ನಿಖಿಲ್ ಕುಮಾರಸ್ವಾಮಿ ಕಣ್ಣೀರು: ಅದು ಸ್ವಲ್ಪ ಜನಕ್ಕೆ ಮಾತ್ರ ಬರುತ್ತೆ, ಅದೊಂದು ಕಲೆ, ಭೈರತಿ ಸುರೇಶ್ ವ್ಯಂಗ್ಯ
ನಿಖಿಲ್ ಕಣ್ಣೀರು ಕುರಿತು ಸಚಿವರು ವ್ಯಂಗ್ಯವಾಡಿದ್ದು ಅದು ಸ್ವಲ್ಪ ಜನಕ್ಕೆ ಮಾತ್ರ ಬರುತ್ತೆ, ಅದು ಒಂದು ಕಲೆ. ನಾನು ಯಾವುತ್ತು ಚುನಾವಣೆಯಲ್ಲಿ ಕಣ್ಣೀರು ಹಾಕಿಲ್ಲ. ಸೆಂಟಿಮೆಂಟ್ ನಿಂದ ಕೇಳಿದ್ದಾರೆ. ಜನರಿಗೆ ಗೊತ್ತಿದೆ, ಇಲ್ಲಿ ಯಾರು ಕೆಲಸ ಮಾಡಿದ್ದಾರೆ. ಯಾರಿಗೆ ಓಟ್ ಹಾಕಬೇಕು, ಯಾರಿಗೆ ಗೆಲ್ಲಿಸಬೇಕು ಅಂತಾ ಜನರಿಗೆ ಗೊತ್ತು: ಭೈರತಿ ಸುರೇಶ್
ಕೋಲಾರ(ನ.01): ಕಾಂಗ್ರೆಸ್ ನ ಪಕ್ಷದ ಐದು ಯೋಜನೆಗಳು ನಿಲ್ಲುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾವತ್ತಿನವರೆಗೂ ಇರುತ್ತೂ ಅಲ್ಲಿಯವರೆಗೂ ನಡೆಯುತ್ತೆ. ಮುಂದಿನ 5 ವರ್ಷವೂ ಸಹ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ. ಆವಾಗಲೂ ಸಹ ಯೋಜನಗಳು ಮುಂದುವರೆಯಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ಭೈರತಿ ಸುರೇಶ್, ಶಕ್ತಿ ಯೋಜನೆ ಬಗ್ಗೆ ಮಹಿಳೆಯೊಬ್ಬರ ಮೇಲ್ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. 5 ಯೋಜನೆ ಸಹ ಮುಂದುವರೆಯಲಿದೆ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಕುರಿತು ಎಐಸಿಸಿ ಖರ್ಗೆ ಅವರಿಗೆ ಸ್ವಲ್ಪ ಗೊಂದಲವಿತ್ತು. ಸಿಎಂ ಮತ್ತು ಡಿಸಿಎಂ ಅವರು ಈ ಬಗ್ಗೆ ಸ್ಪಷ್ಟನೆ ಕೊಟ್ಟು, ನಿವಾರಣೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ನನ್ನ ವಿರುದ್ಧ ಭ್ರಷ್ಟಾಚಾರ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ: ಬೈರತಿ ಸುರೇಶ್‌ಗೆ ಸಂಸದೆ ಕರಂದ್ಲಾಜೆ ಸವಾಲು
ಹಾವೇರಿಯಲ್ಲಿ ರೈತರ ಕಲ್ಲು ತೂರಾಟ ಬಗ್ಗೆ ಮಾತನಾಡಿದ ಸಚಿವ ಭೈರತಿ ಸುರೇಶ್ ಅವರು, ರೈತರ ಜಾಗ ಯಾರು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸಿಎಂ ಮತ್ತು ಜಮೀರ್ ಅಹಮದ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ರೈತರ ಜಮೀನು ರೈತರ ಜಮೀನಿಗಾಗಿ ಉಳಿಯುತ್ತೆ. ಬಿಜೆಪಿ ಮತ್ತು ಜೆಡಿಎಸ್ ನವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತ ರಾಷ್ಟ್ರದಲ್ಲಿ ಸಮಾನವಾದ ಹಕ್ಕಿದೆ. ರೈತರ ಜಮೀನು ವಕ್ಫ್‌ಗೆ ಕೊಡಕ್ಕೆ ಅಗಲ್ಲ. ವಕ್ಫ್ ಜಮೀನು ರೈತರಿಗೆ ಕೊಡುವುದಕ್ಕೆ ಆಗಲ್ಲ. ಒಂದು ಇಂಚು ಬೇರೆಯವರಿಗೆ ಹೋಗದಂತೆ ಸರ್ಕಾರ ನೋಡಿಕೊಳ್ಳುತ್ತೆ. ರಾಜಕಾರಣಗೋಸ್ಕರ ತಂದಿಡುವ ಕೆಲಸ ನಾವು ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಪಚುನಾವಣೆಯ ಮೂರು ಕಡೆ ಕಾಂಗ್ರೆಸ್ ಜಯಗಳಿಸಲಿದೆ. ನಿಖಿಲ್ ಕಣ್ಣೀರು ಕುರಿತು ಸಚಿವರು ವ್ಯಂಗ್ಯವಾಡಿದ್ದು ಅದು ಸ್ವಲ್ಪ ಜನಕ್ಕೆ ಮಾತ್ರ ಬರುತ್ತೆ, ಅದು ಒಂದು ಕಲೆ. ನಾನು ಯಾವುತ್ತು ಚುನಾವಣೆಯಲ್ಲಿ ಕಣ್ಣೀರು ಹಾಕಿಲ್ಲ. ಸೆಂಟಿಮೆಂಟ್ ನಿಂದ ಕೇಳಿದ್ದಾರೆ. ಜನರಿಗೆ ಗೊತ್ತಿದೆ, ಇಲ್ಲಿ ಯಾರು ಕೆಲಸ ಮಾಡಿದ್ದಾರೆ. ಯಾರಿಗೆ ಓಟ್ ಹಾಕಬೇಕು, ಯಾರಿಗೆ ಗೆಲ್ಲಿಸಬೇಕು ಅಂತಾ ಜನರಿಗೆ ಗೊತ್ತು. ಕಾಂಗ್ರೆಸ್ ಸರ್ಕಾರವಿದೆ, ಕಾಂಗ್ರೆಸ್ ಎಂಎಲ್‌ಎ ಇದ್ದರೆ, ಕ್ಷೇತ್ರ ಅಭಿವೃದ್ದಿಯಾಗುತ್ತೆ ಅನ್ನೋದು ನನ್ನ ಭಾವನೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂದು ತಿಳಿಸಿದ್ದಾರೆ.