ನನ್ನ ರಾಜಕೀಯ ಗುರು ಯಡಿಯೂರಪ್ಪ: ಸಚಿವ ಪಾಟೀಲ್
ರಾಜಕೀಯ ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನೇರಿ, ಯಶಸ್ವಿಯಾಗಲು ಯಡಿಯೂರಪ್ಪನವರೇ ಪ್ರಮುಖ ಕಾರಣವೆಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ನರಗುಂದ (ಆ.23): ರಾಜಕೀಯ ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನೇರಿ, ಯಶಸ್ವಿಯಾಗಲು ಯಡಿಯೂರಪ್ಪನವರೇ ಪ್ರಮುಖ ಕಾರಣವೆಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದರು. ಸಂಜೆ ಪಟ್ಟಣದ 22ನೇ ವಾರ್ಡ್‌ನಲ್ಲಿನ ಸರಸ್ವತಿ ನಗರ, ಅಧ್ಯಾಪಕ ನಗರದಲ್ಲಿ 6.25 ಕೋಟಿ ವೆಚ್ಚದ ಚರಂಡಿ ಹಾಗೂ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಆನಂತರ ಶ್ರೀ ಮಾರುತಿ ದೇವಸ್ಥಾನದಲ್ಲಿ ಮಾತನಾಡಿ, ರಾಜಕೀಯ ಜೀವನದಲ್ಲಿ ಹಲವಾರು ಮೆಟ್ಟಿಲುಗಳನ್ನೇರಿ, ಯಶಸ್ವಿಯಾಗಲು ಯಡಿಯೂರಪ್ಪನವರೇ ಎಂದು ಹೇಳಿದರು.
ಕಲ್ಯಾಣಮ್ಮನವರ ಇಚ್ಛೆಯಂತೆ ನಿರ್ಮಿಸಲಾದ ಸಿದ್ಧೇಶ್ವರ ದೇವಸ್ಥಾನದ ಮಾರ್ಗವನ್ನು .65 ಲಕ್ಷ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲಾಗುವುದು. ನಗರದ ಅಭಿವೃದ್ಧಿಗೆ ಸದ್ಯದಲ್ಲಿಯೇ . 10 ಕೋಟಿ ಅನುದಾನದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ನಾನು ಬಿಜೆಪಿ ಸೇರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಾರಣ. ನನ್ನ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗಾಗಿ . 18 ಸಾವಿರ ಕೋಟಿ ಅನುದಾನ ನೀಡಿದ್ದೇನೆ. ನರಗುಂದ-ಗಜೇಂದ್ರಗಡ-ಕುಷ್ಟಗಿ ಈ ಮಾರ್ಗದ ಮರು ಡಾಂಬರೀಕರಣಕ್ಕೆ 440 ಕೋಟಿ ಅನುದಾನದ ಆದೇಶ ನೀಡಿದ್ದೇನೆ.
Gadag: ಕಾಂಗ್ರೆಸ್ ಮೊಟ್ಟೆ ರಾಜಕಾರಣ ನಿಲ್ಲಿಸಲಿ: ಸಚಿವ ಸಿ.ಸಿ.ಪಾಟೀಲ್
ಉ.ಕರ್ನಾಟಕ ಭಾಗದ ಕೆಲವು ಸೇತುವೆಗಳ ನಿರ್ಮಾಣಕ್ಕೆ . 725 ಕೋಟಿ, ಹೊಳೆಆಲೂರ ಹತ್ತಿರದ ಸೇತುವೆ ನಿರ್ಮಾಣಕ್ಕೆ . 25 ಕೋಟಿ ನೀಡಲಿದ್ದೇನೆ. ನಗರದ ಸಿದ್ಧೇಶ್ವರ ಮಹಾವಿದ್ಯಾಲಯದ ಅಭಿವೃದ್ಧಿಗೆ ಈಗಾಗಲೇ . 6 ಕೋಟಿ ಅನುದಾನ ನೀಡಿದ್ದೇನೆ. 2023ರ ಚುನಾವಣೆಗೆ ಹೋಗುವುದರೊಳಗಾಗಿ 100ಕ್ಕೆ 100ರಷ್ಟುಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಿಯೇ ಹೋಗುತ್ತೇನೆ ಎಂದು ಹೇಳಿದರು. ಎಸ್ .ಆರ್. ಹಿರೇಮಠ ಮಾತನಾಡಿ, ಕಾಂಗ್ರೆಸ್ಸೇತರ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಹಿಂದೆಂದೂ ಕಾಣದ ಅಭಿವೃದ್ಧಿ ಕೆಲಸಗಳನ್ನು ಕಾಣುತ್ತಿರುವುದೇ ಪ್ರಮುಖ ಸಾಕ್ಷಿಯಾಗಿದೆ ಎಂದು ಹೇಳಿದರು.
ಗ್ರಾಮಗಳ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಿ: ಎಚ್.ಕೆ.ಪಾಟೀಲ್
ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಬಿಜೆಪಿ ಅಧ್ಯಕ್ಷ ಗುರಣ್ಣ ಆದೆಪ್ಪನವರ, ಅಜ್ಜಪ್ಪ ಹುಡೇದ, ಉಮೇಶಗೌಡ ಪಾಟೀಲ, ಎಂ. ಎಸ್. ಪಾಟೀಲ, ಪುರಸಭೆ ಸದಸ್ಯೆ ರೇಣವ್ವ ಕಲಾರಿ, ಚಂದ್ರಗೌಡ ಪಾಟೀಲ, ಡಾ. ಜಿ.ಎಸ್. ನುಗ್ಗಾನಟ್ಟಿ, ಎನ್.ವಿ. ಮೇಟಿ, ಸುಭಾಸ ತಳಕೇರಿ, ಪಂಚಾಕ್ಷರಯ್ಯ ವೀರಕ್ತಮಠ, ಬಸವಂತ ಯಾದವ, ನಿಂಗಪ್ಪ ನಾಗನೂರ, ಟಿ.ಆರ್. ಉಳ್ಳಾಗಡ್ಡಿ, ಪುರಸಭೆ ಮುಖ್ಯಾಧಿಕಾರಿ ಅಮಿತ ತಾರದಾಳೆ, ಎಂ.ಎಸ್. ಹಿರೇಗೌಡ್ರ, ಡಿ.ಎಂ. ಅಳಗವಾಡಿ ಉಪಸ್ಥಿತರಿದ್ದರು.