ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?
ಹರಿಪ್ರಸಾದ್ ಅವರದ್ದು ವೈಯಕ್ತಿಕ ಹೇಳಿಕೆಯಾಗಿದ್ದು, ಅವರ ಮಾತಿಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು.
ಮಾಲೂರು (ಸೆ.15): ಹರಿಪ್ರಸಾದ್ ಅವರದ್ದು ವೈಯಕ್ತಿಕ ಹೇಳಿಕೆಯಾಗಿದ್ದು, ಅವರ ಮಾತಿಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದರು. ಸರ್ಕಾರಿ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಭಾಗವಹಿಸುವ ಮುನ್ನ ಪತ್ರಕರ್ತರೂಡನೆ ಮಾತನಾಡುತ್ತ ಪಕ್ಷದಲ್ಲಿ ಯಾರು ದೊಡ್ಡವರಲ್ಲ. ನಮಗೆ ಹೈಕಮಾಂಡ್ ಇದೆ, ಅದರ ಅಧ್ಯಕ್ಷರು ಈಗಾಗಲೇ ಹರಿಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದರು. ವಿರೋಧ ಪಕ್ಷದವರನ್ನು ಪಕ್ಕಕ್ಕೆ ಕುಳಿಸಿಕೊಂಡು ಹೀಗೆ ಪಕ್ಷದ ವಿರುದ್ಧವಾಗಿ ಮಾತನಾಡುವುದು ಸರಿ ಅಲ್ಲ ಎಂದರು.
ಹರಿಪ್ರಸಾದ್ ಹೇಳಿಕೆ ಬಗ್ಗೆ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆ ಬಗ್ಗೆ ಪ್ರಸ್ತಾವಿಸಿ ಮಾತನಾಡುತ್ತ ಬೆಳಗಾದ್ರೆ ಸಾಕು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡ್ತ ಇದ್ದ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡು ಅಮಾನತ್ತು ಮಾಡದ ಬಿಜೆಪಿಗರು ಈಗ ಮಾತನಾಡುತ್ತಿದ್ದಾರೆ ಎಂದ ಸುರೇಶ್ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗ, ಇಬ್ಬರು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುವ ಜತೆಯಲ್ಲಿ ಮುಖ್ಯಮಂತ್ರಿ ಸ್ಥಾನ 2 ಸಾವಿರ ಕೋಟಿಗೆ ಬಿಕರಿಯಾಗಿದೆ ಎಂದ ಯತ್ನಾಳ್ ವಿರುದ್ಧ ಮೊದಲು ಬಿಜೆಪಿ ಪಕ್ಷ ಕ್ರಮ ಕೈಗೊಳ್ಳಿ ಎಂದ ಭೈರತಿ ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಬೇರೆಯವರ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನದ ಬಗ್ಗೆ ಶಾಸಕ ವಿಜಯೇಂದ್ರ ಹೇಳಿದ್ದೇನು?
ಬಿಜೆಪಿ ಸೀಟ್ ಗಾಗಿ 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧ ಮಾತನಾಡಿದ ಸಚಿವ ಭೈರತಿ ಸುರೇಶ್, ಸಿಸಿಬಿ ವಶದಲ್ಲಿರುವ ಚೈತ್ರಾ ಕುಂದಾಪುರ ವಿಷಜಂತು ಮಹಿಳೆಯಾಗಿದ್ದು , ಜಾತಿ ಜನಾಂಗಗಳ ಮಧ್ಯೆ ತಂಡಿಡುವ ವಿಷ ಸರ್ಪ ಆಗಿದ್ದಾಳೆ ಎಂದರು. ಆಕೆಯ ಈ ಕೆಲಸದಿಂದ ನನಗೂ ಆಶ್ಚರ್ಯ ತಂದಿದೆ ಎಂದ ಸಚಿವರು ಒಳ್ಳೋಳ್ಳೆ ಮಾತು ಹೇಳಿ ಅಮಾಯಕರನ್ನು ವಂಚಿಸುವವರು ಯಾವುದೇ ಪಕ್ಷದವರಾಗಲಿನ ಜೈಲಿಗೆ ಹೋಗಬೇಕು.ಹಣಕ್ಕಾಗಿ ನಾಟಕ ಪಾತ್ರಧಾರಿಗಳನ್ನು ಸೃಷ್ಟಿ ಮಾಡಿರುವ ಕೃತ್ಯ ಖಂಡನೀಯ,ಇಂತವರು ಸಮಾಜಕ್ಕೆ ಮಾರಕ ಎಂದರು. ಬಿಜೆಪಿ-ಜೆಡಿಎಸ್ ನ ಒಳಒಪ್ಪಂದ ಬಗ್ಗೆ ಮೊದಲಿನಿಂದಲೂ ಹೇಳ್ತಾ ಬಂದಿದ್ದು, ಈಗ ಬಹಿರಂಗವಾಗಿದೆ. ಇವರ ಮೈತ್ರಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಕುಗ್ಗಿಸಲು ಸಾಧ್ಯ ಇಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಕಾಂಗ್ರೆಸ್ ಪಾಲಾಗುವುದರಲ್ಲಿ ಸಂಶಯ ಇಲ್ಲ ಎಂದರು.