ಚಿಕ್ಕಬಳ್ಳಾಪುರ(ಫೆ.11): ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಗೆಲುವು ಸಾಧಿಸಿದೆ. ಚಿಕ್ಕಬಳ್ಳಾಪುರ ‌ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಸಚಿವ ಸುಧಾಕರ್‌ಗೆ ತೀವ್ರ ಹಿನ್ನಡೆಯಾಗಿದೆ.

31 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. 09 ಬಿಜೆಪಿ. ಜೆಡಿಎಸ್- 02. ಪಕ್ಷೇತರ- 04 ಸ್ಥಾನಗಳನ್ನು ಗೆದ್ದಿದೆ. ಕಳೆದ ಅವಧಿಯಲ್ಲೂ ಕಾಂಗ್ರೆಸ್ ಅಧಿಪತ್ಯ ಸಾಧಿಸಿತ್ತು. ಕಾಂಗ್ರೆಸ್ - 15, ಬಿಜೆಪಿ- 00, ಜೆಡಿಎಸ್- 09, ಪಕ್ಷೇತರರು-  07 ಸ್ಥಾನ ಗೆದ್ದಿತ್ತು.

ಇಡಿ ಅಧಿಕಾರಿಗಳಿಂದ ಡಿಕೆಶಿ ತಾಯಿ ಗೌರಮ್ಮ ವಿಚಾರಣೆ

ಶಾಸಕ ಸುಧಾಕರ್‌ ಜಿಲ್ಲೆಯ ಬಹು ನಿರೀಕ್ಷಿತ ಯೋಜನೆಯಾದ ಎಚ್‌ಎನ್‌ ವ್ಯಾಲಿ ನೀರು ನಗರದ ಕಂದವಾರ ಕೆರೆಗೆ ಹರಿಸುವ ಮೂಲಕ ಭರವಸೆ ಮೂಡಿಸಿದ್ದಾರೆ. ಹಾಗಾಗಿ ಈ ಎಲ್ಲ ಕಾರಣಗಳೂ ಬಿಜೆಪಿ ಪಾಲಿಗೆ ವರದಾನವಾಗಿದ್ದು, ನಗರ ವ್ಯಾಪ್ತಿಯ ಮತದಾರರು ಬಿಜೆಪಿ ಪರ ಹೆಚ್ಚಿನ ಒಲವು ತೋರಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು.