ಕಾಂಗ್ರೆಸ್ ಸೋಲಿನ ಭಯದಿಂದ ಆರೋಪ ಮಾಡುತ್ತಿದೆ: ಯಡಿಯೂರಪ್ಪ ಕಿಡಿ
ಕಾಂಗ್ರೆಸ್ ಮುಖಂಡರ ಆರೋಪದ ಬಗ್ಗೆ ಸೂಕ್ತ ಸಾಕ್ಷ್ಯಾಧಾರ (Evidence) ಇದ್ದರೆ ಕೊಡಿ ತನಿಖೆ ಮಾಡಿಸೋಣ. ಇದರಲ್ಲಿ ಏನಾದರೂ ಲೋಪದೋಷ (Loophole) ಇದ್ದರೆ ಸರಿಪಡಿಸುವುದಾಗಿ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕೊಟ್ಟಿದ್ದಾರೆ. ಆದರೂ, ಈ ಚುನಾವಣೆಯಲ್ಲಿ ಸೋಲು ಖಚಿತವೆಂದು ಕಾಂಗ್ರೆಸ್‌ಗೆ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ವ್ಯಥಾ ಆರೋಪ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗ (ನ.18): ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನು ಸ್ಪಷ್ಟವಾಗಿ ಒಪ್ಪಿಕೊಂಡಂತಿದೆ. ಹೀಗಾಗಿಯೇ ಬಿಜೆಪಿ ಮತದಾರರ ಪಟ್ಟಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವನ್ನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಕ ಉತ್ತರ ಕೊಟ್ಟಿದ್ದಾರೆ. ನಿಮ್ಮ ಬಳಿ ಸೂಕ್ತ ಸಾಕ್ಷ್ಯಾಧಾರ (Evidence) ಇದ್ದರೆ ಕೊಡಿ ತನಿಖೆ ಮಾಡಿಸೋಣ. ಇದರಲ್ಲಿ ಏನಾದರೂ ಲೋಪದೋಷ (Loophole) ಇದ್ದರೆ ಸರಿಪಡಿಸುವುದಾಗಿ ಹೇಳಿದ್ದಾರೆ. ಆದರೂ, ಈ ಚುನಾವಣೆಯಲ್ಲಿ ಸೋಲು ಖಚಿತವೆಂದು ಕಾಂಗ್ರೆಸ್‌ಗೆ ಗೊತ್ತಾಗುತ್ತಿದ್ದಂತೆ ವ್ಯಥಾ ಆರೋಪ ಮಾಡುತ್ತಿದೆ. ಈ ರೀತಿ ಆರೋಪ (Accusation) ಮಾಡುವುದರಿಂದ ಕಾಂಗ್ರೆಸ್ ಮುಖಂಡರಿಗೆ ಶೋಭೆ ತರುವುದಿಲ್ಲ ಎಂದರು.
ಬಿಜೆಪಿ ಗೆಲುವು ಖಚಿತ: ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವು ಸ್ಪಷ್ಟ ಬಹುಮತ (Majority) ಪಡೆಯುತ್ತೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ (BJP) ಅಧಿಕಾರಕ್ಕೆ ಬರುವುದು ನಿಶ್ಚಿತ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ, ಇಡೀ ದೇಶವೇ ಮೆಚ್ಚಿರುವ ಸಂದರ್ಭದಲ್ಲಿ ಕಾಂಗ್ರೆಸ್ (Congress)ನವರು ತಬ್ಬಲಿಯಂತೆ (parentless) ಅಲೆಯುತ್ತಿದ್ದಾರೆ. ಅವರಿಗೆ ಯಾವುದೇ ನಾಯಕತ್ವ ಇಲ್ಲ. ಹೀಗಾಗಿ ಅವರ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ಯಾವುದೇ ರೀತಿಯಲ್ಲಿ ದುರ್ವ್ಯವಹಾರ ನಡೆದಿಲ್ಲ. ವ್ಯವಸ್ಥಿತವಾದ ಪಿತೂರಿ, ಷಡ್ಯಂತ್ರ ನಡೆದಿದೆ. ಇದಕ್ಕೆ ಯಾರು ಕಿವಿಗೊಡುವ ಅಗತ್ಯ ಇಲ್ಲ ಎಂದು ಹೇಳಿದರು.
