Asianet Suvarna News Asianet Suvarna News

ಕಾಂಗ್ರೆಸ್‌ ಸಾಧನೆ ಬಿಜೆಪಿಗರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿದೆ. ಸಿಎಂ ಸಿದ್ರಾಮಯ್ಯನವರ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ನುಡಿದಂತೆ ನಡೆಯುತ್ತಿದೆ. ಪ್ರತಿಮನೆ ಒಡತಿಗೆ ತಿಂಗಳಿಗೆ ₹2 ಸಾವಿರ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, 10 ಕೆ.ಜಿ. ಅಕ್ಕಿ ಬದಲು 5 ಕೆಜಿ ಇನ್ನೂ 5 ಕೆಜಿ ಬದಲು ಹಣವನ್ನು ನೀಡಲಾಗುತ್ತಿದೆ: ಸಚಿವ ಡಾ.ಶರಣಪ್ರಕಾಶ್ ಪಾಟೀಲ್ 

Minister Dr Sharanprakash Patil Slams BJP grg
Author
First Published Dec 26, 2023, 12:07 PM IST

ಆಳಂದ(ಡಿ.26):  ಚುನಾವಣೆ ಪೂರ್ವ ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದರಲ್ಲಿ ನಾಲ್ಕು ಭರವಸೆಗಳನ್ನು ಈಡೇರಿಸುವ ಮೂಲಕ ಬಡವರಿಗೆ ಹಣವನ್ನು ಕೊಟ್ಟರೆ ಬಿಜೆಪಿಗರಿಗೆ ಅರಗಿಸಿಕೊಳ್ಳಲಾಗದೇ ಟೀಕೆಯಲ್ಲಿ ತೋಡಗಿದ್ದಾರೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಬಿಜೆಪಿಗರ ವಿರುದ್ಧ ತೀವ್ರ ತರಾಟೆಗೆ ತೆಗೆದುಕೊಂಡರು. ಆಳಂದ ತಾಲೂಕಿನ ನಿರಗುಡಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್) ಅಡಿಯ 1.14 ಕೋಟಿ ರುಪಾಯಿ ವೆಚ್ಚದ ನೂತನ ಕಟ್ಟಡ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿಗಳನ್ನು ಈಡೇರಿಸಲು ಮುಂದಾಗಿದೆ. ಸಿಎಂ ಸಿದ್ರಾಮಯ್ಯನವರ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ. ದೊಡ್ಡ ಪ್ರಮಾಣದಲ್ಲಿ ನುಡಿದಂತೆ ನಡೆಯುತ್ತಿದೆ. ಪ್ರತಿಮನೆ ಒಡತಿಗೆ ತಿಂಗಳಿಗೆ ₹2 ಸಾವಿರ, ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, 10 ಕೆ.ಜಿ. ಅಕ್ಕಿ ಬದಲು 5 ಕೆಜಿ ಇನ್ನೂ 5 ಕೆಜಿ ಬದಲು ಹಣವನ್ನು ನೀಡಲಾಗುತ್ತಿದೆ.

ಅಂಬರೀಷ್ ಸಹ ವಿಲನ್ ಇದ್ರು ನಂತ್ರ ಹೀರೋ ಆದ್ರು, ನಾನು ಹಾಗೇ ಆಗುತ್ತೇನೆ: ಯತ್ನಾಳ್‌

5ನೇ ಭರವಸೆ ನಿರುದ್ಯೋಗಿ ವಿಧಾವಂತರಿಗೆ ನಿರುದ್ಯೋಗ ಭತ್ಯೆ ನೀಡುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಸಿಎಂ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಶಯವಾಗಿದೆ. ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಸುಳ್ಳು ಭರವಸೆ ಕೊಟ್ಟು ಅಧಿಕಾರ ನಡೆಸಿ ಜನತೆ ಮೊಸ ಮಾಡಿದೆ.

