Asianet Suvarna News Asianet Suvarna News

Council Election Karnataka :ಕಾಂಗ್ರೆಸ್ಸನ್ನು ಮತದಾರರು ತಿರಸ್ಕರಿಸಬೇಕು : ಅಶ್ವತ್ಥನಾರಾಯಣ್

  • ಬೆಂಗಳೂರು ನಗರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಗೋಪಿನಾಥ ರೆಡ್ಡಿ
  • ಗೋಪಿನಾಥ ರೆಡ್ಡಿಯವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಚಾರ
Minister ashwath narayan Campaign For BJP Candidate Gopinath Reddy snr
Author
Bengaluru, First Published Dec 4, 2021, 1:43 PM IST
  • Facebook
  • Twitter
  • Whatsapp

ಬೆಂಗಳೂರು (ಡಿ.04): ಬೆಂಗಳೂರು (Bengaluru ) ನಗರದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಬಿಜೆಪಿ (BJP) ಅಭ್ಯರ್ಥಿಯಾಗಿರುವ ಗೋಪಿನಾಥ ರೆಡ್ಡಿ (Gopinath Reddy) ಯವರ ಪರವಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr CN ashwath Narayan)  ಯಲಹಂಕ (Yalahanka) ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಲವೆಡೆಗಳಲ್ಲಿ ಶನಿವಾರ ಬಿರುಸಿನ ಪ್ರಚಾರ ನಡೆಸಿದರು.  ಸಿಂಗನಾಯಕನಹಳ್ಳಿ, ರಾಜಾನಕುಂಟೆ, ಹೆಸರಘಟ್ಟ ಸಮೀಪದ ಕುಂಬಾರ ಹಳ್ಳಿಯಲ್ಲಿ  ನಡೆದ ಪ್ರತ್ಯೇಕ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, `ಜೆಡಿಎಸ್ (JDS) ರಾಜ್ಯದಲ್ಲಿ ಸಂಪೂರ್ಣ ಅಪ್ರಸ್ತುತವಾಗಿದ್ದು, ಕಾಂಗ್ರೆಸ್ (Congress) ತನಗೆ ಅಧಿಕಾರ ಸಿಕ್ಕಿದ್ದಾಗ ಅದನ್ನು ದುರ್ಬಳಕೆ ಮಾಡಿಕೊಂಡಿದೆ. ಜನ ಸಾಮಾನ್ಯರಿಗೂ ಅಧಿಕಾರ ಕೊಡುವ ಮತ್ತು ಅತ್ಯುತ್ತಮ ನಾಯಕತ್ವವಿರುವ ಪಕ್ಷವೆಂದರೆ ಬಿಜೆಪಿ (BJP) ಒಂದೇ’ ಎಂದರು. 

ಕಾಂಗ್ರೆಸ್ಸಿಗೆ (Congress) ಬೆಂಗಳೂರಿನಂತಹ (Bengaluru) ಮಹಾ ನಗರದಲ್ಲಿ ಸೂಕ್ತ ಅಭ್ಯರ್ಥಿಗಳೇ ಇಲ್ಲದಂತಾಗಿದ್ದು, ಗುಜರಿ ಬಾಬು (Babu) ಎನ್ನುವ ಹೆಸರಿನ ವ್ಯಕ್ತಿಯನ್ನು ಕಣಕ್ಕಿಳಿಸಿದೆ. ಇದಕ್ಕೆ ತಕ್ಕಂತೆಯೇ ಆ ಪಕ್ಷವೂ ಗುಜರಿಗೆ ಹಾಕುವಂತಾಗಿದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿರುವ ಕಾಂಗ್ರೆಸ್ಸನ್ನು ಮತದಾರರು ತಿರಸ್ಕರಿಸಬೇಕು. ಆ ಪಕ್ಷಕ್ಕೆ ಈ ಚುನಾವಣೆಯಲ್ಲಿ ಒಂದೇ ಒಂದು ವೋಟೂ (Vote) ಬೀಳಬಾರದು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್ (Congress) ಪಕ್ಷವನ್ನು ರಾಜ್ಯದಿಂದ ಹುಟ್ಟಡಗಿಸಬೇಕಾಗಿದೆ. ಅದು ಇಷ್ಟು ವರ್ಷಗಳ ಕಾಲ ಇಡೀ ಸಮಾಜವನ್ನು ಒಡೆದುಕೊಂಡು ಬಂದಿವೆ. ಪ್ರತಿಪಕ್ಷಗಳು ವ್ಯಕ್ತಿ ಮತ್ತು ಕುಟುಂಬ ಆಧಾರಿತವಾಗಿದ್ದು, ಬಿಜೆಪಿ (BJP) ಮಾತ್ರ ವಿಚಾರವನ್ನು ಆಧರಿಸಿರುವ ಪಕ್ಷವಾಗಿದೆ. ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ (Taluk Panchayat election) ನಮ್ಮ ಪಕ್ಷ ಜಯಭೇರಿ ಬಾರಿಸುವಂತಾಗಬೇಕು ಎಂದು ಅವರು ಹೇಳಿದರು. 

