ಅನ್ನಭಾಗ್ಯ ಹೆಸರಲ್ಲಿ ಹಿಂದುಳಿದವರಿಗೆ ಸಿದ್ದರಾಮಯ್ಯ ಅನ್ಯಾಯ: ಸಚಿವ ಕಾರಜೋಳ

*  ಪುಕ್ಕಟೆಯಾಗಿ ಎಷ್ಟು ಅಕ್ಕಿ ಕೊಟ್ಟರೂ ಅದರಿಂದ ದೀನ ದಲಿತರ ಉದ್ಧಾರ ಆಗಲ್ಲ
*  ಅಂಬೇಡ್ಕರ್‌ ಅವರನ್ನು ಸೋಲಿಸಿದವರೇ ಕಾಂಗ್ರೆಸ್‌ನವರು
*  ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬ ಕುರುಡು ಭಾವನೆ ಬಿತ್ತಲಾಗಿದೆ
 

Minister Govind Karjol Slams on Siddaramaiah grg

ಹಾನಗಲ್ಲ(ಅ.28):  ಅನ್ನಭಾಗ್ಯ ಹೆಸರಿನಲ್ಲಿ ಸಿದ್ದರಾಮಯ್ಯ(Siddaramaiah) ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ಹೇಳಿದ್ದಾರೆ. 

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಕ್ಕಟೆಯಾಗಿ ಎಷ್ಟು ಅಕ್ಕಿ ಕೊಟ್ಟರೂ ಅದರಿಂದ ದೀನ ದಲಿತರ(Dalit) ಉದ್ಧಾರ ಆಗಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕಾಗುತ್ತದೆ ಎಂದರು. ಅಷ್ಟಕ್ಕೂ ಅನ್ನಭಾಗ್ಯ ಯೋಜನೆ ಮೂಲ ಬಿಜೆಪಿಯದ್ದು(BJP). ಪ್ರಸ್ತುತ ಅಕ್ಕಿಯನ್ನು ಪುಕ್ಸಟ್ಟೆಯಾಗಿ ಕೇಂದ್ರ ಸರ್ಕಾರ(Central Government) ಕೊಡುತ್ತಿದೆ. ರಾಜ್ಯದಿಂದ ಹೆಚ್ಚಿನ ಖರ್ಚನ್ನು ಕೊಡಲಾಗುತ್ತಿಲ್ಲ. ಅನ್ನಭಾಗ್ಯ ಹೆಸರಿನಲ್ಲಿ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ. ಪುಕ್ಸಟ್ಟೆ ಅಕ್ಕಿ(Rice) ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಕ್ಷೀರಭಾಗ್ಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಹಾಲಿಗೆ ಪ್ರೋತ್ಸಾಹಧನ ನೀಡಲು ಶುರು ಮಾಡಿ ರೈತರ(Farmers) ಕೈ ಬಲಪಡಿಸಿದ್ದು ಯಡಿಯೂರಪ್ಪ(BS Yediyurappa). ಕೃಷಿ ಭಾಗ್ಯ ಯೋಜನೆ ರೂಪಿಸಿ ರೈತರಿಗೆ ಬಡ್ಡಿ ಇಲ್ಲದೆ ಸಾಲ(Loan) ಕೊಡುವ ವ್ಯವಸ್ಥೆ ಮಾಡಿದ್ದು ಯಡಿಯೂರಪ್ಪ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ(Freedom) ಬಂದ ಆನಂತರ 60 ವರ್ಷ ಕಾಂಗ್ರೆಸ್‌(Congress) ಆಡಳಿತ ಮಾಡಿದರೂ ದೀನ ದಲಿತರು, ಅಲ್ಪಸಂಖ್ಯಾತರ(Minorities), ರೈತರ ಅಭಿವೃದ್ಧಿ ಆಗಲಿಲ್ಲ. ಈಗ ಅಲ್ಪಸಂಖ್ಯಾತರನ್ನು ಭಯದಲ್ಲಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಹಿಂದುಳಿದವರು ಬುದ್ಧಿವಂತರಾಗಬಾರದು, ಬೆಳೆಯಬಾರದು ಎಂಬ ಉದ್ದೇಶವಿದೆ ಎಂದು ಕಿಡಿ ಕಾರಿದರು.

