಪ ಸವಾಲ್ ಹಾಕಿದ್ದಾರೆ.

ಚಿತ್ರದುರ್ಗದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಡಿಕೆ ಶಿವಕುಮಾರ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆಯೂ ಸಿಎಂ ಆಗ್ತಾರೆ ಎಂದು ಹೈಕಮಾಂಡ್ ಹೇಳಿದ್ರೇ.. ಕಾಂಗ್ರೆಸ್ ನಲ್ಲಿ ಬಡಿದಾಡಿಕೊಂಡು ಸತ್ತು ಬಿಡುತ್ತಾರೆ. ಸಿದ್ದರಾಯಮಯ್ಯ ಅವರ ಸರ್ವಾಧಿಕಾರಿ ಧೋರಣೆಯನ್ನು ರಾಜ್ಯದ ಜನ ಒಪ್ಪುವುದಿಲ್ಲ ಎಂದರು.

ಸಿದ್ದರಾಮಯ್ಯ ಹೊಸ ರಾಜಕೀಯ ಆಟ: ಉಳಿದವರಲ್ಲಿ ಶುರುವಾಯ್ತು ತಳಮಳ

ಇನ್ನು ಸಿದ್ದರಾಮಯ್ಯನವರ ಅಹಿಂದ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ದಲಿತರನ್ನು ಬಳಸಿಕೊಂಡು ಮುಖ್ಯಮಂತ್ರಿ ಆದ್ರು. ಸಿದ್ದರಾಮಯ್ಯಗೆ ಕುರುಬ ಶ್ರೀಗಳ ಹೇಳಿಕೆ ತಡೆಯಲು ಆಗಲಿಲ್ಲ. ಇತ್ತ ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ 17 ಶಾಸಕರು ಸರ್ಕಾರದಿಂದ ಕೆಲಸ ಆಗ್ತಾ ಇಲ್ಲ ಅಂತ ಬಂದ್ರು ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು.