ಶಾಸಕ ಹೆಚ್.ಕೆ. ಪಾಟೀಲ್‌ಗೆ ಕೊರೋನಾ ದೃಢ| ಗದಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ| ಕೊರೋನಾ ದೃಢಪಟ್ಟ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡ ಹೆಚ್.ಕೆ. ಪಾಟೀಲ್‌| ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್‌| 

ಗದಗ(ಸೆ.28): ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ, ಹಾಲಿ ಶಾಸಕ ಹೆಚ್.ಕೆ. ಪಾಟೀಲ್‌ ಅವರಿಗೆ ಕೊರೋನಾ ದೃಢಪಟ್ಟಿದೆ. 

ಈ ಬಗ್ಗೆ ಸ್ವತಃ ಹೆಚ್‌.ಕೆ. ಪಾಟೀಲ್‌ ಅವರೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಯಾವುದೇ ರೋಗದ ಲಕ್ಷಣಗಳು ಇಲ್ಲದಿದ್ದರೂ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೇ 10 ದಿನಗಳ ಸ್ವಯಂ ಕ್ವಾರಂಟೈನ್‌ ಆಗುತ್ತೇನೆ ಎಂದು ತಿಳಿಸಿದ್ದಾರೆ.

'ಪಿಂಚಣಿ ಹಣ ನೇರವಾಗಿ ಅರ್ಹರ ಬ್ಯಾಂಕ್‌ ಖಾತೆಗೆ'

Scroll to load tweet…

ನಿಮ್ಮೆಲ್ಲ ಹಾರೈಕೆ ಪ್ರೀತಿ ವಿಶ್ವಾಸದಿಂದ ಕೋವಿಡ್‌ ವೈರಸ್‌ನಿಂದ ಬೇಗನೆ ಗುಣಮುಖನಾಗಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೋ ಅವರೆಲ್ಲರೂ ಕೋವಿಡ್‌ ಟೆಸ್ಟ್ ಮಾಡಿಸಿಕೊಳ್ಳಿ ಎಂದು ವಿನಂತಿಸಿಕೊಂಡಿದ್ದಾರೆ.