ಬಾಗಲಕೋಟೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅಧಿಕಾರದಲ್ಲಿ ಇದ್ದಾಗ, ಇಲ್ಲದಾಗಲೂ ಸದಾ ಜನಪರ ಇದ್ದು, ರೈತರ ಬೆಳೆಗಳಿಗೆ ನೀರು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಹೀಗಾಗಿ, ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಆಶೀರ್ವಾದಿಸಬೇಕು ಎಂದು ಮನವಿ ಮಾಡಿದ ಎಚ್.ವೈ.ಮೇಟಿ.
ಬಾಗಲಕೋಟೆ(ಮಾ.28): ಸರ್ವಜನಾಂಗದ ಏಳಿಗೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಎಚ್.ವೈ.ಮೇಟಿ ಹೇಳಿದರು. ಬಾಗಲಕೋಟೆ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಹಿರೇಗುಳಬಾಳ ಗ್ರಾಮದ 20ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದ ಅವರು, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಅಧಿಕಾರದಲ್ಲಿ ಇದ್ದಾಗ, ಇಲ್ಲದಾಗಲೂ ಸದಾ ಜನಪರ ಇದ್ದು, ರೈತರ ಬೆಳೆಗಳಿಗೆ ನೀರು ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಹೀಗಾಗಿ, ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ನನಗೆ ಆಶೀರ್ವಾದಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಬಿಜೆಪಿ ಪಕ್ಷದವರು ಹೇಳುವ ಸುಳ್ಳು ಭರವಸೆಗಳನ್ನು ನಂಬಬೇಡಿ, ಇಲ್ಲಿಯವರಿಗೂ ಅಭಿವೃದ್ಧಿ ಮಾಡದೇ ಚುನಾವಣೆ ಹತ್ತಿರದಲ್ಲಿದ್ದಾಗ ಅಭಿವೃದ್ಧಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಜ್ಜನಿಕೆಯ ಎಚ್.ವೈ.ಮೇಟಿ ಅವರನ್ನು ಬೆಂಬಲಿಸಬೇಕು ಎಂದರು.
ಮುಖ್ಯಮಂತ್ರಿ ಆಗೋದಕ್ಕೆ ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಮೂವರೂ ಚಡ್ಡಿ ಹೊಲಿಸಿಕೊಂಡು ಕೂತಾರ: ಸಚಿವ ಕಾರಜೋಳ ವ್ಯಂಗ್ಯ
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಾಗರಾಜ ಹದ್ಲಿ ಮಾತನಾಡಿ, ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ನೀರಿಕ್ಷಿಸಲು ಸಾಧ್ಯವಿಲ್ಲ. ಅದು ಏನಿದ್ದರೂ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. 2023ಕ್ಕೆ ಬಿಜೆಪಿ ಸೋಲು ಖಚಿತ ಎಂದರು.
ಹಿರೇಗುಳಬಾಳ ತಾಂಡಾದ ಹಿರಿಯರಾದ ಸುಭಾಸ್ ತಾರಾಸಿಂಗ್ ರಾಠೋಡ, ಭೀಮಪ್ಪ ರಾಠೋಡ, ಮಂಗಲಪ್ಪ ರಾಠೋಡ, ರಮೇಶ ಚವ್ಹಾಣ ಸೇರಿದಂತೆ 20 ಕ್ಕೂ ಹೆಚ್ಚು ಕಾರ್ಯಕರ್ತರು ಇವರ ನೇತೃತ್ವದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಮುಖಂಡರಾದ ಉಮೇಶ ಮೇಟಿ, ಮುತ್ತಪ್ಪ ಹುಗ್ಗಿ, ವಿಜಯಕುಮಾರ ನಾಯಕ, ಗ್ರಾಮೀಣ ಅಧ್ಯಕ್ಷ ಎಸ್.ಎನ್. ರಾಂಪೂರ, ಬಲರಾಂ ಲಮಾಣಿ, ಸಂತೋಷ ಲಮಾಣಿ, ವಿನೋದ ಕಾರಬಾರಿ, ಬಾಬು ರಾಠೋಡ, ಸೀತಾರಾಮ ಲಮಾಣಿ ಸೇರಿದಂತೆ ಹಲವರು ಇದ್ದರು.