* ಬಿಜೆಪಿ ರಾಜ್ಯದಲ್ಲಿ, ದೇಶದಲ್ಲಿ ಆಲದ ಮರವಾಗಿ ಬೆಳೆದಿದೆ* ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ* ಸಿಎಂ ಬೊಮ್ಮಾಯಿ ಚಾಣಕ್ಯನ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ
ಮಂಗಳೂರು(ಏ.13): ಕಾಂಗ್ರೆಸ್(Conress) ಪಕ್ಷದಲ್ಲಿ ಸಿದ್ದರಾಮಯ್ಯ(Sriramulu) ಯಾರಿಗೂ ಬೇಡವಾದ ಕೂಸಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ವ್ಯಂಗ್ಯವಾಡಿದ್ದಾರೆ. ಬಿಜೆಪಿಯನ್ನು(BJP) ಕಿತ್ತೊಗೆಯಿರಿ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಗರದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನ ಪ್ರತಿಭಟನಾ ರಾರಯಲಿಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಹೇಳಿದ್ದಾರೆ.
ಬಿಜೆಪಿಯನ್ನು ಕಿತ್ತೆಸೆಯೋಕೆ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಬಿಜೆಪಿ ರಾಜ್ಯದಲ್ಲಿ, ದೇಶದಲ್ಲಿ ಆಲದ ಮರವಾಗಿ ಬೆಳೆದಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ ಎಂದರು.
ಸಿಎಂ ಬೊಮ್ಮಾಯಿ(Basavaraj Bommai) ಅವರು ಚಾಣಕ್ಯನ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ. ಪ್ರತಿಪಕ್ಷ ಗಳಿಗೆ ಇದನ್ನೆಲ್ಲಾ ತಡೆಯೋದಿಕ್ಕೆ ಆಗುತ್ತಿಲ್ಲ. ಸಿದ್ದರಾಮಯ್ಯ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ಮಹಿಳೆಯರಿಗೆ ಬಂಪರ್ ಆಫರ್ ಘೋಷಿಸಿದ ಶ್ರೀರಾಮುಲು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಅಷ್ಟೇ
ಸಿದ್ದರಾಮಯ್ಯಗೆ ಮಾನಸಿಕ ಖಿನ್ನತೆ:
ಬಳ್ಳಾರಿ: ಪಕ್ಷದಲ್ಲಿ ಒಂಟಿಯಾಗಿರೋ ಸಿದ್ದರಾಮಯ್ಯ (Siddaramaiah) ಮಾನಸಿಕ ಖಿನ್ನತೆಗೆ ಒಳಗಾಗಿ ಏನೇನೋ ಮಾತನಾಡ್ತಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು ಹರಿಹಾಯ್ದಿದ್ದಾರೆ. ಬಳ್ಳಾರಿಯಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯ ತುಘಲಕ್ ರಾಜನಂತಾಗಿದ್ದಾರೆ. ಅವರ ಮಾತು ನೋಡಿದ್ರೆ ನಾಲಿಗೆ ಮೇಲೆ ಹಿಡಿತ ತಪ್ಪಿದೆ ಅನಿಸುತ್ತದೆ ಎಂದು ಶ್ರೀರಾಮುಲು ವಾಗ್ದಾಳಿ ನಡೆಸಿದ್ದರು.
ಸಿದ್ದರಾಮಯ್ಯ ತಮ್ಮಷ್ಟಕ್ಕೆ ತಾವು ಬುದ್ದಿವಂತರೆಂದು ಕೊಂಡಿದ್ದು, ಹೀಗಾಗಿ ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ರಾಜಕಾರಣಕ್ಕಾಗಿ ಗುರು ಪರಂಪರೆಯನ್ನು ಅವಮಾನ ಮಾಡಿದ್ದಾರೆ. ಗುರುಪರಂಪರೆ ಅಷ್ಟೇ ಅಲ್ಲ ಹನುಮನ ಬಗ್ಗೆ ಈ ಹಿಂದೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ರು. ಮೊದಲು ಹೇಳಿಕೆ ನೀಡೋದು ನಂತರ ಆ ರೀತಿಯಲ್ಲವೆಂದು ತಿರುಚುವ ಪ್ರಯತ್ನ ಮಾಡ್ತಾರೆ ಇದು ಅವರ ಹಳೆಯ ಚಾಳಿ ಎಂದು ಶ್ರೀರಾಮುಲು ಗುಡುಗಿದರು. ಜೊತೆಗೆ ಸ್ವಾಮೀಜಿಗಳಿಗೆ ಅಪಮಾನ ಮಾಡಿದ ಹಿನ್ನೆಲೆ ಕೂಡಲೇ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.
