ಬೆಂಗಳೂರು, (ಸೆ.28): ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಕೊರೋನಾ ಸೊಂಕು ತಗುಲಿದೆ.

ಇಂದು (ಸೋಮವಾರ) ಸಚಿವ ಮಾಧುಸ್ವಾಮಿಗೂ ಕೋವಿಡ್​ ಸೋಂಕು ತಗುಲಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾಧುಸ್ವಾಮಿ ಅವರು ಅಧಿವೇಶನದಲ್ಲಿ ಪಾಲ್ಗೊಂಡಿದ್ದು, ಹಲವು ನಾಯಕರುಗಳು ಆತಂಕದಲ್ಲಿದ್ದಾರೆ. 

ಗದಗ: ಕಾಂಗ್ರೆಸ್‌ ಹಿರಿಯ ನಾಯಕ ಹೆಚ್.ಕೆ. ಪಾಟೀಲ್‌ಗೆ ಕೊರೋನಾ

 ಭಾನುವಾರಷ್ಟೇ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ಗೂ ಕೊರೋನಾ ಟೆಸ್ಟ್​ ವರದಿ ಪಾಸಿಟಿವ್​ ಬಂದಿದ್ದರಿಂದ ಅವರು ಹೋಂ ಐಸೋಲೇಶನ್​ಗೆ ಒಳಪಟ್ಟಿದ್ದಾರೆ. ಇನ್ನು ಸೋಮವಾರ ಕಾಂಗ್ರೆಸ್​ನ ಹಿರಿಯ ಶಾಸಕ ಎಚ್​.ಕೆ. ಪಾಟೀಲ್​ ಕೂಡ, 'ನನಗೆ ಕರೊನಾ ತಗುಲಿದೆ' ಎಂದು ಸೋಮವಾರ ಬೆಳಗ್ಗೆ ಟ್ವೀಟ್​ ಮೂಲಕ ತಿಳಿಸಿದ್ದರು.