Asianet Suvarna News Asianet Suvarna News

ಮಹಿಳೆಯರಿಗೆ ಬಂಪರ್ ಆಫರ್ ಘೋಷಿಸಿದ ಶ್ರೀರಾಮುಲು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರ್ಬೇಕು ಅಷ್ಟೇ

* ಮಹಿಳೆಯರಿಗೆ ಗುಡ್‌ ನ್ಯೂಸ್‌ ನೀಡಿದ ಸಚಿವ ಶ್ರೀರಾಮುಲು
* ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಿಸಣೆ
* ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಜಾರಿ

If BJP won  In upcoming election at Karnataka women will get free bus pass Says Sriramulu rbj
Author
First Published Mar 13, 2022, 4:02 PM IST

ಗದಗ, (ಮಾ.13):ಸಾರಿಗೆ ಸಚಿವ ಶ್ರೀರಾಮುಲು ಅವರು ಮಹಿಳೆಯರಿಗೆ ಬಂಪರ್ ಕೊಡುಗೆ ಘೋಷಣೆ ಮಾಡಿದ್ದಾರೆ. ಆದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಷ್ಟೇ

ಹೌದು.. ಕರ್ನಾಟಕದಲ್ಲಿ ಮತ್ತೆ ಬಿಜೆಪಿ (BJP ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ (Free Bus Pass) ನೀಡುತ್ತೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು (Sriramulu) ಘೋಷಣೆ ಮಾಡಿದ್ದಾರೆ.

Free Bus: ಗಾರ್ಮೆಂಟ್ಸ್‌ ಮಹಿಳಾ ಸಿಬ್ಬಂದಿಗೆ ಫ್ರೀ ಬಸ್‌ಪಾಸ್‌

ಇಂದು(ಭಾನುವಾರ) ಗದಗನಲ್ಲಿ(Gadag) ಮಾತನಾಡಿರುವ ಶ್ರೀರಾಮುಲು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದ ಎಲ್ಲ ಮಹಿಳೆಯರಿಗೆ  (Women) ಉಚಿತ ಬಸ್ ಪಾಸ್ ಕೊಡುವ ವ್ಯವಸ್ಥೆ ಬಿಜೆಪಿ ಮಾಡುತ್ತದೆ ಎಂದರು.

ಇನ್ನು ಕೆಎಸ್‌ಆರ್‌ಟಿಸಿ ಆಸ್ತಿಯನ್ನು ಅಡ ಇಡಲಾಗಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಎಸ್​ಆರ್​ಟಿಸಿ ಯಾವುದೇ ಆಸ್ತಿ ಅಡಮಾನವಾಗಿ ಇಟ್ಟಿಲ್ಲ. ಬೆಂಗಳೂರು ಶಾಂತಿ ನಗರ ಕಾಂಪ್ಲೆಕ್ಸ್ ಅಡಮಾನ‌ ಇಡಲಾಗಿದೆ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಕಡೆ 16 ಎಕರೆ ಅಡಮಾನ ಇಡಲಾಗಿದೆ. ಕಲ್ಯಾಣ ಕರ್ನಾಟಕದಲ್ಲೂ ಕೆಲವು ಜಮೀನು ಅಡಮಾನ ಇಡಲಾಗಿದೆ. ಸಂಸ್ಥೆ ಜಾಗ ಅಡಮಾನ ಇಟ್ಟ ಹಣ ಸಿಬ್ಬಂದಿ ಭವಿಷ್ಯ ನಿಧಿಗೆ ನೀಡಲಾಗಿದೆ. ಕಡಿಮೆ ದರದಲ್ಲಿ ಬಡ್ಡಿ ಇದ್ದ ಕಾರಣ ಆಸ್ತಿ ಅಡಮಾನ ಇಡಲಾಗಿದೆ. ಇನ್ನೂ ಒಂದೂವರೆ ತಿಂಗಳ ಸಂಬಳ ಮಾತ್ರ ಬಾಕಿ ಇದೆ. ಒಂದು ವಾರದೊಳಗೆ ಆ ಬಾಕಿ ಸಂಬಳ ನೀಡಿದರೆ ಕ್ಲಿಯರ್ ಆಗುತ್ತೆ ಮಾಹಿತಿ ನೀಡಿದರು.

