Asianet Suvarna News Asianet Suvarna News

ಕಾಂಗ್ರೆಸ್‌ ಬಸ್‌ಯಾತ್ರೆಗೆ 52 ಸ್ಥಾನ ಮಾತ್ರ: ಸಚಿವ ಅಶ್ವತ್ಥ ನಾರಾಯಣ್‌

ಪದೇ ಪದೇ ಸುಳ್ಳು ಹೇಳುತ್ತ ಅದನ್ನೇ ಸತ್ಯ ಎಂದು ಜನರೆದುರು ಬಿಂಬಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕಾಗಿದೆ. ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.

Minister Dr Cn Ashwath Narayan Slams On Congress Bus Yatra At Kalaburagi gvd
Author
First Published Jan 28, 2023, 11:59 PM IST

ಶಹಾಬಾದ್‌ (ಜ.28): ಪದೇ ಪದೇ ಸುಳ್ಳು ಹೇಳುತ್ತ ಅದನ್ನೇ ಸತ್ಯ ಎಂದು ಜನರೆದುರು ಬಿಂಬಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕಾಗಿದೆ. ಅಧಿಕಾರದಲ್ಲಿದ್ದಾಗ ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಈಗ ರಾಜ್ಯದಲ್ಲಿ ಬಸ್‌ ಯಾತ್ರೆ ನಡೆಸಿ, ಸುಳ್ಳನ್ನು ಸತ್ಯವೆಂದು ಬಿಂಬಿಸುತ್ತ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್‌ ಬಸ್‌ ಯಾತ್ರೆಗೆ ಈ ಬಾರಿ ಜನ ಬಸ್‌ನಲ್ಲಿರುವ 52 ಸ್ಥಾನಗಳನ್ನು ಮಾತ್ರ ನೀಡಲಿದ್ದಾರೆ ಎಂದು ಸಚಿವ ಡಾ. ಸಿ.ಎನ್‌. ಅಶ್ವಥನಾರಾಯಣ ಭವಿಷ್ಯ ನುಡಿದರು.

ಹಳೆ ಶಹಾಬಾದ್‌ ಬಡಾವಣೆಯಲ್ಲಿ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮುಲ್ಲಾಖಾನ್‌ ಅಧಿಕಾರದಲ್ಲಿದ್ದಾಗ ಪಿಎಫ್‌ಐ ಮೇಲಿನ ಪ್ರಕರಣ ವಾಪಸ್‌ ಪಡೆದಿದ್ದರು. ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆ, ಗರೀಬ್‌ ಕಲ್ಯಾಣ ಯೋಜನೆ, ಮಾಶಾಸನ ಹೆಚ್ಚಳ ಮಾಡಿದ್ದು, ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಬಿಜೆಪಿ ಜನರ ಪಕ್ಷವಾಗಿದ್ದು, ಕುಟುಂಬ ರಾಜಕಾರಣದಿಂದ ದೂರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನದು ಪ್ರಜಾ ಗೋವಿಂದ ಯಾತ್ರೆ: ಸಚಿವ ಅಶ್ವತ್ಥ ನಾರಾಯಣ್‌

ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ್‌ ಪಾಟೀಲ್‌ ಪ್ರಾಸ್ತಾವಿಕ ಮಾತನಾಡಿ, ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಕತ್ತಲ ರಾತ್ರಿ ಪಕ್ಷವಲ್ಲ. ನಮ್ಮ ಸಾಧನೆಯನ್ನು ನಾಗರಿಕರ ಮುಂದಿಟ್ಟು ಚರ್ಚೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಕೇವಲ ಡಬಲ್‌ ಎಂಜಿನ್‌ ಸರ್ಕಾರವಲ್ಲ, ಬಸವರಾಜು ಮತ್ತಿಮಡು ಅವರು ಸೇರಿ ಟ್ರಿಬಲ್‌ ಎಂಜಿನ್‌ ಸರ್ಕಾರ ಇದೆ ಎಂದರು. ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ ಠಾಕೂರ ಮಾತನಾಡಿದರು.

ವೇದಿಕೆ ಮೇಲೆ ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷ ಭಾಗೀರತಿ ಗುನ್ನಾಪುರ, ಸುಜ್ಞಾನಿ ಪೋದ್ದಾರ, ಶಾಸಕ ಡಾ.ಅವಿನಾಶ ಜಾಧವ, ಅಶೋಕ ಬಗಲಿ, ಅವ್ವಣ್ಣ ಮ್ಯಾಕೇರಿ, ರಾಜಕುಮಾರ ಕೋಟೆ, ರಾಘವೇಂದ್ರ ಕುಲಕರ್ಣಿ, ವಾಡಿ ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ, ಶಶಿಕಲಾ ಟೆಂಗಳಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿಇದ್ದರು. ಅಣವೀರ ಇಂಗಿನಶೆಟ್ಟಿಸ್ವಾಗತಿಸಿದರು. ಸದಾನಂದ ಕುಂಬಾರ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಶ್ರೀಶೈಲ ಬೆಳಮಗಿ, ಬಸವರಾಜ ಬಿರಾದಾರ, ದಿನೇಶ ಗೌಳಿ, ಪ್ರಕಾಶ ವಳಸಂಗ, ಶಿವುಗೌಡ ಪಾಟೀಲ, ಶರಣಬಸಪ್ಪ ಕೊಡದೂರ, ರಾಕೇಶ ಮಿಶ್ರ, ನಿಂಗಣ್ಣ ಹುಳಗೋಳ, ಶರಣು ಕೌಲಗಿ, ದೇವೆಂದ್ರಪ್ಪ ಯಲಗೂಡಕರ, ಸೇರಿದಂತೆ ನೂರಾರು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು.

ದೇವೇಗೌಡರ ಬದುಕು‌ ಮುಖ್ಯ ನನಗೆ: ಮಾಜಿ ಸಿಎಂ ಕುಮಾರಸ್ವಾಮಿ ಭಾವನಾತ್ಮಕ ‌ಮಾತು

ಕಲಬುರಗಿ ಜಿಲ್ಲೆಯ ಚಿತ್ತಾಪುರ, ಜೇವರ್ಗಿ ಶಾಸಕರು ಜನರ ಸಮಸ್ಯೆಗೆ ಸ್ಪಂದಿಸದೆ, ಮೂರು ತಿಂಗಳಿಗೊಮ್ಮೆ ಮಾತ್ರ ಬಂದು ಮುಖ ತೋರಿಸಿ, ಹೋಗುತ್ತಾರೆ.
-ಸಚಿವ. ಡಾ. ಸಿ.ಎನ್‌.ಅಶ್ವಥನಾರಾಯಣ

Follow Us:
Download App:
  • android
  • ios