ಆದರೆ ಕಾಂಗ್ರೆಸ್ ಸರ್ಕಾರ ಬಡವರಿಗೆ ಹಣ ಕೊಡುವುದು ಅರಗಿಸಿಕೊಳ್ಳಲಾಗದೆ ಬಿಜೆಪಿಗರು ಟೀಕೆಯಲ್ಲಿ ತೊಟಗಿದ್ದಾರೆ. ಕ್ಷೇತ್ರದಲ್ಲಿ ಬಿ.ಆರ್. ಪಾಟೀಲರವರು ಒಳ್ಳೆಯ ಅಭಿವೃದ್ಧಿಯ ಶಾಸಕರು ಸಿಕ್ಕಿದ್ದಾರೆ ಇಂಥ ಹತ್ತು ಹಲವಾರು ಕಾರ್ಯಕ್ರಮಗಳನ್ನು ಅವರ ಮೂಲಕ ಅನುಷ್ಠಾನ ಮಾಡಿಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಸಾಗಲು ಜನರು ಕೈಜೋಡಿಸಬೇಕು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಶಾಸಕ ಡಾ. ಅಜಯಸಿಂಗ್ ಜೇವರ್ಗಿ ಅವರು ಮಾತನಾಡಿ, ಉತ್ತಮವಾದ ಶಾಲಾ ಕಟ್ಟಡವಿದೆ. ಗ್ರಾಮಾಭಿವೃದ್ಧಿಗೆ ಶಿಕ್ಷಣಕ್ಕೆ ಮೊದಲಾದ್ಯತೆ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಕೆಕೆಆರ್‍ಡಿಬಿ ಅಧ್ಯಕ್ಷರಾದ 15 ದಿನಗಳಲ್ಲೇ ಹಲವು ಕಾರ್ಯಯೋಜನೆ ತೀರ್ಮಾನ ಕೊಂಡಿದ್ದರಲ್ಲಿ ಶೈಕ್ಷಣಿಕ ವರ್ಷಾಚಣೆ ಘೋಷಿಸಲಾಗಿದೆ.

3 ಸಾವಿರ ಕೋಟಿ ಅನುದಾನದಲ್ಲಿ ಶೇ.25ರಷ್ಟು ಕಡ್ಡಾಯವಾಗಿ ಶಿಕ್ಷಣ ಅನುದಾನ ನೀಡಲಾಗುತ್ತಿದೆ. 50 ಮಾದರಿ ಶಾಲೆಗಳನ್ನಾಗಿ ಆಯ್ಕೆ ಮಾಡಲಾಗಿದೆ. 40 ಮತ ಕ್ಷೇತ್ರಗಳಲ್ಲಿ ತಲಾ 50 ಶಾಲೆಗಳನ್ನು ಆಯ್ಕೆಮಾಡಲಾಗಿದೆ. ರಾಜ್ಯ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಪ್ರತಿ ಶಾಲೆಯೂ ಮಾದರಿ ಶಾಲೆಯಾಗಿ ಮಾರ್ಪಡಲಿವೆ. ಇದಕ್ಕೆ ಹೊರತಾಗಿಯೂ ಹಲವು ಕಾರ್ಯಕ್ರಮಗಳ ಕೈಗೆತ್ತಿಕೊಂಡು ರಾಜ್ಯ ಸರ್ಕಾರಕ್ಕೆ ನಿಯೋಗದೊಂದಿಗೆ ಪ್ರಸ್ತಾವನೆ ಬೇಡಿಕೆ ಮಂಡಿಸಲಿದ್ದೇವೆ ಎಂದರು.

ಸಿದ್ದರಾಮಯ್ಯರಿಂದ ಜಾತಿ, ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ: ತೇಲ್ಕೂರ

ಶಾಸಕ ಬಿ.ಆರ್. ಪಾಟೀಲ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕಟ್ಟಡ, ಶೌಚಾಲಯ ಆವರಣಗೋಡೆ ಕಟ್ಟಲು ಅನುದಾನ ಒದಗಿಸಬೇಕು ಎಂದು ಕೆಕೆಆರ್‍ಡಿಬಿ ಅಧ್ಯಕ್ಷರಲ್ಲಿ ಕೋರಿದರು. ಅಫಜಲ್ಪುರ ಶಾಸಕ ಎಂ.ವೈ. ಪಾಟೀಲ, ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿದರು.

ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಶಂಕರ್‍ರಾವ್ ದೇಶಮುಖ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಶಿಕ್ಷಣ ಇಲಾಖೆ ಉಪನಿರ್ದೇಶಕ ಸಕ್ರೆಪ್ಪಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಬಿ. ರಾಠೋಡ, ಜಿಪಂ ಎಇ ಲಿಂಗರಾಜ ಪೂಜಾರಿ, ಶಾಲೆ ಮುಖ್ಯ ಶಿಕ್ಷಕ ಕೃಷ್ಣಾ ಪಾಟೀಲ, ಎಸ್‍ಡಿಎಂಸಿ ಅಧ್ಯಕ್ಷ ಚನ್ನಪ್ಪ ನಾಗೂರೆ, ಪ್ರೌಢಶಾಲಾ ಮುಖ ಶಿಕ್ಷಕರ ಸಂಘದ ಮರೆಪ್ಪ ಬಡಿಗೇರ್, ಗ್ರಾಮದ ರಾಜು ಗಾಡೆಕರ್, ಅಪ್ಪಾಸಾಬ ದೇಶಮುಖ, ಸಿದ್ಧರಾಮ ಬೆಳಮಗಿ, ಸಂಜಯಕುಮಾರ ಕೋರೆ, ಶಂಕರ ಪಿಂಪಳೆ ಮತ್ತಿತರು ಉಪಸ್ಥಿತರಿದ್ದರು.

Follow Us:
Download App:
  • android
  • ios