Asianet Suvarna News Asianet Suvarna News

ಡಿಕೆಶಿ- ಸಿದ್ದು ಒಗ್ಗೂಡಿಸುವ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ: ಸಚಿವ ಶ್ರೀರಾಮುಲು

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಜೋಡಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆ ಎಂಬ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು. 

Minister B Sriramulu Talks Over Siddaramaiah and DK Shivakumar gvd
Author
First Published Oct 30, 2022, 10:35 PM IST

ಧಾರವಾಡ (ಅ.30): ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಜೋಡಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ಭಾರತ ಜೋಡೋ ಯಾತ್ರೆ ಎಂಬ ಬೂಸ್ಟರ್‌ ಡೋಸ್‌ ಫೇಲ್‌ ಆಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಮುಖ್ಯಮಂತ್ರಿ ಖುರ್ಚಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನಡುವೆ ಶುರವಾಗಿರುವ ಕದನಕ್ಕೆ ತೆರೆ ಎಳೆದು ಇಬ್ಬರನ್ನೂ ಒಗ್ಗೂಡಿಸಲು ರಾಹುಲ್‌ ಗಾಂಧಿ ಯಾತ್ರೆ ಮೂಲಕ ನಡೆಸಿದ ಪ್ರಯತ್ನ ಫಲ ನೀಡಿಲ್ಲ ಎಂದ ಅವರು, ಕಾಂಗ್ರೆಸ್‌ ಸ್ವಾರ್ಥ ರಾಜಕೀಯಕ್ಕೆ ಎಸ್ಸಿ-ಎಸ್ಟಿಸಮಾಜಕ್ಕೆ ಅನ್ಯಾಯ ಮಾಡಿದೆ. ಕಾಂಗ್ರೆಸ್‌ ಸರ್ಕಾರದ ಕಪಟ ರಾಜಕೀಯ ಜನತೆಯೂ ಅರಿತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಖಚಿತ. ಕಾಂಗ್ರೆಸ್‌ ನೆಲಸಮವಾಗಲಿದೆ ಎಂದರು.

ಡಿಸಿಎಂಗೆ ಬೇಡಿಕೆ ಇಟ್ಟಿಲ್ಲ: ಸಚಿವ ಸಂಪುಟ ವಿಸ್ತರಣೆಯಲ್ಲಿ ಉಪಮುಖ್ಯಮಂತ್ರಿ ಹುದ್ದೆಗಾಗಿ ನಾನು ಬೇಡಿಕೆ ಇಟ್ಟಿಲ್ಲ. ಅದನ್ನು ಸರ್ಕಾರವೇ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದ ಅವರು, ನಾಲ್ಕು ದಶಕಗಳ ಕಾಲದ ಎಸ್ಸಿ-ಎಸ್ಟಿಸಮಾಜದ ಮೀಸಲಾತಿ ಬೇಡಿಕೆ ಹೆಚ್ಚಿಸಿದ ಬಿಜೆಪಿ ಸರ್ಕಾರಕ್ಕೆ ಕೃತಜ್ಞೆ ಸಲ್ಲಿಸಲು ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಲಾಗಿದೆಯೇ ವಿನಃ ಡಿಸಿಎಂ ಹುದ್ದೆಗೆ ಶಕ್ತಿ ಪ್ರದರ್ಶನ ತೋರಿಸಲು ಅಲ್ಲ. ಹೀಗಾಗಿ, ಸಮಾವೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಬೇಕು ಎಂದು ಮನವಿ ಮಾಡಿದರು.

