ಸಿದ್ದರಾಮಯ್ಯ ಈ ಬಾರಿ ಎಲ್ಲಿ ನಿಂತರೂ ಸೋಲುತ್ತಾರೆ: ಸಚಿವ ಕಾರಜೋಳ

ಸಾಮಾಜಿಕ ನ್ಯಾಯದಡಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಸಂವಿಧಾನದ ಆಶಯದಡಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಶಿಫಾರಸು ಮಾಡಿದ್ದಾರೆ ಎಂದ ಅವರು, ಕಳೆದ 60 ವರ್ಷಗಳಿಂದ ಅ​ಧಿಕಾರ ಮಾಡಿದವರು ಏನೂ ಮಾಡಲೇ ಇಲ್ಲ. ಆದರೆ ನಮ್ಮ ಸಿಎಂ ಬೊಮ್ಮಾಯಿ ಅವರು ಇದನ್ನು ಮಾಡಿದ್ದಾರೆ: ಕಾರಜೋಳ

Minister Govind Karjol Slams Former CM Siddaramaiah grg

ಬಾಗಲಕೋಟೆ(ಮಾ.28): ಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಜಯಭೇರಿ ಬಾರಿಸಲಿದ್ದು, ನಾವೇ ಮತ್ತೊಮ್ಮೆ ಅ​ಧಿಕಾರಕ್ಕೆ ಬರುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಸ್ವಾಸ ವ್ಯಕ್ತಪಡಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತವನ್ನು ತುಂಡು ತುಂಡು ಮಾಡಿದವರೇ ಇಂದು ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ, ಇದೆಲ್ಲ ಹಾಸ್ಯಾಸ್ಪದ ಎಂದರು.

ಸಾಮಾಜಿಕ ನ್ಯಾಯದಡಿ ಮೀಸಲಾತಿ ಹಂಚಿಕೆ:

ಮೀಸಲಾತಿ ವಿಚಾರವಾಗಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಡಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಸಂವಿಧಾನದ ಆಶಯದಡಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಶಿಫಾರಸು ಮಾಡಿದ್ದಾರೆ ಎಂದ ಅವರು, ಕಳೆದ 60 ವರ್ಷಗಳಿಂದ ಅ​ಧಿಕಾರ ಮಾಡಿದವರು ಏನೂ ಮಾಡಲೇ ಇಲ್ಲ. ಆದರೆ ನಮ್ಮ ಸಿಎಂ ಬೊಮ್ಮಾಯಿ ಅವರು ಇದನ್ನು ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್‌ನವರಿಗೆ ಹೊಟ್ಟೆಉರಿಯಾಗಿ ಭಯ ಶುರುವಾಗಿದೆ. ಕೆಳವರ್ಗದ ಜನ ನಮ್ಮನ್ನು ಕೈಬಿಡುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಹೇಳುತ್ತಿದ್ದಾರೆ. ಮುಸ್ಲಿಂರಿಗೂ ನ್ಯಾಯಯುತವಾಗಿ ಮೀಸಲಾತಿ ನೀಡಲಾಗಿದೆ. ಮೀಸಲಾತಿಗಾಗಿ ಹೋರಾಟ ಮಾಡಿದ ಸಮುದಾಯದವರಿಗೆ ಮೀಸಲಾತಿ ಕೊಡುವ ಕೆಲಸವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಡಿದ್ದಾರೆ. ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಇಲ್ಲಾ. ಮೀಸಲಾತಿ ಇರುವುದು ಶೋಷಣೆಗೆ ಒಳಗಾದವರಿಗೆ. ಹೀಗಾಗಿ, ಸರ್ಕಾರ ಅಂಥವರಿಗೆ ಸರ್ಕಾರ ಮೀಸಲಾತಿ ನೀಡಿದೆ ಎಂದು ಕಾರಜೊಳ ತಿಳಿಸಿದರು.

ಬಾಗಲಕೋಟೆ: ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆ

ಸಿದ್ದರಾಮಯ್ಯ ಈ ಬಾರಿ ಎಲ್ಲಿ ನಿಂತರೂ ಸೋಲುತ್ತಾರೆ:

ವಿಜಯೇಂದ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ವಿಜಯೇಂದ್ರ ಅವರು ಎಲ್ಲಿ ನಿಲ್ಲಬೇಕು ಎಂದು ಹೈಕಮಾಂಡ್‌ನವರು ತೀರ್ಮಾನ ಮಾಡುತ್ತಾರೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಎಲ್ಲಿ ನಿಂತರೂ ಸೋಲುತ್ತಾರೆ. ಅವರು 45 ವರ್ಷ ರಾಜಕಾರಣದಲ್ಲಿ ಇದ್ದರೂ ಕೂಡ ಒಂದೂ ಸೇಫ್‌ ಕ್ಷೇತ್ರ ಸಿಗುತ್ತಿಲ್ಲ ಎಂದರೆ ಅದಕ್ಕಿಂತ ದೊಡ್ಡ ದೌರ್ಬಲ್ಯ ಬೇರೆ ಇಲ್ಲ. ಕಾಂಗ್ರೆಸ್‌ನ ಎಲ್ಲರಿಗೂ ನೂರಕ್ಕೆ ನೂರರಷ್ಟುಸೋಲಿನ ಭೀತಿ ಕಾಡುತ್ತಿದೆ ಎಂದು ಹೇಳಿದರು.

ಕುರ್ಚಿಯ ಚಿಂತೆಯಲ್ಲಿ ಕಾಂಗ್ರೆಸ್‌:

ಕಾಂಗ್ರೆಸ್‌ ನವರಿಗೆ ಜನರ ಅಭಿವೃದ್ಧಿ ಚಿಂತೆ ಇಲ್ಲ. ಅವರಿಗೆ ಕುರ್ಚಿಯ ಚಿಂತೆ ಇದೆ. ನಾನು ಮುಖ್ಯಮಂತ್ರಿ ಆಗಬೇಕು ಅಂತಾ 93 ವರ್ಷದ ಶಾಮನೂರ ಶಿವಶಂಕರಪ್ಪ, 83 ವರ್ಷದ ಮಲ್ಲಿಕಾರ್ಜುನ ಖರ್ಗೆ, 78 ವರ್ಷದ ಸಿದ್ದರಾಮಯ್ಯ. ನಾನು ಪಕ್ಷಕ್ಕೆ ದುಡಿದಿದ್ದೇನೆ ಅಂತ ಡಾ.ಜಿ.ಪರಮೇಶ್ವರ, ಎಂ.ಬಿ.ಪಾಟೀಲ, ಡಿಕೆಶಿ ಎಲ್ಲರೂ ಮುಖ್ಯಮಂತ್ರಿ ಆಗಬೇಕು ಎಂಬ ರೇಸ್‌ನಲ್ಲಿ ಕುಳಿತಿದ್ದಾರೆ. ಅದರಲ್ಲೂ ಈಗಾಗಲೇ ಕಾಂಗ್ರೆಸ್‌ನ ಮೂರು ಮಂದಿ ಮುಖ್ಯಮಂತ್ರಿ ಆದ ಮೇಲೆ ಧರಿಸಲು ಅಂಗಿ-ಚಡ್ಡಿ ಹೊಲಿಸಿಕೊಂಡು ಕುಳಿತ್ತಿದ್ದಾರೆ ಎಂದು ಸಚಿವ ಕಾರಜೋಳ ವ್ಯಂಗ್ಯವಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios