Bengaluru: ಮಲ್ಲೇಶ್ವರ ಅಭಿವೃದ್ಧಿಗೆ ವಿದ್ಯಾರ್ಥಿಗಳ ಮಾದರಿ

ಮಲ್ಲೇಶ್ವರದ ಪ್ರಾಚೀನ ಇತಿಹಾಸ, ಶ್ರೀಮಂತ ಸಂಸ್ಕೃತಿಯ ಸಮರ್ಪಕ ಅಧ್ಯಯನ ನಡೆಸಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಸ್ಮಾರ್ಚ್‌ ಸಿಟಿಗೆ ಪೂರಕವಾಗಿ ಅಭಿವೃದ್ಧಿಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಬಿಎಂಎಸ್‌ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಮಾದರಿ ತಯಾರಿ ಗಮನ ಸೆಳೆದಿದ್ದಾರೆ.

model of students for malleshwaram development at bengaluru gvd

ಬೆಂಗಳೂರು (ಜು.10): ಮಲ್ಲೇಶ್ವರದ ಪ್ರಾಚೀನ ಇತಿಹಾಸ, ಶ್ರೀಮಂತ ಸಂಸ್ಕೃತಿಯ ಸಮರ್ಪಕ ಅಧ್ಯಯನ ನಡೆಸಿ ಇಂದಿನ ಕಾಲಮಾನಕ್ಕೆ ತಕ್ಕಂತೆ ಸ್ಮಾರ್ಚ್‌ ಸಿಟಿಗೆ ಪೂರಕವಾಗಿ ಅಭಿವೃದ್ಧಿಪಡಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಬಿಎಂಎಸ್‌ ಕಾಲೇಜಿನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಮಾದರಿ ತಯಾರಿ ಗಮನ ಸೆಳೆದಿದ್ದಾರೆ.

ಶನಿವಾರ ಮಲ್ಲೇಶ್ವರದ ಸರ್ಕಾರಿ ಬಾಲಕಿಯರ ಶಾಲೆ ಆವರಣದಲ್ಲಿರುವ ಎಚ್‌.ವಿ.ನಂಜುಂಡಯ್ಯ ಪಾರಂಪರಿಕ ಕಟ್ಟಡದಲ್ಲಿ ಬಿಎಂಎಸ್‌ ಕಾಲೇಜು ವಾಸ್ತುಶಿಲ್ಪ ವಿಭಾಗ ಹಮ್ಮಿಕೊಂಡಿದ್ದ ಮಲ್ಲೇಶ್ವರ ಪರಿಚಯ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬಿಎಂಎಸ್‌ ಕಾಲೇಜಿನ ನಿರ್ದೇಶಕಿ ಡಾ. ಮಮತಾ ಪಿ.ರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇನ್ಮುಂದೆ ಕರ್ನಾಟಕದ ಎಲ್ಲಾ ವಿವಿ, ಕಾಲೇಜುಗಳಿಗೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ

ಬಿಎಂಎಸ್‌ ಕಾಲೇಜು ವಾಸ್ತು ಶಿಲ್ಪ ವಿಭಾಗದ 37 ವಿದ್ಯಾರ್ಥಿಗಳು, 4 ಅಧ್ಯಾಪಕರು ಒಟ್ಟು ಸೇರಿ ಸತತ ನಾಲ್ಕು ತಿಂಗಳು ಮಲ್ಲೇಶ್ವರದ ಇತಿಹಾಸದ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದ್ದಾರೆ. ಮಲ್ಲೇಶ್ವರದ ಭೂದೃಶ್ಯ, ಐತಿಹಾಸಿಕ ಹಿನ್ನೆಲೆ, ರಾಜ ಮನೆತನದ ಅಳ್ವಿಕೆ, ಶಾಸನಗಳಲ್ಲಿ ಮಲ್ಲೇಶ್ವರದ ಉಲ್ಲೇಖ, ಇಲ್ಲಿನ ಪುರಾತನ ಕಾಡು ಮಲ್ಲೇಶ್ವರ ದೇವಸ್ಥಾನ, ಹಳೆಯ ಬಡಾವಣೆಗಳು, ರಸ್ತೆಗಳ ವಿನ್ಯಾಸ, ಸಂಪಿಗೆ ರಸ್ತೆ, ಸ್ಯಾಂಕಿ ರಸ್ತೆ ಮತ್ತು ಮಾರ್ಗೋಸ್‌ ರಸ್ತೆ, ಜನರ ಜೀವನ ಶೈಲಿ ಇತ್ಯಾದಿ ಮಾಹಿತಿಯನ್ನು ವಿದ್ಯಾರ್ಥಿಗಳು ಕಲೆ ಹಾಕಿದ್ದು ಮಾದರಿಯನ್ನು ಅನಾವರಣಗೊಳಿಸಿದ್ದರು. ಈ ಅಧ್ಯಯನಕ್ಕಾಗಿ ಸುಮಾರು 100 ಮಂದಿ ಸ್ಥಳೀಯರ ಜೀವನ ಶೈಲಿಯನ್ನು ದಾಖಲಿಸಿದ್ದಾರೆ.

ಮಲ್ಲೇಶ್ವರ ಕ್ಷೇತ್ರದ ಅಧ್ಯಯನದ ಕುರಿತು ವಿವರಿಸಿದ ವಿದ್ಯಾರ್ಥಿನಿ ಸಾಯಿ ವಾಸ್ತ, ಸುಮಾರು 1.5 ಕಿ.ಮೀ. ಸುತ್ತಳತೆಯಲ್ಲಿ ನಡೆಸಿದ ಈ ಅಧ್ಯಯನದಲ್ಲಿ ಪ್ರಮುಖವಾಗಿ ಪ್ರಾಚೀನ ಮತ್ತು ಇಂದಿನ ಕಟ್ಟಡ, ರಸ್ತೆ ಹಾಗೂ ಸಂಸ್ಕೃತಿಯನ್ನು ತಾಳೆ ಹಾಕಿದ್ದೇವೆ. ಮುಂದೆ ಯಾವ ರೀತಿ ಈ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬಹುದು ಎಂಬುದರ ಬಗ್ಗೆ ವಿನ್ಯಾಸ ಸಿದ್ಧಪಡಿಸಿದ್ದು, ಸುಂದರ ನಗರವಾಗಿ ನಿರ್ಮಾಣಗೊಳ್ಳಲು ಏನೇನು ಮಾಡಬೇಕೆಂಬುದರ ಬಗ್ಗೆ ಅಭಿಪ್ರಾಯವನ್ನು ಕ್ರೋಢೀಕರಿಸಿ ಮಾದರಿ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದರು.

ಪುರುಷರಿಗೇ ಪ್ರತ್ಯೇಕ ವೈದ್ಯಕೀಯ ಸೇವೆ: ಮಲ್ಲೇಶ್ವರಂ, ರಾಮನಗರದಲ್ಲಿ ಪ್ರಾಯೋಗಿಕ ಚಾಲನೆ

ಮಲ್ಲೇಶರ ಇತಿಹಾಸ ಮತ್ತು ಪರಂಪರೆಯನ್ನು ಒಳಗೊಂಡ ಕ್ಷೇತ್ರವಾಗದೆ. ಅದರ ಸೌಂದರ್ಯ ಹೆಚ್ಚಿಸುವ ಕರ್ತವ್ಯ ನಮ್ಮೆಲ್ಲರ ಹೆಗಲ ಮೇಲೆ ಇದೆ. ಬಿಎಂಎಸ್‌ ಕಾಲೇಜಿನ ವಾಸ್ತುಶಿಲ್ಪ ವಿದ್ಯಾರ್ಥಿಗಳ ಅಧ್ಯಯನ ಬಹಳ ಉಪಯುಕ್ತವಾಗಿದೆ. ಅದರಲ್ಲಿ ನೀಡಿರುವ ಅಂಶಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ.
-ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ

Latest Videos
Follow Us:
Download App:
  • android
  • ios