Asianet Suvarna News Asianet Suvarna News

ರಾಹುಲ್ ಗಾಂಧಿ ಬರೀ ಪ್ರವಚನ ಹೇಳ್ತಾರೆ, ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡ್ತಿಲ್ಲ: ಆನಂದ್ ಸಿಂಗ್

ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ಬರೆದಿಡುವಂತ ಕೆಲಸ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

Minister Anand Singh Slams Rahul Gandhi grg
Author
First Published Oct 12, 2022, 1:18 PM IST

ವಿಜಯನಗರ(ಅ.12): ವಿಜಯನಗರ ಜಿಲ್ಲೆಯನ್ನ ಮಾಡಿದ ರೂವಾರಿಗಳು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಈ ಭಾಗದ ಜನರ ಪರವಾಗಿ ಅಭಿನಂದನೆಗಳು ಸಲ್ಲಿಸುತ್ತೇವೆ. ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳ 10 ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸ್ತದೆ. ನಮ್ಮ ನಾಯಕರು ಕೆಲವು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ನಮ್ಮದು ಸಂಘಟನೆ ಮಾಡೋ ಪಕ್ಷ ಅಂತ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಇಂದು(ಬುಧವಾರ) ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆಯುತ್ತಿರುವ ಜನ ಸಂಕಲ್ಪ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಸಂಕಲ್ಪ ಯಾತ್ರೆ, ಇದು ಚುನಾವಣೆ ಯಾತ್ರೆ ಅಲ್ಲ, ನಮ್ಮ ಬಿಜೆಪಿ ಪಕ್ಷ ಚುನಾವಣೆ ಬಂದಾಗ ಮಾತ್ರ ಕೆಲಸ ಪ್ರಾರಂಭ ಮಾಡುವ ಪಕ್ಷವಲ್ಲ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡ್ತಿರೋದು ಯಾಕಂತ ಗೊತ್ತಿಲ್ಲ. ರಾಹುಲ್ ಗಾಂಧಿ ಬರೀ ಪ್ರವಚನ ಹೇಳ್ತಾರೆ. ಈ ದೇಶದ ಅಭಿವೃದ್ಧಿಯ ಬಗ್ಗೆ ಒಂದು ಮಾತನಾಡುತ್ತಿಲ್ಲ ಅಂತ ಕಿಡಿಕಾರಿದ್ದಾರೆ. 

ಗೆದ್ದ ಸ್ಥಾನ ಉಳ್ಸಿಕೊಳ್ಳಿ, ನಾವು ಬರ್ತಿದ್ದೀವಿ: ಸಿಎಂ ಬೊಮ್ಮಾಯಿ

ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇಂತಹ ಪ್ರಧಾನಿ ಪಡೆದಿರೋದು ಖುಷಿಯ ವಿಚಾರವಾಗಿದೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ತರೋಣ. ಬಳ್ಳಾರಿ- ವಿಜಯನಗರ ಮಾದರಿ ಜಿಲ್ಲೆಗಳಾಗ್ತಾವೆ. ಶ್ರೀರಾಮುಲು ಮತ್ತು ನಾನು ಅಭಿವೃದ್ಧಿ ಪಡಿಸುತ್ತೇವೆ. ಬಳ್ಳಾರಿ- ವಿಜಯನಗರ ಎರಡೂ ಜಿಲ್ಲೆಗಳಲ್ಲಿ 10 ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸುತ್ತೇವೆ. 

ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಇತಿಹಾಸದ ಪುಟಗಳಲ್ಲಿ ಬರೆದಿಡುವಂತ ಕೆಲಸವನ್ನ ಮಾಡಿದ್ದಾರೆ.  ಈ ಮೂಲಕ ದಶಕಗಳ ಬೇಡಿಕೆ ಈಡೇರಿದೆ. ಬೇರೆ ನಾಯಕರು ಪೂಜೆ ಮಾಡಿ, ಕರ್ಪೂರ ಹಚ್ಚಿ ಅಂದ್ರು ಅವರಿಗೆ ಬೇಕಾಗಿರೋದು ಮೀಸಲಾತಿ ಹೆಚ್ಚಳ. ಕೋರ್ ಕಮಿಟಿಯಲ್ಲಿ ತಿರ್ಮಾನ ಕೈಗೊಂಡ್ರು, ನಂತರ ಸರ್ವ ಪಕ್ಷಗಳ ಸಭೆ ಕರೆದು ತೀರ್ಮಾನ ತೆಗೆದುಕೊಂಡ್ರು. ಅಲ್ಲಿ ವಿರೋಧ ಮಾಡೋಕೆ ಅವಕಾಶವಿರಲಿಲ್ಲ. ಅಲ್ಲಿ ಒಪ್ಪಿಕೊಂಡು, ಹೊರಗಡೆ ಬಂದು ಮಾಧ್ಯಮದ ಎದುರು ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ ಅಂತ ಕಾಂಗ್ರೆಸ್‌ ನಾಯಕರ ವಿರುದ್ಧ ಆನಂದ್‌ ಸಿಂಗ್‌ ಹರಿಹಾಯ್ದಿದ್ದಾರೆ. 

