ನವ​ದೆ​ಹ​ಲಿ (ಫೆ.07):  ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಅವರು ಮುಖ್ಯ​ಮಂತ್ರಿ​ಯಾಗಿ ಮುಂದು​ವ​ರಿ​ಯು​ತ್ತಾ​ರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯ​ಮಂತ್ರಿ​ಯಾಗಿ ಅವ​ರಿಗೆ ಎಲ್ಲ ಅಧಿ​ಕಾರ ನೀಡ​ಲಾ​ಗಿದೆ ಎಂದು ಉಪ ಮುಖ್ಯ​ಮಂತ್ರಿ ಅಶ್ವತ್ಥ ನಾರಾ​ಯ​ಣ ಹೇಳಿ​ದ್ದಾ​ರೆ.

ದೆಹ​ಲಿ​ಯಲ್ಲಿ  ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿ, ಮುಖ್ಯ​ಮಂತ್ರಿ ಅವ​ರಿಗೆ ಎಲ್ಲ ಅಧಿಕಾರ ನೀಡಿ​ದ್ದ​ರಿಂದಲೇ ಮಂತ್ರಿಮಂಡಲ ವಿಸ್ತರಣೆಗೆ ಅವ​ಕಾಶ ನೀಡ​ಲಾ​ಗಿ​ದೆ. ರಾಜಕೀಯದಲ್ಲಿ ಎಲ್ಲರಿಗೂ ಅಧಿಕಾರದ ಆಸೆ ಇರು​ತ್ತದೆ. ಈ ಹಿನ್ನೆ​ಲೆ​ಯಲ್ಲಿ ಕೆಲ​ವರು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾರೆ ಎಂದು ತಿಳಿ​ಸಿ​ದ​ರು.

ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ..

ಇದೇ ವೇಳೆ, ಲಿಂಗಾಯತ ಸಮುದಾಯದಲ್ಲಿ ಹಲವರಿಗೆ ಮೀಸಲಾತಿ ಸಿಕ್ಕಿದೆ. ಈ ಹಿನ್ನೆಲೆ​ಯಲ್ಲಿ ಈಗ ಪಂಚಮಸಾಲಿಗರು ಮೀಸಲಾತಿ ಕೇಳಿದ್ದಾರೆ. ಈಗ ಅದರ ಅಧ್ಯಯನಕ್ಕೆ ಮುಖ್ಯ​ಮಂತ್ರಿ ಸೂಚಿಸಿದ್ದಾರೆ. ಈ ಕುರಿತು ಅವಕಾಶಗಳನ್ನು ನೋಡಿ ಪರಿಶೀಲಿಸಲಾಗಿವುದು. ವೈಜ್ಞಾನಿಕವಾಗಿದ್ದರೆ ಸೂಕ್ತ ಕ್ರಮ ಕೈಗೊ​ಳ್ಳ​ಲಾ​ಗು​ತ್ತದೆ. ಎಲ್ಲ ಜನಾಂಗದಿಂದಲೂ ಮೀಸ​ಲಾ​ತಿಗೆ ಬೇಡಿಕೆ ಇದೆ. ಅದನ್ನು ಪರಿ​ಶೀ​ಲಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದ​ರು.

ಹೊಸ ಸಾಧ್ಯ​ತೆ​ಗಾಗಿ ಕಾನೂ​ನು: ಕೃಷಿ ವಲಯದಲ್ಲಿ ಅನೇಕ ವರ್ಷಗಳಿಂದ ಸುಧಾರಣೆಗಳು ಆಗಿ​ರ​ಲಿ​ಲ್ಲ. ಬೆಳೆಗೆ ಉತ್ತಮ ಬೆಲೆ ಸಿಗುತ್ತಿ​ರ​ಲಿಲ್ಲ. ಈ ಹಿನ್ನೆ​ಲೆ​ಯಲ್ಲಿ ಸರ್ಕಾರ ಹೊಸ​ತನ ತರಲು ಚಿಂತಿ​ಸಿ​ದೆ. ಆ ನಿಟ್ಟಿ​ನಲ್ಲಿ ಕೃಷಿ ಕಾಯ್ದೆ​ಯಲ್ಲಿ ಹಳೆಯ ಯಾವ ನಿಯ​ಮಾ​ವ​ಳಿ​ಗ​ಳನ್ನೂ ನಿಲ್ಲಿ​ಸಿಲ್ಲ. ಹೊಸ ಅವ​ಕಾ​ಶ​ಗ​ಳನ್ನು ನೀಡುವ ನಿಟ್ಟಿ​ನಲ್ಲಿ ಕಾನೂನು ರೂಪಿ​ಸಿ​ದೆ ಎಂದರು.