Asianet Suvarna News Asianet Suvarna News

ಜಾತ್ಯತೀತ ಹೆಸರಿಟ್ಟುಕೊಂಡು ಬಿಜೆಪಿ ಜತೆ ಸಖ್ಯ: ಎಚ್ಡಿಕೆಗೆ ಕನಿಷ್ಠ ಕೃತಜ್ಞತೆಯೂ ಇಲ್ಲ: ಚಲುವರಾಯಸ್ವಾಮಿ ಟೀಕೆ

ಸರ್ಕಾರ ಶೀಘ್ರದಲ್ಲಿ ಪತನವಾಗುತ್ತೇ ಎಂಬ ಕುಮಾರಸ್ವಾಮಿ ಹೇಳಿಕೆಯು ಅರ್ಥಹೀನ, ಈಗ ಕಾಂಗ್ರೆಸ್ 136 ಸ್ಥಾನಗಳ ಜನಾದೇಶ ಸಿಕ್ಕಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಹುಮತ ನೀಡಿರುವುದು ಜನತೆ ಈ ಹಿಂದಿನ ಆಡಳಿತ ಬೇಸತ್ತು ನೀಡಿದ್ದಾರೆ, ಕಳೆದ 2013-2018 ರಲ್ಲಿನ ಸಿದ್ದರಾಮಯ್ಯ ಅವರ ಉತ್ತಮ ಆಡಳಿತ ನೆನಪಿಸಿಕೊಂಡು ಬಹುಮತ ನೀಡಿದ್ದಾರೆ ಎಂದ ಚೆಲುವರಾಯಸ್ವಾಮಿ

Minister Chaluvarayaswamy Slams Former CM HD Kumaraswamy grg
Author
First Published Oct 1, 2023, 8:03 AM IST

ಕೋಲಾರ(ಅ.01):  ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪಕ್ಷ ಕೇವಲ 34 ಮಂದಿ ಇದ್ದರೂ ಸಹ ಕಾಂಗ್ರೆಸ್ ಬೆಂಬಲಿಸಿ ಸರ್ಕಾರ ರಚಿಸಲು ಅವಕಾಶ ನೀಡಿತ್ತು. ಆದರೂ ಸಹ ಅವರಿಗೆ ಕನಿಷ್ಠ ಕೃತಜ್ಞತೆಯೂ ಇಲ್ಲ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಟೀಕಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು, ಸರ್ಕಾರ ಶ್ರೀಘ್ರದಲ್ಲಿ ಪತನವಾಗುತ್ತೇ ಎಂಬ ಕುಮಾರಸ್ವಾಮಿ ಹೇಳಿಕೆಯು ಅರ್ಥಹೀನ, ಈಗ ಕಾಂಗ್ರೆಸ್ 136 ಸ್ಥಾನಗಳ ಜನಾದೇಶ ಸಿಕ್ಕಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಹುಮತ ನೀಡಿರುವುದು ಜನತೆ ಈ ಹಿಂದಿನ ಆಡಳಿತ ಬೇಸತ್ತು ನೀಡಿದ್ದಾರೆ, ಕಳೆದ 2013-2018 ರಲ್ಲಿನ ಸಿದ್ದರಾಮಯ್ಯ ಅವರ ಉತ್ತಮ ಆಡಳಿತ ನೆನಪಿಸಿಕೊಂಡು ಬಹುಮತ ನೀಡಿದ್ದಾರೆ ಎಂದರು.

ಜೆಡಿಎಸ್- ಬಿಜೆಪಿ ಮೈತ್ರಿ ಪವಿತ್ರವೋ ಅಪವಿತ್ರವೋ ಜನರೇ ನಿರ್ಧರಿಸಲಿದ್ದಾರೆ: ಸಂಸದ ಡಿ.ಕೆ.ಸುರೇಶ್

ಜಡಿಎಸ್‌ನಲ್ಲೇ ಅಪಸ್ವರ

ಜೆಡಿಎಸ್ ಜಾತ್ಯತೀತ ಪಕ್ಷವೆಂದು ಹೆಸರಿಟ್ಟುಕೊಂಡು ಬಿಜೆಪಿಯೊಂದಿಗೆ ಯಾವರೀತಿ ಹೊಂದಾಣಿಕೆ ಮಾಡಿಕೊಂಡರು. ಅವರಿಗೆ ಮುಂಬರಲಿರುವ ಲೋಕಸಭಾ ಚುನಾವಣೆ ಎದುರಿಸಲು ಸಾಧ್ಯವಾಗದೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಈ ಹೊಂದಾಣಿಕೆಗೆ ಜೆಡಿಎಸ್‌ನಲ್ಲೇ ಅನೇಕ ಮುಖಂಡರಿಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷ ತೊರೆಯಲು ಸಿದ್ಧವಾಗಿದ್ದಾರೆ ಎಂದರು.