ಮುಂದಿನ ತಿಂಗಳಿಂದ ಸಿಬ್ಬಂದಿಗೆ ನಿರಂತರವಾಗಿ ಸಂಬಳ ನೀಡಲಾಗುತ್ತದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ 3 ಸಾವಿರ ಕೋಟಿ ರೂ. ಇಲಾಖೆಗೆ ನೀಡಿದ್ದಾರೆ. 3 ಸಾವಿರ ಕೋಟಿ ಸಂಬಳ ನೀಡಲು ಕೊಟ್ಟಿದ್ದಾರೆ. ಇನ್ನು ಮುಂದೆ ಚಾಲಕರ, ನಿರ್ವಾಹಕರು ಹಾಗೂ ಸಿಬ್ಬಂದಿ ಸಂಬಳಕ್ಕೆ ಕಾಯಬೇಕಿಲ್ಲ. ಅಡಮಾನ ಇಟ್ಟಿದ್ದು ವೈಯಕ್ತಿಕ ಬಳಕೆಗೆ ಅಲ್ಲ. ಸಿಬ್ಬಂದಿ ಭವಿಷ್ಯದ ನಿಧಿಗಾಗಿ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ವಿರುದ್ಧ ಟೀಕೆ
ಕಾಂಗ್ರೆಸ್ ಪಾರ್ಟ್‌ಟೈಂ ಪಕ್ಷವಾಗಿ ಉಳಿಯುತ್ತದೆ. ರಾಹುಲ್ ಗಾಂಧಿ ಪಾರ್ಟ್‌ಟೈಂ ನಾಯಕರಾಗುತ್ತಾರೆ. ಕಾಂಗ್ರೆಸ್ ವೈಟ್‌ವಾಶ್ ಮಾಡುವ ಕೆಲಸ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. 

ಇದೇ ವೇಳೆ ಕೆಲೂರ ಗ್ರಾಮದ ರೈತ ಮಹಿಳೆ ಆತ್ಮಹತ್ಶೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಸಚಿವರು, ಅರಣ್ಶ ಜಮೀನಿನಲ್ಲಿ ಒಕ್ಕಲುತನ ಮಾಡುವವರನ್ನು ಒಕ್ಕಲೇಬ್ಬಿಸಬಾರದು. ಸುಮಾರು 20-30 ವರ್ಷಗಳಿಂದ ಒಕ್ಕಲುತನ ಮಾಡುತ್ತಿದ್ದರೇ, ಅಂತವರಿಗೆ ಸಾಗುವಳಿ ಚೀಟಿ ನೀಡಬೇಕೆಂದು ಸುರ್ಪಿಂ ಕೋರ್ಟ್​ ಸ್ಪಷ್ಟ ಸಂದೇಶ ನೀಡಿದೆ. ಮುಂದೆ ಈ ರೀತಿ ಘಟನೆಗಳು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆನೆ ಎಂದು ತಿಳಿಸಿದರು. 

ನಿರ್ಮಲಾ ಕುಟುಂಬಕ್ಕೆ ಸರ್ಕಾರ ಈಗಾಗಲೇ ಪರಿಹಾರ ಧನ ನೀಡಿದೆ. ಪರಿಶಿಷ್ಟ ಪಂಗಡಗಳ ಇಲಾಖೆಯಿಂದ ರೈತ ಮಹಿಳೆಯ ಕುಟುಂಬಕ್ಕೆ ಎರಡು ಎಕರೆ ಜಮೀನು ಹಾಗೂ ಗಂಗಾ ಕಲ್ಶಾಣ ಯೋಜನೆಯಲ್ಲಿ ಒಂದು ಬೊರ್ ವೆಲ್ ಕೊಡಿಸುತ್ತೇವೆ. ಸರ್ಕಾರದಿಂದ ಏನು ಪರಿಹಾರ ಬೇಕು ಅದನ್ನು ಕೋಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಬೆಂಗಳೂರು ನಗರದ(Bengaluru) ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ(Garments Women Staff ) 2022ರ ಜನವರಿಯಿಂದ ‘ವನಿತಾ ಸಂಗಾತಿ’ ಯೋಜನೆಯಡಿ ಉಚಿತ ಬಸ್‌ ಪಾಸ್‌ ಒದಗಿಸಲು ಬಿಎಂಟಿಸಿ(BMTC) ನಿರ್ಧರಿಸಿದೆ.ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು ಹಾಗೂ ಆರ್ಥಿಕವಾಗಿ ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮ ಜಾರಿಯಾದ ಬಳಿಕ ಗಾರ್ಮೆಂಟ್ಸ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರು ಪ್ರತಿನಿತ್ಯ ತಮ್ಮ ಕರ್ತವ್ಯ ಖಾಸಗಿ ಬಸ್ಸು, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ.

ಬೆಂಗಳೂರು ನಗರದಲ್ಲಿ 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್‌ ಕಾರ್ಖಾನೆಗಳಿವೆ. ಈ ಗಾಮೆಂಟ್ಸ್‌ ಸುಮಾರು 3 ಲಕ್ಷಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಶೇ.80 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಈ ನೌಕರರು ವನಿತಾ ಸಂಗಾತಿ ಯೋಜನ ಫಲಾನುಭವಿಗಳಾಗಬಹುದು.

Follow Us:
Download App:
  • android
  • ios