ಅತ್ಮ ವಿಶ್ವಾಸ ಕಡಿಮೆಯಾಗಿದೆ:
ಸಿದ್ದರಾಮಯ್ಯಗೆ ತಮ್ಮ ಮೇಲಿನ ವಿಶ್ವಾಸ ಇತ್ತೀಚಿಗೆ ಕಡಿಮೆ ಆಗಿದೆ. ಸಿದ್ದರಾಮಯ್ಯ ಖಿನ್ನತೆಯಿಂದ ಬಳಲುತ್ತಿದ್ದಾರೆ. ಯಾಕೆಂದರೆ ಸಿದ್ದರಾಮಯ್ಯ ಅವರ ಪಕ್ಷದಲ್ಲಿ ಎಕಾಂಗಿ ಆಗಿದ್ದಾರೆ. ಪಕ್ಷ ಅವರನ್ನು ದೂರ ತಳುತ್ತಿದೆ ಎನ್ನುವ ಖಿನ್ನತೆಯಲ್ಲಿ ಇದ್ದಾರೆಂದು ವ್ಯಂಗ್ಯವಾಡಿದ್ದರು.
ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ, ಶ್ರೀರಾಮುಲು ಭವಿಷ್ಯ
ಎರಡು ಮೂರು ತುಂಡಾಗಿರೋ ಕಾಂಗ್ರೆಸ್: ಕಾಂಗ್ರೆಸ್ ಪಕ್ಷವೂ 2-3 ತುಂಡಾಗಿದೆ ಪಕ್ಷದ ವ್ಯವಸ್ಥೆಯಲ್ಲಿ ಸಿದ್ದರಾಮಯ್ಯ ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದ್ರೆ ಡಿಕೆಶಿಗೆ ಸಿಟ್ಟು. ಡಿಕೆಶಿಗೆ ಕಡೆ ಹೋದ್ರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಇನ್ನೂ ನಮ್ಮ ಪಕ್ಷದ ಜೊತೆ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೂ ತರಲಾಗಿದೆ ಮುಂದೆ ಅಧಿಕಾರಕ್ಕೆ ಬರೋ ನಿಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಅತಿಹೆಚ್ಚು ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ. ಹೀಗಾಗಿ 170 ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇನ್ನೂ ಸಚಿವ ಆಕ್ಷಾಂಕಿಗಳು ತುಂಬಾ ಇದ್ದಾರೆ. ಕೋರ್ ಕಮೀಟಿಯಲ್ಲಿ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಆಗಲಿದೆ ಎಂದರು.
ನಾವೂ ಚುನಾವಣೆಗೆ ತಯಾರಾಗಿದ್ದೇವೆ: ಯಾವುದೇ ಸಮಯದಲ್ಲಿ ಚುನಾವಣೆ ಬಂದ್ರೂ ನಾವು ಎದುರಿಸಲು ಸಿದ್ದವಾಗಿದ್ದೇವೆ. ಪಂಚ ರಾಜ್ಯಗಳ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ನಾಯಕರ ಪರಿಸ್ಥಿತಿ ಹೀನಾಯವಾಗಿದೆ. ಹೀಗಾಗಿ ನಾವು ಮೇಲುಗೈ ಸಾಧಿಸಲಿದ್ದೇವೆ ಎಂದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ. ಬಿ.ಎಸ್. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು. ಇನ್ನೂ ಪಕ್ಷ ಯಾರ ವಿರುದ್ಧವಾದ್ರು ಸ್ಪರ್ದೆ ಮಾಡಲು ಸೂಚಿಸುತ್ತದೆಯೋ ಅವರ ವಿರುದ್ಧ ಸ್ಪರ್ಧೆಗೆ ರೆಡಿ ಎಂದರು.
