‘ಸಿ.ಡಿ. ಸಂಸ್ಕೃತಿ ಅವರದ್ದು. ಹಿಂದೆ ಸಿ.ಡಿ. ಮಾಡಿದ್ದು ಅವರು  ಸಚಿವ ರಮೇಶ್‌ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ಗೊತ್ತಿಲ್ಲವೇ ಎಂದ ಸಿಪಿವೈ ಡಿಕೆ ಶಿವಕುಮಾರ್ ಬಿಜೆಪಿಗೆ ಬಂದರೆ ಒಳ್ಳೆಯದು ಎಂದ ಯೋಗೇಶ್ಚರ್

ಬೆಂಗಳೂರು (ಜೂ.08) :‘ಸಿ.ಡಿ. ಸಂಸ್ಕೃತಿ ಅವರದ್ದು. ಹಿಂದೆ ಸಿ.ಡಿ. ಮಾಡಿದ್ದು ಅವರು. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪ್ರಕರಣ ಎಲ್ಲರಿಗೂ ಗೊತ್ತಿಲ್ಲವೇ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ತಿಹಾರ್‌ ಜೈಲಿಗೆ ಹೋಗಿ ಬಂದ ಮೇಲೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದೂ ಅವರು ಶಿವಕುಮಾರ್‌ ವಿರುದ್ಧ ಹರಿಹಾಯ್ದಿದ್ದಾರೆ.

ನನ್ನ ನೋವನ್ನು ಎಲ್ಲಿ ಹೇಳಿಕೊಳ್ಳಬೇಕು ಅಲ್ಲಿ ಹೇಳಿದ್ದೇನೆ: ಸಚಿವ ಸ್ಫೋಟಕ ಹೇಳಿಕೆ

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳಿಗೆ ಲ್ಯಾಪ್‌ಟಾಪ್‌ ಹಿಡಿದುಕೊಂಡು ಹೋಗಿರುವ ಆರೋಪದ ಬಗ್ಗೆ ಪ್ರಸ್ತಾಪಿಸಿ, ‘ಶಿವಕುಮಾರ್‌ಗೆ ನನ್ನ ವಿರುದ್ಧ ಮಾತನಾಡುವುದು ಅನಿವಾರ್ಯ ಆಗಿದೆ. ಬಿಜೆಪಿಗೆ ಅವರು ಸಾಮಾನ್ಯ ಸದಸ್ಯನಾಗಿ ಸದಸ್ಯತ್ವ ತೆಗೆದುಕೊಳ್ಳುವುದು ಒಳ್ಳೆಯದು. ನನ್ನ ಬಗ್ಗೆ ಕುಚೋದ್ಯ ಮಾಡಬೇಕು, ಸಮಾಜದಲ್ಲಿ ಕಳಂಕ ತರಿಸಬೇಕು ಎಂಬ ಉದ್ದೇಶದಿಂದಲೇ ಹೀಗೆಲ್ಲ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ನಾನು ಮಠಕ್ಕೆ ಹೋಗೋದು ಇದೇ ಮೊದಲಲ್ಲ. ಅನೇಕ ಬಾರಿ ಹೋಗಿದ್ದೇನೆ. ನಾನು ಹೋದ ಹಾಗೆ ಶಿವಕುಮಾರ್‌ ಕೂಡ ಹೋಗುತ್ತಾರೆ. ಆಮೇಲೆ ಅವರೇ ಒಂದು ಕಥೆ ಕಟ್ಟುತ್ತಾರೆ. ಅದಕ್ಕೆ ನಾನು ಉತ್ತರ ಕೊಡುವುದಿಲ್ಲ. ಸಿ.ಡಿ. ಸಂಸ್ಕೃತಿ ಅವರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ರಾಮನಗರ ಜಿಲ್ಲೆಯ ಎಲ….ಎನ್‌.ಮೂರ್ತಿ ಎಂಬುವವರು ಯಾರು ಯಾರಿಗೆ ಸಿ.ಡಿ. ತೋರಿಸುತ್ತಿದ್ದರು ಎಂದು ಬರೆದಿದ್ದಾರೆ’ ಎಂದರು.