ಯತ್ನಾಳ ಒಬ್ಬ ಜೋಕರ್, ಮಾನಸಿಕ ರೋಗಿ: ಸಚಿವ ಖಂಡ್ರೆ ಕಿಡಿ

ಜಿಲ್ಲೆಯಲ್ಲಿ ನಡೆದ ವಕ್ಫ್ ಬೋರ್ಡ್ ವಿರುದ್ಧ ಜನ ಜಾಗೃತಿ ಹೋರಾಟ ಸಮಾವೇಶದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಿ‌ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಈಶ್ವರ್ ಖಂಡ್ರೆ ಕಿಡಿಕಾರಿದಾರೆ.

Minister Eshwar khandre outraged against bjp mla basangowda patil yatnal at bidar rav

ವರದಿ- ಲಿಂಗೇಶ್ ಮರಕಲೆ

ಬೀದರ್: ಜಿಲ್ಲೆಯಲ್ಲಿ ನಡೆದ ವಕ್ಫ್ ಬೋರ್ಡ್ ವಿರುದ್ಧ ಜನ ಜಾಗೃತಿ ಹೋರಾಟ ಸಮಾವೇಶದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಿ‌ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಈಶ್ವರ್ ಖಂಡ್ರೆ ಕಿಡಿಕಾರಿದಾರೆ.

ಬೀದರ್‌ನಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ ಯತ್ನಾಳ‌ ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ, ಬಸವಣ್ಣನವರು ಹೊಳೆಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ, ಸಂಘಿಗಳ (ಆರ್‌ಎಸ್‌ಎಸ್) ಮನವೊಲಿಸಲು ಈ ರೀತಿ ಹೇಳಿಕೆಗಳನ್ನ ಯತ್ನಾಳ ನೀಡುತ್ತಿರೊದು ಖಂಡನೀಯ. ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಕ್ಕಾಗಿ ಪ್ರತಿಭಟನೆಯ ನಾಟಕ ಮಾಡ್ತಿರೋದು ಖಂಡನೀಯ. ಪ್ರತಿಭಟನೆಯ ನೆಪದಲ್ಲಿ ಬಿಜೆಪಿಯವರು ನಾಟಕ ಮಾಡ್ತಾ ಇದ್ದಾರೆ. ಯತ್ನಾಳ ಹೇಳಿಕೆ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ ಎಂದರು.

ಬಸವಣ್ಣನವರ 'ಅನುಭವ ಮಂಟಪ' ಈಗ ವಕ್ಫ್ ಆಸ್ತಿ: ಯತ್ನಾಳ್ ಸ್ಫೋಟಕ ಹೇಳಿಕೆ!

ಯತ್ನಾಳ ಅವರಿಗೆ ವಿನಾಶ ಕಾಲೆ ವಿಪರೀತ ಬುದ್ದಿ ಬಂದಿದೆ.

ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವ, ಅವರ ಕುರಿತಾಗಿ ಮಾತನಾಡಿರೋ ಯತ್ನಾಳ ಹೇಳಿಕೆಯನ್ನ ಖಂಡಿಸುತ್ತೇವೆ, ಬಿಜೆಪಿ ಅವರಿಗೆ ಬಸವಣ್ಣನವರ ಮತ ಬೇಕು, ಆದ್ರೆ ಲಘುವಾಗಿ ಮಾತನಾಡಿರೋ ಯತ್ನಾಳ ವಿರುದ್ದ ತುಟಿ ಬಿಚ್ಚುತ್ತಿಲ್ಲ ಬಿಜೆಪಿ ಅವಧಿಯಲ್ಲೇ ಅತಿಹೆಚ್ಚು ದೇವಾಲಯ, ರೈತರಿಗೆ ವಕ್ಫ್‌ಬೋರ್ಡ್ ನೊಟೀಸ್ ಹೋಗಿದೆ. ಹೋರಾಟದ ಮೂಲಕ ಬಡರೈತರನ್ನ ಬಲಿಪಶು‌ ಮಾಡೋಕೆ ಬಿಜೆಪಿ ಹೊರಟಿದೆ. ಯತ್ನಾಳರ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಚೂ ಬಿಟ್ಟಿದೆ ಎಂದು ಬೀದರ್ ನಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಯತ್ನಾಳ ವಿರುದ್ದ ಸಚಿವ ಈಶ್ವರ್ ಖಂಡ್ರೆ ಕೆಂಡಕಾರಿದಾರೆ.

Latest Videos
Follow Us:
Download App:
  • android
  • ios