Chikkamagaluru ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ!

  • 27 ಅಡಿ  ಎತ್ತರಕ್ಕೆ ಕೈಮುಗಿದು, ಮಂಡಿಯೂರಿ ಕೂತಿರೋ ವಾಯುಪುತ್ರ
  • ದಕ್ಷಯಜ್ಞ ಮಾಡಿದ ಸ್ಥಳದಲ್ಲಿ ವಾಯುಪುತ್ರ
  • ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿ ತಾಣವೂ 
  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹರಿಹರಪುರದಲ್ಲಿ ವಾಯುಪುತ್ರ ಮೂರ್ತಿ 
Anjaneya on the Hariharapura Monastery in Koppa  near chikkamagaluru  gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ.2): ಅದು ದಕ್ಷಯಜ್ಞ ನಡೆದಿದ್ದ ಸ್ಥಳ. ದಕ್ಷಾಶ್ರಮ ಎಂದು ಸ್ಕಂದ ಪುರಾಣದಲ್ಲೇ ಉಲ್ಲೇಖವಿದೆ. ಯಜ್ಞ ಕುಂಡದಿಂದ ಶಿವ ಪ್ರತ್ಯಕ್ಷನಾಗಿ ಅನುಗ್ರಹಿಸಿದ್ದ ಅಂತಹಾ ಪುಣ್ಯಭೂಮಿಯಲ್ಲೀಗ ವಾಯುಪುತ್ರ ನೆಲೆ ನಿಂತಿದ್ದಾನೆ. 27 ಅಡಿ ಎತ್ತರಕ್ಕೆ ಕೈಮುಗಿದು, ಮಂಡಿಯೂರಿ ಕೂತಿರೋ ಅವನ ನೋಡಲಿಕ್ಕೆ ಎರಡು ಕಣ್ಣುಗಳೇ ಸಾಲದು. ಇದೊಂದು ದೇವಾಲಯವಾದರೂ ಕೂಡ ಪ್ರವಾಸಿ ತಾಣವಾಗಿದೆ. ಯಾಕಂದ್ರೆ, ಅಲ್ಲಿ ನೆಲೆ ನಿಂತಿರೋ ಆಂಜನೇಯನ ಇತಿಹಾಸ ಕೂಡ ಅಷ್ಟೇ ರೋಚಕವಾಗಿದೆ. ಈ ಆಂಜನೇಯ ನಿಂತಿರೋದು ಐದು ಲಕ್ಷ ಪುಸ್ತಕಗಳ ಮೇಲೆ ಅನ್ನೋದು ಗಮನಾರ್ಹ. 

5 ಲಕ್ಷ ಪುಸಕ್ತಗಳ ಮೇಲೆ ವಿರಾಜಮಾನವಾಗಿರುವ ಗಾಳಿಪುತ್ರ: ಚಿಕ್ಕಮಗಳೂರು (Chikkamagaluru) ಜಿಲ್ಲೆ ಕೊಪ್ಪ (Koppa) ತಾಲೂಕಿನ ಹರಿಹರಪುರ ಮಠದ ( Hariharapura Monastery) ಆವರಣದಲ್ಲಿ ವಿರಾಜಮಾನವಾಗಿ ಗಾಳಿಪುತ್ರ ನಿಂತಿದ್ದಾನೆ. ಎದ್ದು ಬರೋದಕ್ಕೆ ಸಿದ್ಧನಾದಂತೆ ನಿಂತಿರೋ 27 ಅಡಿಯ ಇವನನ್ನ ನೋಡೋದೆ ಆನಂದ. ಆದ್ರೆ, ಈತ ನಿಂತಿರೋದು 5 ಲಕ್ಷ ಪುಸ್ತಕಗಳ ಮೇಲೆ ಅನ್ನೋದು ಮತ್ತೊಂದು ಗಮನಾರ್ಹ ಸಂಗತಿ. ಈ ಆಂಜನೇಯ ಪಾದದಡಿ ಜೈ... ಜೈ... ಲಕ್ಷ್ಮಿ ನರಸಿಂಹ, ವಜ್ರ ನರಸಿಂಹ ಎಂದು ಬರೆದಿರುವ ನರಸಿಂಹನ ಮಂತ್ರದ ಐದು ಲಕ್ಷದ ಪುಸ್ತಕಗಳಿವೆ.

VIJAYAPURA ಮಾರುತೇಶ್ವರ ಜಾತ್ರೆಯಲ್ಲಿ ಹಾಲೋಕುಳಿ ಸಂಭ್ರಮ

ಅಗಸ್ತ್ಯ ಮಹರ್ಷಿಗಳು ದಕ್ಞಯಜ್ಞ ನಡೆಸಿ ಇಲ್ಲಿ ಲಕ್ಷ್ಮಿ ನರಸಿಂಹರ ದರ್ಶನ ಪಡೆದಿದ್ದರು. ಲಕ್ಷ್ಮಿ ನರಸಿಂಹ ಸಾಲಿಗ್ರಾಮ ಇಂದಿಗೂ ಅದೇ ಪರಂಪರೆಯಲ್ಲಿ ಪೂಜೆ ಆಗ್ತಿದೆ. ಶಂಕರ ಭಗವತ್ಪಾದರು ಇಲ್ಲಿ ಶ್ರೀಚಕ್ರ ಯಂತ್ರೋದ್ಧಾರ ಮಾಡಿ ಶಾರದಾ ಪರಮೇಶ್ವರಿಯನ್ನ ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸ್ಥಳ ಐತಿಹಾಸಿಕ ಹಿನ್ನೆಲೆ ಒಳಗೊಂಡಿದೆ. ಇಂತಹಾ ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ 27 ಅಡಿಯ ವಾಯುಪುತ್ರ ಐದು ಲಕ್ಷ ಪುಸ್ತಕಗಳ ಮೇಲೆ ನೆಲೆ ನಿಂತಿದ್ದಾನೆ. 

