ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನಿಂದ ಪಾದಯಾತ್ರೆ?: ಸಚಿವ ಎಚ್.ಕೆ.ಪಾಟೀಲ್

ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಿಎಂ ತಮ್ಮ ಮೇಲೆ ಆಪಾದನೆ ಬಂದಾಗ ಜುಡಿಷಿಯಲ್ ಕಮಿಷನ್ ಮಾಡಿದ್ರು ಹೇಳಿ ಎಂದು ಮಾಧ್ಯಮದವವರನ್ನೇ ಪ್ರಶ್ನೆ ಮಾಡಿದರು.

minister hk patil slams on bjp and jds over padayatre issue gvd

ಬಾಗಲಕೋಟೆ (ಆ.04): ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನವರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಿಎಂ ತಮ್ಮ ಮೇಲೆ ಆಪಾದನೆ ಬಂದಾಗ ಜುಡಿಷಿಯಲ್ ಕಮಿಷನ್ ಮಾಡಿದ್ರು ಹೇಳಿ ಎಂದು ಮಾಧ್ಯಮದವವರನ್ನೇ ಪ್ರಶ್ನೆ ಮಾಡಿದ ಸಚಿವರು, ದೇವೇಗೌಡರು, ಯಡಿಯೂರಪ್ಪ, ಜಗದೀಶ ಶೆಟ್ಟರ ಅವರ ಮೇಲೆ ಆಪಾದನೆ ಬಂದಾಗ ಜುಡಿಷಿಯಲ್ ಕಮಿಷನ್ ಮಾಡಿದ್ರಾ? 

ಜುಡಿಷಿಯಲ್ ಕಮಿಷನ್ ಮಾಡಿದಂತ ಸಿದ್ದರಾಮನವರ ವಿರುದ್ಧ ಪಾದಯಾತ್ರೆ ಮಾಡೋದಾ ಅದು ರಾಜಕೀಯವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಭವನ ದುರುಪಯೋಗ ಮಾಡಿಕೊಳ್ಳುವ ಕೆಲಸ ನಡೆದಿದೆ. ಗೌವರ್ನರ್ ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ. ಏನು ಕಾರಣ, ಒಂದೇ ದಿನ ಕಂಪ್ಲೇಂಟ್ ಮಾಡ್ತಾರೆ. ಒಂದೇ ದಿನ ಚೀಫ್‌ ಸೆಕ್ರೆಟರಿ ವರದಿ ಕೊಡ್ತಾರೆ. ಆದ್ರೆ ಅದೇ ಒಂದೇ ದಿನ ಶೋಕಾಸ್ ನೋಟಿಸ್ ನೀಡ್ತಾರೆ. ಆದರೆ ಜೊಲ್ಲೆ, ಜನಾರ್ಧನ ರೆಡ್ಡಿ, ನಿರಾಣಿ ಅವರ ಮೇಲೆ ಪ್ರಾಶುಕ್ಯೂಷನ್ ಕಂಪ್ಲೆಂಟ್ ಇತ್ತು. ಆಗ ಕೊಟ್ಟರಾ? 

ಸಿದ್ದರಾಮಯ್ಯನವರು ಯಾವುದೇ ಸಮಯದಲ್ಲಿ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು: ಸಂಸದ ಶೆಟ್ಟರ್

ರಾಜಭವನ ದುರುಪಯೋಗ ಸನ್ನಿವೇಶ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಮುಡಾ ಅದೊಂದು ಅಂಗಸಂಸ್ಥೆ, ಮುಡಾ ಮಾಡಿದ್ರೆ ಅವರ ಮೇಲೆ ಕಂಪ್ಲೇಂಟ್ ರಿಜಿಸ್ಟರ್ ಇರಬೇಕು. ಜಮೀನು ಕಳೆದುಕೊಂಡವರಿಗೆ ಕೊಟ್ಟಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳನ್ನು ಹೊಣೆ ಮಾಡೋದೇನಿದೆ. ಇದು ಕೇವಲ ರಾಜಕೀಯಕ್ಕಾಗಿ ಮಾಡುವ ಆಟ. ಸಿದ್ದರಾಮಯ್ಯನವರ ಸರ್ಕಾರ ಅಭದ್ರಗೊಳಿಸಲು ಹೊರಟಿದ್ದಾರೆ. ಅದು ಆಗಲ್ಲ, ಇದು ರಾಜಕೀಯವೇ ಹೊರತು ಮತ್ತೇನಿಲ್ಲ ಎಂದರು.

ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ: ಜಿಲ್ಲೆಯ ಐಡಿಬಿಐ ಬ್ಯಾಂಕ್‌ನಲ್ಲಿ ಪ್ರವಾಸೋದ್ಯಮ ಜಿಲ್ಲಾ ಅಭಿವೃದ್ಧಿ ಸಮಿತಿ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾದ ಬಗ್ಗೆ ಪ್ರಕರಣದ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಲ್ಲ ಸಮಸ್ಯೆಗಳಿಗೆ ಸನಾತನ ಧರ್ಮದಲ್ಲಿ ಪರಿಹಾರ: ಮೋಹನ್‌ ಭಾಗವತ್‌

ಜಿಲ್ಲೆಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡ ಸಚಿವರು ಈ ಪ್ರಕರಣದಲ್ಲಿ ಒಟ್ಟು ಬ್ಯಾಂಕಿನ 9 ನೌಕರರು ಹಾಗೂ 33 ಜನ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದು, ತನಿಖೆಯಿಂದ ತಿಳಿದು ಬಂದಿದೆ. ಬ್ಯಾಂಕಿನ ನೌಕರರ ಪೈಕಿ 3 ಜನ ಹಾಗೂ ಖಾಸಗಿ ವ್ಯಕ್ತಿ 6 ಜನ ಸೇರಿ ಒಟ್ಟು 9 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರನ್ನು ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios