Asianet Suvarna News Asianet Suvarna News

Gadag: ಕಾಂಗ್ರೆಸ್‌ ಮೊಟ್ಟೆ ರಾಜಕಾರಣ ನಿಲ್ಲಿಸಲಿ: ಸಚಿವ ಸಿ.ಸಿ.ಪಾಟೀಲ್‌

ರಾಜ್ಯದಲ್ಲಿ ಕಾಂಗ್ರೆಸ್‌ ಮೊಟ್ಟೆವಿಷಯವನ್ನೇ ಇಟ್ಟುಕೊಂಡು ರಾಜಕೀಯ ಮಾಡಲು ಮುಂದಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆದಿರುವುದನ್ನು ಬಲವಾಗಿ ಖಂಡಿಸುತ್ತೇನೆ.

minister cc patil slams to congress at gadag gvd
Author
Bangalore, First Published Aug 21, 2022, 9:25 PM IST

ಗದಗ (ಆ.21): ರಾಜ್ಯದಲ್ಲಿ ಕಾಂಗ್ರೆಸ್‌ ಮೊಟ್ಟೆವಿಷಯವನ್ನೇ ಇಟ್ಟುಕೊಂಡು ರಾಜಕೀಯ ಮಾಡಲು ಮುಂದಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆಎಸೆದಿರುವುದನ್ನು ಬಲವಾಗಿ ಖಂಡಿಸುತ್ತೇನೆ. ಆದರೆ ಇದನ್ನೇ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ಕಾಂಗ್ರೆಸ್ಸಿಗರು ತಕ್ಷಣವೇ ನಿಲ್ಲಿಸಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರ ಸಾವರ್ಕರ್‌ ವಿಷಯವಾಗಿ ಸಿದ್ದರಾಮಯ್ಯ ಅನಗತ್ಯ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಕಾಲಾಪಾನಿಯಂತ ಕಠಿಣ ಶಿಕ್ಷೆ ಅನುಭವಿಸಿದ ವೀರ ಸಾವರ್ಕರ್‌ ಅವರ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಮಾತನಾಡುತ್ತಿರುವುದು ಅವರಂತ ಹಿರಿಯ ನಾಯಕರಿಗೆ ಶೋಭೆ ತರುವುದಿಲ್ಲ. ನೂರಾರು ಕೋಟಿ ಹಗರಣದಲ್ಲಿ ಸಿಲುಕಿದ ವ್ಯಕ್ತಿಗಳು ಜೈಲಿನಿಂದ ಹೊರ ಬಂದಾಗ ವಿಜಯೋತ್ಸವ ಆಚರಿಸುವ ನಿಮ್ಮ ಪಕ್ಷದವರು, 27 ವರ್ಷಕ್ಕೂ ಹೆಚ್ಚು ಕಾಲ ಕಠಿಣ ಕರಿನೀರ ಶಿಕ್ಷೆ ಅನುಭವಿಸಿದ ವೀರ ಸ್ವಾತಂತ್ರ್ಯ ಸೇನಾನಿ ಸಾವರ್ಕರ್‌ ಬಗ್ಗೆ ನಡೆದುಕೊಳ್ಳುತ್ತಿರುವುದನ್ನು ಜನ ಗಮನಿಸುತ್ತಿದ್ದಾರೆ ಎಂದರು.

Gadag: ಸಾವರ್ಕರ್ ಇವರ ಆರಾಧ್ಯ ದೈವ: ಇವರ ಮನೆ ಹೆಸರೂ ವೀರ ಸಾವರ್ಕರ್!

ಸಾವರ್ಕರ್‌ ಬಗ್ಗೆ ಹಿಂದಿನ ಪ್ರಧಾನಿ ದಿ. ಇಂದಿರಾಗಾಂಧಿಯವರೇ ಅಂಚೆ ಚೀಟಿ ಬಿಡುಗಡೆ ಮಾಡಿದ್ದಾರೆ. ಸಾವರ್ಕರ್‌ ಕುರಿತು ಸಾಕ್ಷ್ಯ ಚಿತ್ರ ಮಾಡಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ, ತಮ್ಮ ಪಕ್ಷದ ಹಿರಿಯರು ಒಪ್ಪಿರುವ ನಾಯಕರನ್ನು ಇವರು ಒಪ್ಪುವುದಿಲ್ಲ ಎಂದರೆ ಇವರ ಮನಸ್ಥಿತಿ ಎಷ್ಟೊಂದು ಕೀಳು ಮಟ್ಟಕ್ಕೆ ಹೋಗಿದೆ ಎನ್ನುವುದು ಅರ್ಥವಾಗುತ್ತದೆ.

ಸಿದ್ದರಾಮಯ್ಯ ಹಿರಿಯ ನಾಯಕರು, ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರ ಮೇಲೆ ಮೊಟ್ಟೆಎಸೆದಿರುವುದು ಖಂಡನಾರ್ಹ. ಇದರಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ, ಆದರೆ ವಿರೋಧ ಪಕ್ಷದವರು ಇದನ್ನೇ ಕರ್ತವ್ಯ ಲೋಪದ ಹೆಸರಿನಲ್ಲಿ ಗೊಂದಲ ಸೃಷ್ಟಿಮಾಡಿ, ರಾಜಕೀಯ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮೊಟ್ಟೆಎಸೆದವರು ಯಾರು ಎನ್ನುವುದು ತನಿಖೆಯಿಂದ ಹೊರಬರಲಿದೆ. ತಪ್ಪಿತಸ್ಥ ಯಾರೇ ಆಗಿದ್ದರೂ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಈಗಾಗಲೇ ಸೂಚಿಸಿದ್ದಾರೆ ಆದರೂ ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಪ್ರಯತ್ನವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇವರಾಜ ಅರಸು ಜಯಂತಿ ವೇಳೆ ಗಿಚ್ಚಿ ಗಿಲಿಗಿಲಿ..!

ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್‌,ಉಪಾಧ್ಯಕ್ಷ ಸುನಂದಾ ಬಾಕಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಎಎಂಸಿ ಅಧ್ಯಕ್ಷ ಎಂ.ಎಸ್‌.ಕರಿಗೌಡ್ರ, ಬಿಜೆಪಿ ಮುಖಂಡರಾದ ರವಿ ದಂಡಿನ, ವಿಜಯ ಗಡ್ಡಿ, ಭೀಮ್‌ಸಿಂಗ್‌ ರಾಥೋಡ್‌, ಪ್ರಶಾಂತ್‌ ನಾಯ್ಕರ್‌, ಶಿವರಾಜ್‌ ಹಿರೇಮನಿ ಪಾಟೀಲ್‌ ಮುಂತಾದವರು ಹಾಜರಿದ್ದರು.

Follow Us:
Download App:
  • android
  • ios