ಕಾಂಗ್ರೆಸ್ ಸರ್ಕಾರ ಇದ್ದಾಗ, ಯಾಕೆ ಮಾಡಲಿಲ್ಲ ಅಂತ ಪ್ರಶ್ನೆ ಮಾಡಿದ ಆನಂದ್‌ ಸಿಂಗ್‌ ಶೆಡ್ಯೂಲ್ 9 ರಲ್ಲಿ ಕೂಡ ಸೇರಿಸಿದ್ದಾರೆ. ದಾರಿ ತಪ್ಪಿಸೋ ಕಾಂಗ್ರೆಸ್ ನಾಯಕರ ಮಾತಿಗೆ ಕಿವಿಗೋಡಬಾರದು. ಓಟ್ ಬ್ಯಾಂಕ್ ಮಾಡಿಕೊಳ್ಳೋದು ಅವರ ಚಿಂತೆಯಾಗಿದೆ ಅಂತ ತಿಳಿಸಿದ್ದಾರೆ. 

ಬಿಜೆಪಿ ಐತಿಹಾಸಿಕ ನಿರ್ಣಯವನ್ನ ಮಾಡಿದೆ. SC, ST ಸಮುದಾಯದ ಜನರಿಗೆ ನಾನು ಕೈ ಮುಗಿದು ಕೇಳುವೆ, ದಾರಿ ತಪ್ಪಿಸೋ ಕೆಲಸ ಮಾಡ್ತಾರೆ ಕಾಂಗ್ರೆಸ್ ನಾಯಕರು ಅದಕ್ಕೆ ಕಿವಿಗೋಡಬೇಡಿ. ಅಂಬೇಡ್ಕರ್ ಅವರ ಆದರ್ಶ ಪಾಲನೆ ಮಾಡಬೇಕು ಅಂತ ಹೇಳಿದ್ದಾರೆ. 

ಬಿಜೆಪಿಯ 150 ವೇಗಕ್ಕೆ 100 ಜೋಡೋ ಯಾತ್ರೆ ಮಾಡಿದರೂ ಆಗಲ್ಲ: ಶ್ರೀರಾಮುಲು

ಸಚಿವ ಶ್ರೀರಾಮುಲು ಅವರಿಗೆ ಎಷ್ಟು ಜನ ಗೇಲಿ ಮಾಡಿದ್ರು, ವಿಷಕಂಠನಂತೆ ಎಲ್ಲವನ್ನೂ ನುಂಗಿ, ತಾಳ್ಮೆ ಕಳೆದುಕೊಳ್ಳದೇ ಅವರು ಉತ್ತರ ಕೊಟ್ರು, ನನಗೆ ಸಚಿವ ಸ್ಥಾನ ಬೇಡ, ನಮಗೆ ಮೀಸಲಾತಿ ಕೊಡಿ ಅಂತ ಮನವಿ ಮಾಡಿದ್ರು, ಶ್ರೀರಾಮುಲುಗೆ ಕೆಲವರು ಪ್ರಚೋದನೆ ಮಾಡೋದು, ರಕ್ತದಲ್ಲಿ ಬರೆದುಕೊಡ್ತೀನಿ ಅಂದಿಯಲ್ಲಾ ಅಂತ ಅಂತ ಟೀಕೆ ಮಾಡಿದ್ದರು. ಟೀಕೆ ಮಾಡಿದವರು ಉತ್ತರ ಕೊಡೋದು ಬೇಡ ಹೊರತು, ಅಭಿನಂದಿಸಲಿ ಸಾಕು ಅಂತ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. 

ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಸಿಎಂ ಬೊಮ್ಮಾಯಿ

Minister Anand Singh Slams Rahul Gandhi grg

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ದಲಿತ ಕುಟುಂಬ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿ ಉಪಹಾರ ಸೇವಿಸಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.  
 

Follow Us:
Download App:
  • android
  • ios