ಸೇಡು ತೀರಿಸಿಕೊಂಡ ಸಚಿವ ಸುಧಾಕರ್: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಗರ್ವಭಂಗ

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಕಾಂಗ್ರೆಸ್ ಎದುರು ಸೋಲುಕಂಡಿದ್ದ ಸಚಿವ ಡಾ. ಸುಧಾಕರ್ ಇದೀಗ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಖಭಂಗವಾಗಿದೆ.

Minister Dr K Sudhakar Fallowers wins In chikkaballapur PLD Bank Poll

ಚಿಕ್ಕಬಳ್ಳಾಪುರ, [ಫೆ.23]: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿನ ಸೇಡನ್ನ ಪಿಎಲ್‌ಡಿ ಬ್ಯಾಂಕ್ ಎಲೆಕ್ಷನ್ ನಲ್ಲಿ ತೀರಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಪಿಎಲ್‌ಡಿ ಬ್ಯಾಂಕ್ ಬಿಜೆಪಿ ತೆಕ್ಕೆಗೆ ಒಲಿದಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ತೀವ್ರ  ಮುಖಭಂಗ ಅನುಭವಿಸಿದೆ. 12 ಸ್ಥಾನಗಳ  ಪೈಕಿ ಈ ಮೊದಲೇ 2 ಸ್ಥಾನಗಳಲ್ಲಿ ಅವಿರೋಧವಾಗಿ ಗೆಲುವು ಸಾಧಿಸಿತ್ತು.

ಇನ್ನುಳಿದ 10 ಸ್ಥಾನಗಳಿಗೆ ಇಂದು [ಭಾನುವಾರ] ಚುನಾವಣೆ ನಡೆದಿದ್ದು, ಸದ್ಯದ ಮಾಹಿತಿ ಪ್ರಕಾರ 7ರಲ್ಲಿ ಬಿಜೆಪಿ ಗೆಲುವು ಸಾಧಿಸಿದ್ರೆ 3ರಲ್ಲಿ ಕಾಂಗ್ರೆಸ್-ಜೆಡಿಎಸ್  ಮೈತ್ರಿಗೆ ಗೆಲುವಾಗಿದೆ.

ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ, ಸುಧಾಕರ್ ಸಪ್ಪೆ

ಒಟ್ಟು 12 ಸ್ಥಾನಗಳಲ್ಲಿ 7ಸ್ಥಾನಗಳಲ್ಲಿ ಸಚಿವ ಸುಧಾಕರ್ ಬಣಕ್ಕೆ ಭರ್ಜರಿ ಗೆಲುವು ಸಿಕ್ಕದ್ದು, ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಜೋರಾಗಿದೆ. ಸಚಿವ ಡಾ.ಕೆ. ಸುಧಾಕರ್ ಅವರನ್ನ ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು.

ಇತ್ತೀಚೆಗೆ ನಡೆದ ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಂದೆ ಬಿಜೆಪಿ ಮಕಾಡೆ ಮಲಗಿತ್ತು. 31 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ರೆ, ಜೆಡಿಎಸ್- 02, 04 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದರು.

ಆದ್ರೆ, ಬಿಜೆಪಿ 09  ಸ್ಥಾನಗಳಲ್ಲಿ ಗೆಲ್ಲುವ ಸಾಧಿಸುವಲ್ಲಿ ತೃಪ್ತಿಪಟ್ಟುಕೊಂಡಿತ್ತು. ಕಳೆದ ಅವಧಿಯಲ್ಲೂ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತು. ಕಾಂಗ್ರೆಸ್ - 15, ಬಿಜೆಪಿ- 00, ಜೆಡಿಎಸ್- 09, ಪಕ್ಷೇತರರು-  07 ಸ್ಥಾನ ಗೆದ್ದಿತ್ತು.

ಈ ಮೂಲಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿರುವ ಸುಧಾಕರ್ ಗೆ ಆರಂಭಿಕ ಹಿನ್ನಡೆಯಾಗಿತ್ತು. ಆದ್ರೆ, ಇದೀಗ ನಗರಸಭೆ ಎಲೆಕ್ಷನ್ ಸೇಡನ್ನು ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ತೀರಿಸಿಕೊಂಡರು.

ಕೈ ಕೈ ಮಿಲಾಯಿಸಿದ ಕಾರ್ಯಕರ್ತರು
ಚಿಕ್ಕಬಳ್ಳಾಪುರ ಪಿಎಲ್ ಡಿ ಬ್ಯಾಂಕ್ ಚುನಾವಣೆ ಈ ಭಾರಿ ಕುತೂಹಲ ಮೂಡಿಸಿತ್ತು. ಸುಧಾಕರ್ ಗೆ ಟಾಂಗ್ ಕೊಡಲು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಆದ್ರೆ ಚುನಾವಣೆ ವೇಳೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಾರಾಮಾರಿ ನಡೆದಿದೆ. ಈ ಗಲಾಟೆಯ ನಿಯಂತ್ರಣ ಮಾಡೋ ವೇಳೆ ಮೂವರು ಪೊಲೀಸರಿಗೂ ಗಾಯವಾಗಿದೆ.

ಮತಗಟ್ಡೆ ಬಳಿ ಯಾರು  ಹೋಗಬಾರದೆಂಬ ವಿಚಾರಕ್ಕೆ ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಹಾಗೂ  ಕಾಂಗ್ರೆಸ್ ಮುಖಂಡ ಲಾಯರ್ ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಕೇಶವರೆಡ್ಡಿ ಬೆಂಬಲಿಗ ನಾರಾಯಣಸ್ವಾಮಿ ನಡುವೆ ಹೊಡೆದಾಟ ನಡೆಯಿತು. ಇದರಿಂದಾಗಿ ಕೆಲಕಾಲ ತಾಲೂಕು ಪಂಚಾಯತ್ ಆವರಣದಲ್ಲಿ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು ಎರಡು ಬಣದವರನ್ನು ಮನವೊಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು. 

 ಕಾಂಗ್ರೆಸ್ ನಾಯಕರ ವಿರುದ್ಧ ಸುಧಾಕರ್ ಆಕ್ರೋಶ
ಇನ್ನೂ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.. ಚಿಕ್ಕಬಳ್ಳಾಪುರದ ಕೈ ನಾಯಕರು ಗೂಂಡಾ ಪ್ರವೃತ್ತಿಯುಳ್ಳವರು..  ಹಿರಿಯರಾದ ನಮ್ಮ ತಂದೆ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಅವರ ಪೃವೃತ್ತಿ ಏನು ಎಂದು ಕಿಡಿಕಾರಿದರು.

ಒಟ್ಟಾರೆ, ಎರಡು ಪಕ್ಷಗಳ ನಾಯಕರ ಪ್ರತಿಷ್ಠೆಯಾಗಿದ್ದ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆ ಇಂದು ಅಕ್ಷರಶಃ ರಣಾಂಗಣವಾಗಿದ್ದು, ಅಂತಿಮವಾಗಿ ಸುಧಾಕರ್ ಗೆದ್ದು ಬೀಗಿದ್ದಾರೆ.

Latest Videos
Follow Us:
Download App:
  • android
  • ios