ನಾವು ಯಾವ ಅಪರೇಷನ್ ಮಾಡಲ್ಲ ನಮಗೆ ೧೩೬ ಸಂಖ್ಯೆಯ ಬಹುಮತ ಇರುವುದರಿಂದ ನಮಗೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವವರನ್ನು ನಾವು ಬೇಡ ಎನ್ನದೆ ಸ್ವಾಗತಿಸುತ್ತೇವೆ ಎಂದರು.

ಕಾವೇರಿ ಬಗ್ಗೆ ಸಂಸದರಿದೆ ಕಾಳಜಿ ಇಲ್ಲ

ಕಾವೇರಿ ವಿವಾದವನ್ನು ಬಗೆಹರಿಸಲು ೨೫ ಮಂದಿ ಲೋಕಸಭಾ ಸದಸ್ಯರು ಇದ್ದರಲ್ಲ ಅವರಿಗೆ ರಾಜ್ಯದ ಮೇಲೆ ಕಾಳಜಿ ಇದ್ದಿದ್ದರೆ ಪ್ರಧಾನಿ ಅವರ ಬಳಿ ನಿಯೋಗ ತೆರಳಿ ಮಧ್ಯಸ್ಥಿಗೆ ವಹಿಸಲು ಒತ್ತಡ ಹೇರಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ತ್ರಿಶಂಕು ಸ್ಥಿತಿಯಲ್ಲಿ ಸಿಎಂ ಇಬ್ರಾಹಿಂ!

ಶ್ಯಾಮನೂರು ಶಿವಶಂಕರಪ್ಪ ಅವರು ವೀರಶೈವ ಸಮುದಾಯದವರಿಗೆ ಕಾರ್ಯಾಂಗದಲ್ಲಿ ಸೂಕ್ತ ಮಾನ ಸಿಗುತ್ತಿಲ್ಲ ಎಂದು ಹೇಳಿರುವ ಬಗ್ಗೆ ನನಗೆ ಸಮರ್ಪಕವಾದ ಮಾಹಿತಿ ಇಲ್ಲ. ಶಿವಶಂಕರಪ್ಪ ಅವರು ಪಕ್ಷದ ಹಿರಿಯರು. ಅವರು ತಮ್ಮ ಸಮುದಾಯದವರಿಗೆ ಏನಾದರೂ ಅನ್ಯಾಯವಾಗಿದ್ದರೆ ನೇರವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಪ್ರಶ್ನಿಸುವಂತ ಹಕ್ಕು ಅವರಿಗೆ ಇದೆ. ಆದರೆ ಕಾಂಗ್ರೆಸ್ ಪಕ್ಷವು ಜಾತ್ಯಾತೀತ ಪಕ್ಷವಾಗಿದ್ದು ಎಲ್ಲಾ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಹಾಗೂ ಸಮಾನತೆಯಿಂದ ಕಾಣುವಂತ ಪಕ್ಷವೆಂದರು.

ಜಾತಿ ನೋಡಿ ಬಡ್ತಿ ನೀಡುವುದಿಲ್ಲ

ಕಾರ್ಯಾಂಗದಲ್ಲಿ  ಅಧಿಕಾರಿಗಳನ್ನು ಯಾರೂ ಜಾತಿ, ಸಮುದಾಯಗಳನ್ನು ಪ್ರಶ್ನಿಸಿ ಸ್ಥಾನ ಮಾನಗಳು, ಬಡ್ತಿಗಳನ್ನು ನೀಡುವುದಿಲ್ಲ. ಒಂದು ವೇಳೆ ಯಾರಿಗಾದರೂ ಅರ್ಹತೆ ಇದ್ದು ಅವಕಾಶದಿಂದ ವಂಚಿತರಾಗಿದ್ದರೆ ಅವರು ನೇರವಾಗಿ ಮುಖ್ಯ ಮಂತ್ರಿಗಳಿಗೆ ತಿಳಿಸಿದರೆ ಸಮಸ್ಯೆ ಬಗೆ ಹರಿಯುತ್ತದೆ ಎಂದು ಹೇಳಿದರು.

Follow Us:
Download App:
  • android
  • ios