Asianet Suvarna News Asianet Suvarna News

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಪರಿಣಾಮವಿಲ್ಲ: ಸಚಿವ ನಾಗೇಂದ್ರ

ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಉತ್ತರ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಜಿಲ್ಲಾ ಸಚಿವ ಬಿ.ನಾಗೆಂದ್ರ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜರುಗಿದ ಜನತಾದರ್ಶನದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. 

Minister B Nagendra Reaction On BJP JDS Alliance gvd
Author
First Published Sep 28, 2023, 9:23 PM IST

ಬಳ್ಳಾರಿ (ಸೆ.28): ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಉತ್ತರ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಜಿಲ್ಲಾ ಸಚಿವ ಬಿ. ನಾಗೆಂದ್ರ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜರುಗಿದ ಜನತಾದರ್ಶನದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಬಿಜೆಪಿ- ಜೆಡಿಎಸ್ ಸಖ್ಯ ಹೊಸದೇನಲ್ಲ. ಈ ಹಿಂದೆಯೇ ನಮಗೆ ಗೊತ್ತಿತ್ತು. ನಿರೀಕ್ಷೆಯಂತೆಯೇ ಅವರು ಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆಯಿಲ್ಲ. ಉತ್ತರ ಕರ್ನಾಕದಲ್ಲಿ ಮೂರು ಅಥವಾ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಒಂದಷ್ಟು ಪರಿಣಾಮವಾಗಬಹುದು. ಈ ಎರಡು ಪಕ್ಷವನ್ನು ಮೆಟ್ಟಿನಿಂತು ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಶಕ್ತಿ ಕಾಂಗ್ರೆಸ್ಸಿಗಿದೆ ಎಂದರು.

ಜೆಡಿಎಸ್‌ ಜಾತ್ಯತೀತ ನಿಲುವು: ಬಿಜೆಪಿ ಜತೆ ಸಖ್ಯ ಬೆಳೆಸಿರುವ ಜೆಡಿಎಸ್‌ನ ಜಾತ್ಯತೀತ ನಿಲುವು ಎಷ್ಟು ಎಂಬುದು ಇಡೀ ನಾಡಿಗೆ ಗೊತ್ತಾಗಿದೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಈ ಹಿಂದೆ ನಾವೇ ಹೇಳುತ್ತಿದ್ದೆವು. ನಾವು ಅಂದುಕೊಂಡಂತೆಯೇ ಹೊಂದಾಣಿಕೆಯಾಗಿದ್ದಾರೆ. ಇದು ಹೊಸ ವಿಷಯವೇನಲ್ಲ. ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಜನಾಶೀರ್ವಾದ ನಮಗೆ ಸಿಕ್ಕೇ ಸಿಗುತ್ತದೆ ಎಂಬ ಬಲವಾದ ವಿಶ್ವಾಸವೂ ಕಾಂಗ್ರೆಸ್ ಗಿದೆ ಎಂದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷ ತ್ಯಜಿಸುವ ವಿಚಾರ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಂದ್ರ, ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬರಲಿ ಸ್ವಾಗತ ಮಾಡಿಕೊಳ್ಳುತ್ತೇವೆ. ಈ ವಿಷಯವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಹ ಹೇಳಿದ್ದಾರೆ ಎಂದರು.

ಸ್ವಚ್ಛತೆ ಮುಖಾಂತರ ಮುಂದಿನ ಪೀಳಿಗೆಗೆ ಪ್ರಕೃತಿಯನ್ನು ಉಳಿಸಿ: ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

ಹಾಲಿ ಶಾಸಕ, ಸಚಿವರು ಯಾಕೆ ಚುನಾವಣೆ ನಿಲ್ಲಬೇಕು. ಸಾಕಷ್ಟು ಕಾರ್ಯಕರ್ತರು, ಶಕ್ತಿವಂತರೂ ನಮ್ಮಲ್ಲಿದ್ದಾರೆ. ಅವಕಾಶ ವಂಚಿತರಿಗೆ ಟಿಕೆಟ್ ನೀಡಲು ಪಕ್ಷ ಯೋಚಿಸುತ್ತಿದೆ. ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಸೇರಿ ಎಲ್ಲ ಸಚಿವರು ಪಕ್ಷದ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ ಎಂದರು. ಹೆಚ್ಚುವರಿ ಡಿಸಿಎಂ ಬೇಕಾಗಿಲ್ಲ. ಡಿಸಿಎಂ ಸಾವಿಧಾನಿಕ ಹುದ್ದೆಯಲ್ಲ. ಯಾವುದೇ ಕಾರಣಕ್ಕೂ ಹೆಚ್ಚುವರಿ ಡಿಸಿಎಂ ಬೇಡ. ಒಬ್ಬರೇ ಇರಲಿ ಎಂದು ಸಚಿವ ನಾಗೇಂದ್ರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios