ಮೋದಿ ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳೋದು ದುರಂತ: ಸಚಿವ ಖಂಡ್ರೆ
ಬಿಜೆಪಿ ಪಕ್ಷ ಯಾವತ್ತಿಗೂ ಹಿಂಬಾಗಿಲಿನಿಂದ ರಚನೆಯಾಗಿದೆ. ಆಪರೇಷನ್ ಕಮಲದಿಂದ ಎಷ್ಟೊಂದು ಅನಾಹುತ ಆಗಿದೆ. ಎಲ್ಲರಿಗೂ ಗೊತ್ತಿದೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲ ಅರಿತು ಕರ್ನಾಟಕದಲ್ಲಿ ಅವರನ್ನ ಧೂಳಿಪಟ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ: ಸಚಿವ ಈಶ್ವರ ಖಂಡ್ರೆ
ಬೀದರ್(ನ.07): ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯೇಕ ವಿಚಾರವಾಗಿ ಇನ್ನೊಂದು ಚಿರತೆ ಕಾರ್ಯಪಡೆ ರಚನೆಗೆ ಸೂಚನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ನುಡಿದರು.
ಅವರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಅಲ್ಲಿರುವ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ನಾವು ಅರಣ್ಯದ ಕಡೆಗೆ ಹೋಗುತ್ತಿದ್ದೇವೆ, ಬಹಳಷ್ಟು ನಗರೀಕರಣ ಆಗುತ್ತಿದೆ. ಇದರಿಂದ ಅನೇಕ ರೀತಿಯ ಸಮಸ್ಯೆಗಳು ಇವೆ ಶಾಶ್ವತವಾದ ಪರಿಹಾರಕ್ಕೆ ಸರ್ಕಾರ ಎಲ್ಲಾ ರೀತಿ ಕ್ರಮ ಜರುಗಿಸುತ್ತಿದೆ. ಅರಣ್ಯ ಇಲಾಖೆ ಎಲ್ಲಾ ಅಧಿಕಾರಿಗಳು ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇದ್ದಾರೆ. ಈ ಪ್ರಕರಣವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ಪ್ರಧಾನಿಯ ಆಪರೇಷನ್ ಕಮಲ ಹೇಳಿಕೆ ದುರಂತ
ಒಬ್ಬ ಪ್ರಧಾನಿಯಾಗಿ ಆಪರೇಷನ್ ಕಮಲ ಮಾಡುತ್ತೇವೆಂದು ಹೇಳುತ್ತಿರೋದು ಅತ್ಯಂತ ದುರಂತ. ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಹತಾಶ ಭಾವನೆಯಿಂದ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.
ಬಿಜೆಪಿ ಪಕ್ಷ ಯಾವತ್ತಿಗೂ ಹಿಂಬಾಗಿಲಿನಿಂದ ರಚನೆಯಾಗಿದೆ. ಆಪರೇಷನ್ ಕಮಲದಿಂದ ಎಷ್ಟೊಂದು ಅನಾಹುತ ಆಗಿದೆ. ಎಲ್ಲರಿಗೂ ಗೊತ್ತಿದೆ ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ ಆಯ್ತು, ರಾಜಸ್ಥಾನದಲ್ಲೂ ಪ್ರಯತ್ನ ಮಾಡಿದ್ದಾರೆ. ಅವರಿಗೆ ಜನ ಬೆಂಬಲ ಇಲ್ಲ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಜನ ಎಲ್ಲ ಅರಿತು ಕರ್ನಾಟಕದಲ್ಲಿ ಅವರನ್ನ ಧೂಳಿಪಟ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ ಎಂದರು.