ಗದಗ,(ಜ.26): ಗದಗ ಜಿಲ್ಲಾ ಉಸ್ತುವಾರಿ ಹಾಗೂ ಗಣಿ ಮತ್ತು ಭೂವಿಜ್ಞಾನ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಸಿ‌.ಸಿ ಪಾಟೀಲ್ ಆರೋಗ್ಯದಲ್ಲಿ ಏರುಪೇರಾಗಿದೆ.

ಇಂದು (ಭಾನುವಾರ) ಸಿ‌.ಸಿ ಪಾಟೀಲ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರು ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಗದಗ: ಡಿಸಿ, ಸಿಇಒ ತರಾಟೆಗೆ ತೆಗೆದುಕೊಂಡ ಸಚಿವ ಸಿ.ಸಿ. ಪಾಟೀಲ

ಆ್ಯಸಿಡಿಟಿಯಿಂದಾಗಿ ಹೈಬಿಪಿ ಸಮಸ್ಯೆಯಾಗಿತ್ತು.ಇದರಿಂದ ಅವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ನೇರವಾಗಿ ನರಗುಂದಕ್ಕೆ ತೆರಳಿದ್ದಾರೆ ಎಂದು ಸಿ.ಸಿ‌ ಪಾಟೀಲ್ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಒಟ್ಟಿನಲ್ಲಿ ಸದ್ಯ ಸಿಸಿ ಪಾಟೀಲ್ ಅವರು ಆರೋಗ್ಯವಾಗಿದ್ದು, ನರಗುಂದದ ನಿವಾಸದಲ್ಲಿದ್ದಾರೆ ಎಂದು ತಿಳಿದುಬಂದಿದೆ.