ಡಿಕೆಶಿಗೆ ಧಮ್ ಇದ್ದರೆ ಸಿದ್ದು ಮೇಲೆ ಕ್ರಮ ಕೈಗೊಳ್ಳಲಿ| ಇಬ್ಬರೂ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ| ಕಾಂಗ್ರೆಸ್ ಮುಳುಗೋ ದೋಣಿಯ ಸ್ಥಿತಿಯಲ್ಲಿದೆ| ಕಾಂಗ್ರೆಸ್‌ ನಾಯಕರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಅಲ್ಲಿಗೆ ಹೋಗಿ ರಾಜಕೀಯ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ: ಈಶ್ವರಪ್ಪ| 

ಧಾರವಾಡ(ಜ.23): ನಮಗೆ ಪೂರ್ಣ ಪ್ರಮಾಣದ ಬಹುಮತ ಸಿಗಲಿಲ್ಲ, ಹೀಗಾಗಿ ವಲಸಿಗರೊಂದಿಗೆ ಸರ್ಕಾರ ರಚಿಸಿದ್ದೇವೆ. ಅವರಿಗೆಲ್ಲ ಸಚಿವ ಸ್ಥಾನ ನೀಡಿದ್ದೇವೆ. ಮುಂಚೆ ಕೆಲ ಗೊಂದಲವಿತ್ತು, ಇದೀಗ ಸಚಿವ ಸ್ಥಾನ ನೀಡಿದ ಬಳಿಕ ಗೊಂದಲ ನಿವಾರಣೆಯಾಗಿದೆ. ಸರ್ಕಾರ ಸುಭದ್ರವಾಗಿ ಅವಧಿ ಪೂರ್ಣಗೊಳಿಸುತ್ತದೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಸ್ಫೋಟ ಪ್ರಕರಣ ನನಗೆ ನಿಜವಾಗಿಯೂ ಆಶ್ಚರ್ಯವಾಗಿದೆ. ನಾನು ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿಯೇ, ಇದೇ ಮೊದಲು ಇಂಥಹ ಘಟನೆ ಯಾವತ್ತೂ ನಡೆದಿರಲಿಲ್ಲ. ನಿನ್ನೆ ತಜ್ಞರು ಬಂದಿದ್ದಾರೆ, ಅವರ ವರದಿ ಬಂದ ಬಳಿಕ ಕ್ರಮನ ತೆಗೆದುಕೊಳ್ಳಲಾಗುತ್ತಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಿದ್ದಾರೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಎರಡು ಹಂತದ ಪಂಚಾಯತರಾಜ್ ವ್ಯವಸ್ಥೆ ಸೂಕ್ತ: ಸಚಿವ ಈಶ್ವರಪ್ಪ

ಸಿದ್ದರಾಮುಯ್ಯ ಸಿಎಂ ಆಗೋದಾಗಿ ಹೇಳಿಕೆ ನೀಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೆ.ಎಸ್‌. ಈಶ್ವರಪ್ಪ, ಡಿಕೆಶಿಗೆ ಧಮ್ ಇದ್ದರೆ ಸಿದ್ದು ಮೇಲೆ ಕ್ರಮ ಕೈಗೊಳ್ಳಲಿ, ಇಬ್ಬರೂ ಸಿಎಂ ಆಗುವ ಹಗಲು ಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಮುಳುಗೋ ದೋಣಿಯ ಸ್ಥಿತಿಯಲ್ಲಿದೆ. ಪಕ್ಷದ ನಾಯಕರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ಅಲ್ಲಿಗೆ ಹೋಗಿ ರಾಜಕೀಯ ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.