ಕಾಂಗ್ರೆಸಿಗರ ವಿರುದ್ಧ ಮಾನನಷ್ಟ ಕೇಸ್: ಸಚಿವ ಅಶ್ವತ್ಥ್ ನಾರಾಯಣ ಎಚ್ಚರಿಕೆ
ಅಭ್ಯರ್ಥಿ ಪಟ್ಟಿ ಬಿಡಿಗಡೆಗೆ ನಿರ್ಧಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬುದು ಅವರಿಗೆ ಬಿಟ್ಟ ವಿಚಾರ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಿದ್ದಾರೆ. ಒಬ್ಬ ವಿಪಕ್ಷದ ನಾಯಕರಾಗಿರುವ ಅವರ ಬಗ್ಗೆ ನಾನು ಹಗುರವಾಗಿ ಮಾತನಾಡಲ್ಲ. ಅವರಿಗೆ ಎಲ್ಲಿ ಸೂಕ್ತವೋ ಅಲ್ಲಿ ಚುನಾವಣೆಗೆ ನಿಲ್ಲಬಹುದು. ಬಿಜೆಪಿಯಿಂದ ಅಭ್ಯರ್ಥಿಗಳ ಪಟ್ಟಿ (Candidates List) ಬಿಡುಗಡೆ ಬಗ್ಗೆ ಚರ್ಚೆ ನಡೆದಿಲ್ಲ. ಕೇಂದ್ರದ ಅಧ್ಯಕ್ಷರ ಜೊತೆ ಮಾತನಾಡಿ ಸೂಕ್ತ ನಿರ್ಧಾರ (Dicision) ಕೈಗೊಳ್ಳಲಾಗುವುದು. ಗುಜರಾತ್ ಚುನಾವಣೆಯಲ್ಲಿ (Gujarat Election) ನಾವು ನೂರಕ್ಕೆ ನೂರು ಬಹುಮತದೊಂದಿಗೆ ಗೆಲ್ಲುತ್ತೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆಮ್ ಆದ್ಮಿ ಪಕ್ಷದವರು ಸುಮ್ಮನೆ ಏನೇನೋ ಮಾತನಾಡ್ತಾರೆ. ಅದಕ್ಕೆ ಏನು ಗೌರವ ಇಲ್ಲ. ಅಲ್ಲಿ ನಿಚ್ಚಳ ಬಹುಮತದೊಂದಿಗೆ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಗಾರ್ ಆಗಮನದಿಂದ ಬಲ: ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾಗಿರುವ ಎಚ್.ಟಿ. ಬಳಿಗಾರ್ (Baligar) ಅವರು ಕೆಎಎಸ್ (KAS) ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದಿನ ರಾಜ್ಯ ಸರ್ಕಾರದಲ್ಲಿ ಹಣಕಾಸು ಅಧಿಕಾರಿಯಾಗಿ (Finance Officer) ಸೇವೆ ಸಲ್ಲಿಸಿರುವ ಅನುಭವ ಅವರಿಗಿದೆ. ಬಳಿಗಾರರು ಪಕ್ಷಕ್ಕೆ ಸೇರ್ಪಡೆ ಕೊಂಡಿರುವುದರಿಂದ ಬಿಜೆಪಿಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಬಳಿಗಾರ್ ಅವರಿಗೆ ಹಲವಾರು ವರ್ಷಗಳ ಹಿಂದೆಯೇ ಬಿಜೆಪಿಗೆ ಆಹ್ವಾನಿಸಿದ್ದೆವು. ಈಗ ಜೆಡಿಎಸ್ (JDS) ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ. ಮುಂದಿನ ದಿನದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ನಾವು ಬದ್ಧರಾಗಿದ್ದೇವೆ. ಅವರನ್ನು ಬಳಸಿಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಿಕಾರಿಪುರ, ಶಿರಾಳಕೊಪ್ಪ ಅಭಿವೃದ್ಧಿಗೆ ಬಿಎಸ್‌ವೈ ಕೊಡುಗೆ ಅಪಾರ: ಸಂಸದ ರಾಘವೇಂದ್ರ
ಮೋದಿಯವರ ಅಭಿವೃದ್ಧಿಗೆ ಮನಸೋತು ಬಿಜೆಪಿ ಸೇರ್ಪಡೆ: ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಹೆಚ್.ಟಿ. ಬಳಿಗಾರ್, ಕಳೆದ ಹಲವಾರು ವರ್ಷಗಳ ಹಿಂದೆಯೇ ಯಡಿಯೂರಪ್ಪನವರು ನನ್ನನ್ನು ಬಿಜೆಪಿಗೆ ಆಹ್ವಾನಿಸಿದ್ದರು. ಬಿಜೆಪಿಗೆ ಕರೆಯಲು ನಮ್ಮ ಮನೆಗೆ ಬಂದಾಗ, ನಾನು ನನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದೆನು. ಆದರೆ ಈಗ ಬದಲಾವಣೆ ಜಗದ ನಿಯಮದಂತೆ ಬಿಜೆಪಿಗೆ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ದೇವರಾಜು ಅರಸು (Devaraj Arasu) ಮತ್ತು ಬಂಗಾರಪ್ಪನವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದವನು ನಾನು. ಆದರೆ ವಿಶ್ವ ನಾಯಕ ನರೇಂದ್ರ ಮೋದಿ (Narendra modi) ಅವರ ಅಭಿವೃದ್ಧಿಯ ಕೆಲಸವನ್ನು ಮನದಟ್ಟು ಮಾಡಿಕೊಂಡು ಬಿಜೆಪಿಗೆ ಸೇರಿದ್ದೇನೆ. ಇತ್ತೀಚಿಗೆ ಶಿಕಾರಿಪುರಕ್ಕೆ ನ್ಯಾ. ನಾಗಮೋಹನ್ ದಾಸ್ ಅವರನ್ನು ಭೇಟಿ ಮಾಡಿದ್ದ ವೇಳೆ ಸಂಸದ ರಾಘವೇಂದ್ರರೊಂದಿಗೆ ಭೇಟಿ ಆಗಿತ್ತು. ಆಗಿನ ಮಾತುಕತೆ ಫಲಪ್ರದವಾಗಿದೆ. ಸಂಸದ ರಾಘವೇಂದ್ರ ಅವರ ಬಳಿ ನಿರಂತರವಾಗಿ ಮಾತನಾಡಿಕೊಂಡು ಈಗ ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಆರೋಪ ನಿರಾಧಾರ: ಮತದಾರರ ಪಟ್ಟಿಯನ್ನು ಬಿಜೆಪಿ ದುರ್ಬಳಕೆ (Misuse) ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ ನಿರಾಧಾರ ಆಗಿದೆ. ಮತದಾರರ ಪಟ್ಟಿಯಲ್ಲಿ ಯಾರಿಗೆ ಯಾರ ಮಾಹಿತಿ ಬೇಕಾದರೂ ಸಿಗುತ್ತದೆ. ಇದರಲ್ಲಿ ಗೌಪ್ಯತೆ (Confidential) ಇಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಮುಕ್ತವಾಗಿ ಎಲ್ಲರಿಗೂ ಹೇಳಿದ್ದಾರೆ. ನಾವು ಕೂಡಾ ಮತದಾರರ ಪಟ್ಟಿಯಲ್ಲಿ ಯಾರಿದ್ದಾರೆ, ಯಾರಿಲ್ಲ ಎಂಬ ಬಗ್ಗೆ ತಿಳಿದುಕೊಂಡು ಸೇರಿಸುವ ಕೆಲಸ ಮಾಡುತ್ತಿದ್ದೇವೆ. ಆದರೆ, ಆರೋಪದ ಬಗ್ಗೆ ದೂರು (Complaint) ಕೊಟ್ಟರೆ ತನಿಖೆ ಮಾಡಲಾಗುತ್ತದೆ. ಇದೊಂದು ಬಿಟ್ಟಿ ಪ್ರಚಾರ ಆಗಿದ್ದು, ಯಾವ ದುರುಪಯೋಗ ಆಗಿಲ್ಲ. ಇನ್ನು ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಸಾವು ಪ್ರಕರಣದ ಎಫ್ಎಸ್ಎಲ್ ವರದಿ (FSL Report) ಬರಬೇಕಿದೆ. ಪ್ರಕರಣದ ಬಗ್ಗೆ ವಿಶ್ಲೇಷಣೆ ಮಾಡಲಾಗುತ್ತಿದ್ದು ವದರಿ ನಂತರ ಸತ್ಯ ಏನೆಂಬುದು ತಿಳಿಯಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.