ಚಾಮರಾಜನಗರ (ಫೆ.07):  ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷ ಅಸಮಧಾನ ಹೊರಹಾಕಿದ್ದಾರೆ.

ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭದಲ್ಲಿ  ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದ ಅರವಿಂದ ಲಿಂಬಾವಳಿ ನನಗೆ ಎರಡು ಖಾತೆ ಕೊಟ್ಟಿದ್ದಾರೆ.  ರಾತ್ರಿ ವೇಳೆ ಕಾಡಿಗೆ ಹೋಗಬೇಕು, ಹಗಲು ವೇಳೆ ನಾಡಿಗೆ ಬರಬೇಕು ಎಂದಿದ್ದಾರೆ. 

ಬಿ​ಎ​ಸ್‌ವೈ ಸಿಎಂ ಅವಧಿ : ಡಿಸಿಎಂ ಅಶ್ವತ್ಥ್ ನಾರಾಯಣ್ ಹೀಗೆಂದರು

ಕಾಡು ಮತ್ತು ನಾಡು ಎರಡನ್ನು ನೋಡಿಕೊಳ್ಳುವ ಜವಬ್ದಾರಿ ಕೊಟ್ಟಿದ್ದಾರೆ. ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಕೊಟ್ಟಿರುವ ಬಗ್ಗೆ ಈ ವೇಳೆ ಪ್ರಸ್ತಾಪಿಸಿ ತಮ್ಮ ಅಸಮಾಧಾನ ಹೊರಹಾಕಿದರು. 

ಮೂಲತಃ ನಾನು ಸಿವಿಲ್ ಇಂಜಿನಿಯರ್.  ಕಾಡಿನ ಬಗ್ಗೆ ಗ್ರಾಮೀಣ ಭಾಗದ ಸಾಮಾನ್ಯ ಯುವಕನಿಗೆ ಇರುವ ಮಾಹಿತಿಯು ನನಗಿಲ್ಲ. ಇದೆಲ್ಲವನ್ನು ತಿಳಿದುಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ ಎಂದು ಖಾತೆ ಬಗ್ಗೆ ಇರುವ ತಮ್ಮ ಅಸಮಾಧಾನ ಹೊರಹಾಕಿದರು.