ಕನಕಪುರ ಕ್ಷೇತ್ರಕ್ಕೆ ಮೂರು ಕಣ್ಣುಗಳಿವೆ ಅಂತ ಕೆಲವರು ಹೇಳುತ್ತಾರೆ. ಅದು ಯಾವುದು ಅಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಎಸ್.ರವಿ. ಇವರೆಲ್ಲರು ಯಾವಾಗ ನಿದ್ದೆ ಮಾಡುತ್ತಾರೊ ಗೊತ್ತಿಲ್ಲ.
ಕನಕಪುರ (ಫೆ.13): ಕನಕಪುರ ಕ್ಷೇತ್ರಕ್ಕೆ ಮೂರು ಕಣ್ಣುಗಳಿವೆ ಅಂತ ಕೆಲವರು ಹೇಳುತ್ತಾರೆ. ಅದು ಯಾವುದು ಅಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ಎಸ್.ರವಿ. ಇವರೆಲ್ಲರು ಯಾವಾಗ ನಿದ್ದೆ ಮಾಡುತ್ತಾರೊ ಗೊತ್ತಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ರಾಜಿ ಇಲ್ಲದೆ ಕೆಲಸ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ಗುಣಗಾನ ಮಾಡಿದರು. ನಗರದಲ್ಲಿ ಇಸ್ಫೋಸಿಸ್ ಸಂಸ್ಥೆ ವತಿಯಿಂದ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಏಕೆ ಗೆಲ್ಲುತ್ತಾರೆ ಎಂಬುದನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ.
ಮೊದಲು ಕಡಿಮೆ ಮಾರ್ಜಿನ್‌ನಲ್ಲಿ ಗೆಲ್ಲುತ್ತಿದ್ದರು. ಈಗದು 75 ಸಾವಿರ ಲೀಡ್‌ಗೆ ಹೋಗಿದೆ. ಡಿಕೆಶಿ ನರೇಗಾದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಜನರಿಗೆ ಬೆನ್ನಾಗಿ ನಿಂತರು. ಯಾರೇ ಆಗಲಿ ಒಳ್ಳೆ ಕೆಲಸ ಮಾಡಿದಾಗ ಹೊಗಳಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ಇದೇ ರೀತಿ ಇರಬೇಕು. ಆಗ ಮಾತ್ರ ಆರೋಗ್ಯಕರ ಪ್ರಜಾಪ್ರಭುತ್ವ ಇರುತ್ತದೆ ಎಂದು ಹೇಳಿದರು. ಬಳಿಕ, ಮಾತನಾಡಿದ ಡಿಕೆಶಿ, ನಾನು ಕನಕಪುರದಲ್ಲಿ ಯಾವುದಾದರೂ ಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದರೆ ಅದು ಯಡಿಯೂರಪ್ಪ, ಸುಧಾಕರ್ ಅವರ ಜೊತೆ ಮಾತ್ರ. ಕುಮಾರಸ್ವಾಮಿ ಅವರ ಜತೆ ವೇದಿಕೆ ಹಂಚಿಕೊಳ್ಳುವಾಗ ಐತಿಹಾಸಿಕ ಸಮರ ನಡೆದಿತ್ತು. ನಾನು ಸುಧಾಕರ್ ಜತೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ನಿಮ್ಮ ಮೇಲೆ ನನಗೆ ಗೌರವ ಇದೆ ಎಂದರ್ಥ ಎಂದರು.
ಸಚಿವ ಸುಧಾಕರ್ ಮೆಡಿಕಲ್ ಕಾಲೇಜು ಕಿತ್ಕೊಂಡರು: ಸಂಸದ ಡಿ.ಕೆ.ಸುರೇಶ್
ರಾಜ್ಯ ರಾಜಕಾರಣಕ್ಕೆ ಬರಲು ಆಸಕ್ತಿ ಇಲ್ಲ: ನಾಲ್ಕೈದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನನಗೆ ಆಹ್ವಾನವಿದೆ. ಆದರೆ, ನನಗೆ ರಾಜ್ಯ ರಾಜಕಾರಣಕ್ಕೆ ಬರುವ ಆಸಕ್ತಿ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸದ್ಯಕ್ಕೆ ಲೋಕಸಭಾ ಸದಸ್ಯನಾಗಿದ್ದೇನೆ. ಹಾಗಾಗಿ, ನನ್ನ ಕ್ಷೇತ್ರವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಗಾಗಿ ಪ್ರವಾಸ ಮಾಡುತ್ತಿದ್ದೇನೆ. ನಾನು ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದರಿಂದ ಅದನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ನಾಲ್ಕೈದು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನನಗೆ ಆಹ್ವಾನವಿದೆ. ಆದರೆ, ರಾಜ್ಯ ರಾಜಕಾರಣಕ್ಕೆ ಬರಲು ಆಸಕ್ತಿ ಇಲ್ಲ ಎಂದರು. ಹೈಕಮಾಂಡ್ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಬಳಿಯೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
ಚುನಾವಣೆಯಲ್ಲಿ ಸ್ಪರ್ಧೆಸಲು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್
ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರು ಮಾಡುವ ಪಕ್ಷ: ಬಿಜೆಪಿಗೆ ಮುಂದೆ ಒಂದು ರೀತಿಯ ಮುಖ, ಹಿಂದೆ ಮತ್ತೊಂದು ರೀತಿಯ ಮುಖ ಇದೆ. ಸುಳ್ಳು ಹೇಳಿ ಸತ್ಯ ಮರೆ ಮಾಚುತ್ತಿರುವ ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ನಾಯಕರಿಂದ ಹಿಡಿದು ಕೆಳಗಿನ ನಾಯಕರವೆರಿಗೂ ಸುಳ್ಳೇ ಮನೆ ದೇವರು. ರಾಜ್ಯದಲ್ಲಿಯೂ ಜನರ ದಾರಿತಪ್ಪಿಸುವ ಕೆಲವನ್ನು ಮಾಡುತ್ತಿದೆ. ಭ್ರಷ್ಟಾಚಾರ, ಶೇಕಡ 40 ಕಮಿಷನ್, ನೇಮಕಾತಿ ಹಗರಣ, ಕೋಮುವಾದ ಸೃಷ್ಟಿಮಾಡುವ ಕೆಲಸಕ್ಕೆ ಮುಂದಾಗಿರುವ ಬಿಜೆಪಿ, ಇದೀಗ ಮತದಾರರ ಪಟ್ಟುಗೆ ಕನ್ನಹಾಕಿದ್ದಾರೆ. ಅಂತಿಮವಾಗಿ ರೌಡಿಗಳನ್ನು ಇಟ್ಟುಕೊಂಡು ಚುನಾವಣೆ ನಡೆಸಲು ಮುಂದಾಗಿದ್ದಾರೆ. ಬಹುಶಃ ಬಿಜೆಪಿಯಲ್ಲಿ ರೌಡಿಗಳಿಗೆ ಭವಿಷ್ಯ ಇರಬಹುದು. ಅವರು ಅಧಿಕಾರದಲ್ಲಿ ಇರುವವರು ರೌಡಿಗಳಿಗೆ ಆಶ್ರಯ ಕೊಡುತ್ತಾರಾ ಕೊಡಲಿ. ಅವರ ಇತಿಹಾಸ, ನಡವಳಿಕೆ ಎಲ್ಲರಿಗೂ ಗೊತ್ತಿದೆ ಎಂದು ಸುರೇಶ್ ವಾಗ್ದಾಳಿ ನಡೆಸಿದರು.