ಬೆಂಗಳೂರಿನ ಸುತ್ತಮುತ್ತ ಇವರು ಊರುಗಳಿಗೆ ಅಭಿವೃದ್ಧಿ ಹೊಂದುವ ಉಜ್ವಲ ಅವಕಾಶಗಳಿವೆ. ಬೆಂಗಳೂರಿನ  (Bengaluru) ವ್ಯವಸ್ಥಿತ ಬೆಳವಣಿಗೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಕೊಡುಗೆ ಶೂನ್ಯವಾಗಿದೆ. ಆದ್ದರಿಂದ ಮತದಾರರು ಈ ಬಾರಿ ಬಿಜೆಪಿಯನ್ನು(BJP) ಗೆಲ್ಲಿಸಿ, ಅಭಿವೃದ್ಧಿಯ ಅಜೆಂಡಾಕ್ಕೆ ಮನ್ನಣೆ ಕೊಡಬೇಕು ಎಂದು ಅವರು ಕೋರಿದರು. 

ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ತಮ್ಮ ದೂರದೃಷ್ಟಿಯಿಂದ ತಂತ್ರಜ್ಞಾನದ ಮೂಲಕ ಇಡೀ ದೇಶವನ್ನು ಪ್ರಬಲವಾಗಿ ಕಟ್ಟುತ್ತಿದ್ದಾರೆ. ಜೊತೆಗೆ ರಾಜಕೀಯ (politics) ವ್ಯವಸ್ಥೆಯ ಆಧಾರವಾದ ಗ್ರಾಮ ಪಂಚಾಯಿತಿ (Grama panchayat) ಸದಸ್ಯರ ದನಿ ಕೂಡ ಕೇಳಿಸುವಂತೆ ಬಿಜೆಪಿ ಕಸುವು ತುಂಬಿದೆ ಎಂದು ಅವರು ಹೇಳಿದರು. 

ಉಳಿದಂತೆ ಅಶ್ವತ್ಥ ನಾರಾಯಣ ಅವರು ವಡೇರಹಳ್ಳಿ, ಹುರುಳಿಚಿಕ್ಕನಹಳ್ಳಿ, ಗಂಟಿಗಾನಹಳ್ಳಿ, ರಾಜಾನುಕುಂಟೆ, ಅರಕೆರೆ, ಸೊಣ್ಣೇನಹಳ್ಳಿ, ಹೆಸರಘಟ್ಟ, ಶಿವಕೋಟೆ ಮತ್ತು ಕಸಘಟ್ಟಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆದ ಪ್ರಚಾರಸಭೆಗಳಲ್ಲಿ ಕೂಡ ಭಾಗವಹಿಸಿದ್ದರು. ಈ ಸಭೆಗಳಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಮಾತನಾಡಿದರು. ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾರಾಯಣ  ಉಪಸ್ಥಿತರಿದ್ದರು.

ಹೊಸ ಬಾಂಬ್ : 

ವಿಧಾನಪರಿಷತ್ ಚುನಾವಣೆ (Karnataka MLC Election) ಸಂದರ್ಭದಲ್ಲಿ ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು..... ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ (Ramesh Jarkiholi) ಸ್ಫೋಟಕ ಹೇಳಿಕೆ ನೀಡಿದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ದೆಹಲಿ ಭೇಟಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. 

ಡಿಸೆಂಬರ್ 10ರ ಬಳಿಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.

Follow Us:
Download App:
  • android
  • ios