ದೇಶವಷ್ಟೇ ಅಲ್ಲದೆ ವಿದೇಶಿದಲ್ಲೂ ಭಕ್ತರು ಬರೆದು ಕಳುಹಿಸಿರುವ ಪುಸ್ತಕಗಳು: ಮಠದಲ್ಲಿ ನಡೆದ ಕುಂಭಾಭಿಷೇಕ ನಿಮಿತ್ತ ಭಕ್ತರು ಬರೆದ ಕಳುಹಿಸಿದ ಐದು ಲಕ್ಷ ಪುಸ್ತಗಳನ್ನ ಈ ಮೂರ್ತಿಯ ಅಡಿ ಪ್ರತಿಷ್ಠಾಪಿಸಲಾಗಿದೆ. ಪಂಚದರ್ಬೆಗಳ ಮೇಲೆ ಅರಿಶಿನ, ಕುಂಕುಮ, ಗಂಧ, ವಿಭೂತಿ, ಬಿಲ್ವಪತ್ರೆ ಹಾಗೂ ತುಳಸಿ ಹಾಕಿ ಲೇಯರ್ ಮಾಡಿ ಐದು ಲಕ್ಷ ಪುಸ್ತಕಗಳನ್ನ ಜೋಡಿಸಲಾಗಿದೆ. ಹರಿಹರಪುಠ ಮಠದ ಸಚ್ಚಿದಾನಂದ ಶ್ರೀಗಳೇ ಐದು ಲಕ್ಷ ಪುಸ್ತಕಗಳನ್ನ ಜೋಡಿಸಿ ಇಟ್ಟಿದ್ದಾರೆ.

ಕುಂಭಾಭಿಷೇಕದ ನಿಮಿತ್ತ ಮಠದಿಂದಲೇ ಇಂಗ್ಲೀಷ್ ಬಿಟ್ಟು ಎಲ್ಲಾ ಭಾಷೆಯಲ್ಲೂ ಪುಸ್ತಕಗಳನ್ನ ನೀಡಲಾಗಿತ್ತು. ಕನ್ನಡ, ಸಂಸ್ಕøತ, ಹಿಂದಿ, ತಮಿಳು, ತೆಲುಗು, ಮರಾಠಿ, ಬೆಂಗಾಳಿ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಪುಸ್ತಕಗಳನ್ನ ನೀಡಲಾಗಿತ್ತು. ದೇಶದ ಎಲ್ಲಾ ರಾಜ್ಯದ ಭಕ್ತರು ಜೈ... ಜೈ... ಲಕ್ಷ್ಮಿ ನರಸಿಂಹ, ವಜ್ರ ನರಸಿಂಹ ಎಂದು ಬರೆದು ಕಳುಹಿಸಿದ್ದರು. ದೇಶವಷ್ಟೇ ಅಲ್ಲದೆ ಅಮೆರಿಕಾ, ರಷ್ಯಾ, ಇಂಗ್ಲೆಂಡ್, ಮಲೆಷ್ಯಾ, ದುಬೈ ಹಾಗೂ ಸೌದಿ ಅರೇಬಿಯಾದಿಂದಲೂ ಭಕ್ತರು ಪುಸ್ತಕವನ್ನ ಬರೆದು ಕಳುಹಿಸಿದ್ದಾರೆ. 

Ballari ರೌಡಿ ಶೀಟರ್ ಹತ್ಯೆ, ಶಾಸಕ ಸೋಮಶೇಖರ ರೆಡ್ಡಿ ನೀಡಿದ್ರಾ ಬೆಂಬಲ?

ದೇವಸ್ಥಾನವಾದರೂ ಆಂಜನೇಯ ಪ್ರವಾಸಿ ಮೂರ್ತಿ !: ಒಟ್ಟಾರೆ, ಈ ಮಣ್ಣಲ್ಲಿ ಅಸಂಖ್ಯಾತ ದೇವಾಲಯಗಳಿವೆ. ಒಂದೊಂದು ದೇವಾಲಯಗಳದ್ದು ಒಂದೊಂದು ಇತಿಹಾಸ. ಒಂದೊಂದು ದೇವರದ್ದು ಒಂದೊಂದು ರೋಚಕತೆ. ಅಂತಹಾ ವಿಭಿನ್ನ ಕಥೆಗೆ ಈ ಆಂಜನೇಯನೂ ಸೇರಿಕೊಳ್ಳುತ್ತಾನೆ. ಹರಿಹರಪುರ ಮಠ ದೇವಸ್ಥಾನವಾದರೂ ಈ ದೇವಾಲಯದ ಆವರಣದಲ್ಲಿರುವ ಆಂಜನೇಯ ಪ್ರವಾಸಿ ಮೂರ್ತಿಯಾಗಿದ್ದಾನೆ. ಇಲ್ಲಿಗೆ ಬಂದ ಭಕ್ತರು ದೇವರ ಆಶೀರ್ವಾದ ಪಡೆದು ಈ ಪ್ರವಾಸಿ ಆಕರ್ಷಕ ಮೂರ್ತಿಯ ದರ್ಶನ ಪಡೆದು ಪುನೀತರಾಗ್ತಿದ್ದಾರೆ.

Latest Videos
Follow Us:
Download App:
  • android
  • ios