ಬಳ್ಳಾರಿ ಎಸ್ಟಿ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ: ಸಚಿವ ಶ್ರೀರಾಮುಲು

ಬಿಜೆಪಿ ಎಸ್ಟಿ ಸಮಾಜಕ್ಕೆ ಸರ್ಕಾರದಲ್ಲಿ ಆದ್ಯತೆ ನೀಡಿದೆ. ರಮೇಶ ಜಾರಕಿಹೊಳಿ ಎಂದಿಗೂ ಸಮಾಜದ ಜತೆಗೆ ಇದ್ದಾರೆ. ಅವರಿಗೆ ಸಚಿವ ಸ್ಥಾನ ನೀಡುವುದು ಸರ್ಕಾರದ ತೀರ್ಮಾನ. ಸಮಾವೇಶಕ್ಕೆ ಅವರು ಸೇರಿದಂತೆ ಸಮಾಜದ ಎಲ್ಲ ನಾಯಕರಿಗೆ ಆಹ್ವಾನಿಸಿದೆ ಎಂದು ಪ್ರಶ್ನೆಯೊಂದಕ್ಕೆ ಶ್ರೀರಾಮುಲು ಉತ್ತರಿಸಿದರು.

ಮೀಸಲಾತಿ ವಿಚಾರದಲ್ಲಿ ಬೆನ್ನಿಗೆ ಕಾಂಗ್ರೆಸ್‌ ಚೂರಿ: ಪರಿಶಿಷ್ಟಜಾತಿ-ಪಂಗಡಗಳ ಮೀಸಲಾತಿ ಹೆಚ್ಚಿಸಿದ ಸರ್ಕಾರವು ಪಂಚಮಸಾಲಿ ಸೇರಿ ಯಾವುದೇ ಸಮುದಾಯಗಳಿಗೆ ಮೀಸಲಾತಿ ನೀಡುವ ವಿಚಾರಕ್ಕೆ ನನ್ನ ಅಭ್ಯಂತರ ಇಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟಪಂಗಡಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಬೆನ್ನಿಗೆ ಚೂರಿ ಹಾಕಿತ್ತು. ಅಧಿಕಾರದಲ್ಲಿದ್ದಾಗಲೇ ಮೀಸಲಾತಿ ನೀಡಬಹುದಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಇಲ್ಲದ ಕಾಂಗ್ರೆಸ್‌ ಪಕ್ಷ ಮೀಸಲಾತಿ ಹೆಚ್ಚಿಸಲಿಲ್ಲ ಎಂದರು.

ಯಾವುದೇ ರೀತಿಯ ರಾಜಕೀಯ ಉದ್ದೇಶದಿಂದ ನಾವು ಮೀಸಲಾತಿ ನೀಡಿಲ್ಲ. ಅನೇಕ ದಶಕಗಳ ಕಾಲ ಪರಿಶಿಷ್ಟರು ಮೀಸಲಾತಿ ಹೋರಾಟ ನಡೆಸಿದ್ದರು. ಹಿಂದಿನ ಯಾವುದೇ ಸರ್ಕಾರ ಮಾಡದ ಕೆಲಸ ನಮ್ಮ ಸರ್ಕಾರ, ನಮ್ಮ ಮುಖ್ಯಮಂತ್ರಿಗಳು ರಾಜಕೀಯ ಇಚ್ಛಾಶಕ್ತಿಯಿಂದ ಮೀಸಲಾತಿ ನೀಡಿದ್ದಾರೆ ಎಂದು ಅವರು ಹೇಳಿದರು. ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡುವ ಮುನ್ನ ಕುಲಶಾಸ್ತ್ರ ಅಧ್ಯಯನ ಆಗಬೇಕು. ಆ ನಂತರವಷ್ಟೇ ಮೀಸಲಾತಿ ಕೊಡಬಹುದು ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ದಲಿತರು, ಹಿಂದುಳಿದ ನಾಯಕರನ್ನು ತುಳಿದಿದ್ದಾರೆ: ಸಚಿವ ಶ್ರೀರಾಮುಲು

ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡಿದ್ದಕ್ಕೆ ಮುಖ್ಯಮಂತ್ರಿಗಳಿಗೆ, ರಾಜ್ಯ ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಇದೇ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಪರಿಶಿಷ್ಟಪಂಗಡದ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ರಾಜ್ಯವ್ಯಾಪಿ ಪ್ರವಾಸ ಮಾಡಿ, ಬಳ್ಳಾರಿ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಅವರು ವಿವರಿಸಿದರು.

Follow Us:
Download App:
  • android
  • ios