ಹಾನಗಲ್‌ ಉಪಸಮರ: ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್‌, ಸಿಎಂ ಬೊಮ್ಮಾಯಿ

ಕಾಂಗ್ರೆಸ್‌ ಸುಳ್ಳು ಹೇಳಿಕೊಳ್ಳುವುದು ಬಿಟ್ಟರೆ ಏನೂ ಸಾಧನೆ ಮಾಡಿಲ್ಲ. ಹೀಗಾಗಿ ಕೆಟ್ಟಮಾತು, ವೈಯಕ್ತಿಕ ವಿಚಾರದ ಹೇಳಿಕೆ ನೀಡುತ್ತಿದ್ದಾರೆ. ನೀವೇನು ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಮುಂಗೈ ಹಿಡಿದು ಪ್ರಶ್ನಿಸಿ ಎಂದು ಕಾರಜೋಳ ಜನತೆಗೆ ಕರೆಕೊಟ್ಟರು.

ಅಂಬೇಡ್ಕರ್‌(BR Ambedkar) ಅವರನ್ನು ಸೋಲಿಸಿದವರೆ ಕಾಂಗ್ರೆಸ್‌ನವರು. ನೆಹರೂ ಅವರಿಗೆ ಪಿಎಂ ಪಟ್ಟತಪ್ಪುವ ಬಗ್ಗೆ ಭಯವಿತ್ತು. ಕೊನೆಗೆ ಅಂಬೇಡ್ಕರ್‌ ಅವರ ಸಮಾಧಿ(Grave) ಮಾಡಲು ಜಾಗ ಕೊಡದಂತೆ ದುರಾಡಳಿತ ಮಾಡಿದರು. ಜಗಜೀವನ್‌ ರಾಮ್‌ ಅವರನ್ನು ಸೋಲಿಸಿದರು. ಈ ಪ್ರಶ್ನೆಗಳಿಗೆ ಕಾಂಗ್ರೆಸ್‌ ಉತ್ತರ ಹೇಳಲಿ ಎಂದು ಹೇಳಿದರು.

ಕಾಂಗ್ರೆಸಿಗರು ಎಂದೂ ಅಲ್ಪಸಂಖ್ಯಾತರನ್ನು ಮನುಷ್ಯರನ್ನಾಗಿ ನೋಡಿಲ್ಲ. ಸಿ.ಎಂ. ಇಬ್ರಾಹಿಂ ಅವರನ್ನು ಕಾಮಿಡಿ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಮುಸ್ಲಿಮರು(Muslim) ದೇಶಾಭಿಮಾನದಿಂದ ಭಾರತದಲ್ಲಿ(India) ಉಳಿದುಕೊಂಡಿದ್ದಾರೆ. ಆದರೆ ಕಾಂಗ್ರೆಸ್‌ ಅವರನ್ನು ಬೀದಿಗೆ ಬಿಟ್ಟರು. ಅಲೆಮಾರಿ ರೀತಿಯಲ್ಲಿ ಕಂಡರು. ಆದರೆ, ಬಿಜೆಪಿ ಮನುಷ್ಯರನ್ನು ಮನುಷ್ಯರಾಗಿ ನೋಡುತ್ತದೆ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂಬ ಕುರುಡು ಭಾವನೆ ಬಿತ್ತಲಾಗಿದೆ. ಅದರಿಂದ ಹೊರಬನ್ನಿ ಎಂದು ಸಚಿವ ಕಾರಜೋಳ ಹೇಳಿದರು. ಈ ಚುನಾವಣೆಯನ್ನು(Election) 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಎನ್‌. ಮಹೇಶ್‌, ಶಾಸಕರಾದ ದೊಡ್ಡನಗೌಡ ಪಾಟೀಲ್‌, ದುರ್ಯೋಧನ ಐಹೊಳೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ, ಮಲ್ಲೇಶಪ್ಪ ಹರಿಜನ, ಡಿ.ಡಿ. ಮಾಳಗಿ ಮತ್ತಿತರರು ಇದ್ದರು.
 

Latest Videos
Follow Us:
Download App:
  • android
  • ios