ಬೆಂಗಳೂರು(ಮೇ 05) ಕಾರ್ಮಿಕರ ಬಸ್ ಮತ್ತು ರೈಲಿನ ಚಾರ್ಜ್ ಕೊಡುತ್ತೇವೆ ಎಂದು ಕಾಂಗ್ರೆಸ್ ಈ ಸಮಯದಲ್ಲಿಯೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿರುವ ಸಚಿವ ಸುಧಾಕರ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ವ್ಯಂಗ್ಯ ವಾಗಿ ಟ್ವೀಟ್ ಮಾಡುವ ಮೂಲಕ ಆಕ್ರೋಶ  ಹೊರಹಾಕಿರುವ ಸುಧಾಕರ್, ಚಾರ್ಜ್ ಕೊಡುತ್ತೇನೆ ಎಂದು ಹೇಳುತ್ತ ರಸ್ತೆಯಲ್ಲಿ ಓಡಾಟ ಮಾಡುತ್ತಿದ್ದಾರೆ. ಅದರ ಜಾಹಿರಾತುಗಳನ್ನ ಕೊಟ್ಟಿರುವುದು ನೋಡಿದರೆ ಇದು ಭರ್ಜರಿ ಬಯಲುನಾಟಕ ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌ನ 1 ಕೋಟಿ ಚೆಕ್ ನ ಅಸಲಿ-ನಕಲಿ ಕತೆ

ನಿಯಮದಂತೆ ಹಣ ಯಾರಿಗೆ ಕೊಡಬೇಕಿತ್ತೋ ಅವರಿಗೆ ಕೊಡಬೇಕು .  ಅದನ್ನ ಬಿಟ್ಟು ಊರೆಲ್ಲ ಕ್ಯಾಮೆರಾ ಮುಂದೆ ಕೊರೊನ ಮೀರುವ ಓಡಾಟ ,ಚೀರಾಟ ಮತ್ತು ಹಾರಾಟ ಮಾಡಬಾರದು. ಕೊರೋನಾ ವಿಷಯದಲ್ಲೂ ಕಾಂಗ್ರೆಸ್ ಗೆ  ರಾಜಕೀಯವೇ ಮುಖ್ಯವಾಗಿದೆ.

ತಮಗೆ ಮುಖ್ಯ ಮತ್ತು ಲಾಭ ಅನ್ನುವ ಇವರ ಮನಸ್ಥಿತಿಗೂ, ರೋಮ್ ನ ಅಂದಿನ ದೊರೆ ನೀರೋ ಗೂ ಇವರಿಗೂ ವ್ಯತ್ಯಾಸವಿಲ್ಲ. ರೋಮ್ ಹೊತ್ತಿ ಉರಿಯುತ್ತಿದ್ದರೆ ರಾಜ ಪೀಟೀಲು ನುಡಿಸುಯತ್ತ ಕುಳೀತಿದ್ದನಂತೆ... ಕಾಂಗ್ರೆಸ್ ನವರ ಸ್ಥಿತಿಯೂ ಹಾಗೆ ಆಗಿದೆ ಎಂದು ವ್ಯಂಗ್ಯದ ಚಾಟಿ ಬೀಸಿದ್ದಾರೆ.