ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!
ಬಿಟ್ ಕಾಯಿನ್ ಬಗ್ಗೆ ಸರಿಯಾಗಿ ತನಿಖೆ ನಡೆದರೆ ರಾಜ್ಯಕ್ಕೆ ಮೂರನೇ ಸಿಎಂ ಬರುತ್ತಾರೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಶಿಕಾರಿಪುರ ದಲ್ಲಿ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ.
ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್,
ಚಿಕ್ಕಮಗಳೂರು (ಮೇ.2): ಬಿಟ್ ಕಾಯಿನ್ (Bitcoin) ಬಗ್ಗೆ ಸರಿಯಾಗಿ ತನಿಖೆ ನಡೆದರೆ ರಾಜ್ಯಕ್ಕೆ ಮೂರನೇ ಸಿಎಂ ಬರುತ್ತಾರೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಶಿಕಾರಿಪುರ ದಲ್ಲಿ ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದ್ದಾರೆ. ಶಿಕಾರಿಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಕಾಂಗ್ರೆಸ್ ನ ಪ್ರಿಯಾಂಕ ಖರ್ಗೆ ಒಂದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ದೇಶದಲ್ಲಿ ಬಿಟ್ ಕಾಯಿನ್ ಕಳವಿನ ಬಗ್ಗೆಯಾಗಲಿ, ದುರುಪಯೋಗವಾಗಲಿ ನಡೆದಿದೆ ಎಂಬುದರ ಬಗ್ಗೆ ಒಂದು ದೂರಾದರೂ ದಾಖಲಾಗಬೇಕಿತ್ತು.
ಅಂತಹ ಯಾವುದೇ ದಾಖಲಾತಿಗಳೇ ಆಗಿಲ್ಲ. ಭಾರತ ಸರ್ಕಾರ ಯಾವುದೇ ವಿದೇಶಿ ತನಿಖಾ ತಂಡ ಬಂದು ತನಿಖೆ ನಡೆಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಆ ರೀತಿ ಯಾವ ತನಿಖಾ ತಂಡವೂ ಬಂದು ತನಿಖೆ ನಡೆಸಿಲಿಲ್ಲ. ಹಾಗಾಗಿ ಮೂರನೇ ಸಿಎಂ ಬರುವ ಪ್ರಶ್ನೆನೇ ಇಲ್ಲ. ಇದು ಹಾಸ್ಯಸ್ಪದವೆಂದರು
ಇಲ್ಲದ್ದನ್ನ ಸೃಷ್ಠಿಸಿ ಇದೆ ಎಂದು ಹೇಳಲು ಪ್ರಿಯಾಂಕ ಖರ್ಗೆ ಹೊರಟಿದ್ದಾರೆ. ರಾಜಕೀಯ ಲಾಭ ಪಡೆಯಲು ಇದರಿಂದ ಸಾಧ್ಯವಿಲ್ಲ. ಅದರಂತೆ ಪಿಎಸ್ಐ ಹಗರಣ ಕುರಿತಂತೆ ಕಲಬುರಗಿ ಪರೀಕ್ಷಾ ಕೇಂದ್ರಕ್ಕೆ ಸೀಮಿತವಾಗಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರು ಸೇರಿದಂತೆ ಎಲ್ಲೆಡೆ ಎಫ್ಐಆರ್ ಆಗಬೇಕಿತ್ತು ಎಂಬ ಖರ್ಗೆ ಹೇಳಿಕೆಗೆ ಉತ್ತರಿಸಿದ ಆರೋಗ್ಯ ಸಚಿವ ತನಿಖೆ ಹಂತದಲ್ಲಿ ಇರುವಾಗ ನಾನು ಪ್ರತಿಕ್ರಿಯಿಸಲಾರೆ. ಸರ್ಕಾರದಲ್ಲಿ ಇರುವವರು ಒಂದೊಂದು ಹೇಳಿಕೆ ನೀಡುವುದು ಸರಿಯಲ್ಲ. ಹಾಗಾಗಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ.
PSI Recruitment Scam: ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!
ಸರ್ಕಾರ ಯಾರನ್ನೂ ಕೂಡ ರಕ್ಷಿಸುವ ಮಾತೇ ಇಲ್ಲ. ಅದು ತಾರ್ಕಿಕ ಅಂತ್ಯ ಕಾಣಲಿದೆ ಎಂದರು. ಬಿಜೆಪಿಯ ಬಹುತೇಕ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಮಾತಿಗೆ ತಿರುಗೇಟು ನೀಡಿದ ಡಾ.ಸುಧಾಕರ್, ನಾವು ಈ ರೀತಿ ಊರಿನ ತುಂಬಾ ಹೇಳಿಕೊಂಡು ಹೋಗಬಹುದು ಆದರೆ ನಾವು ಹಾಗೆ ಹೇಳಲ್ಲ ನಾವು ಅಲ್ಲಿನ ನಾಯಕರನ್ನ ಕರೆದುಕೊಂಡು ಬರಲಿದ್ದೇವೆ. ಅದನ್ನ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಕಳೆದ ವರ್ಷದಿಂದಲೇ ಈ ಹೇಳಿಕೆ ನೀಡುತ್ತಿರುವ ಖರ್ಗೆ: ಬಿಟ್ ಕಾಯಿನ್ ಹಗರಣದ (Bitcoin Scam) ಮಾಹಿತಿ ಹೊರ ಬಂದರೆ ಮುಖ್ಯಮಂತ್ರಿ (Chief Minister) ಬದಲಾಗುತ್ತಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಈ ಹಿಂದೆ ಕೂಡ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹಲವು ಬಾರಿ ಹೇಳಿಕೆ ನೀಡಿದ್ದಾರೆ.
Chikkamagaluru ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ!
ಮೈಸೂರಿನಲ್ಲಿ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಿಟ್ ಕಾಯಿನ್ ಪ್ರಕರಣದಲ್ಲಿ ಚಾರ್ಜ್ ಆದ ಮೇಲೆ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಅಂದು ಮತ್ತು ಇಂದು ಅದನ್ನೇ ಹೇಳುತ್ತಿದ್ದೇನೆ. ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದರು.
ಪ್ರಿಯಾಂಕ ಖರ್ಗೆ ಕ ಹೇಳಿಕೆಯಿಂದ ಹೊಸ ಸಂಚಲನ ಸೃಷ್ಟಿಯಾಗುತ್ತಿದೆ . ಬಸವರಾಜ್ ಬೊಮ್ಮಾಯಿ ಅವರು ಈ ಸ್ಥಾನದಿಂದ ಕೆಳಗಿಳಿದು ಕರ್ನಾಟಕಕ್ಕೆ ಹೊಸ ಸಿಎಂ ಸಿಗಲಿದ್ದಾರಾ. ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನ ನಡೆಯುತ್ತಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.