Asianet Suvarna News Asianet Suvarna News

Karnataka Politics: ಡಿಕೆಶಿ ಮನೆಗೆ ಹೋಗಬಾರದಿತ್ತು, ಈಗ ಅರಿವಾಗಿದೆ: ಆನಂದ್‌ ಸಿಂಗ್‌

*  ಬೊಮ್ಮಾಯಿ, ಬಿಎಸ್‌ವೈ ಕೇಳಿದ್ದಕ್ಕೆ ವಿವರಣೆ ಕೊಟ್ಟಿದ್ದೇನೆ
*  ಬಿಜೆಪಿ ಬಿಡೋದಿಲ್ಲ: ಆನಂದ್‌ ಸಿಂಗ್‌
*  ನಮಗೆ ವಿಜಯನಗರ ಜಿಲ್ಲೆ ನೀಡಿದ್ದು ಬಿಜೆಪಿ
 

Minister Anand Singh React on DK Shivakumar Met grg
Author
Bengaluru, First Published Feb 5, 2022, 6:31 AM IST

ಬೆಂಗಳೂರು(ಫೆ.05): ‘ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಮನೆಗೆ ಹೋಗಬಾರದಿತ್ತು. ಅದು ಈಗ ಅರಿವಿಗೆ ಬಂದಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದ್ದಾರೆ.

ಶುಕ್ರವಾರ ಬಿಜೆಪಿ(BJP) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ನೇಹದ ದೃಷ್ಟಿಯಿಂದ ಹೋಗಿದ್ದೆ. ಆದರೆ, ಅದರ ಬಗ್ಗೆ ಆಗುವ ಬೆಳವಣಿಗೆಗಳ ಬಗ್ಗೆ ಆಲೋಚನೆ ಮಾಡಿರಲಿಲ್ಲ. ನಾನು ಹೋಗಿದ್ದ ಸನ್ನಿವೇಶ ಸರಿ ಇರಲಿಲ್ಲ. ಡಿ.ಕೆ.ಶಿವಕುಮಾರ್‌ ನಿವಾಸಕ್ಕೆ ಹೋಗಿದ್ದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಸಹ ಕೇಳಿದ್ದಾರೆ. ಅವರಿಗೆ ವಿವರಣೆ ಕೊಟ್ಟು ಸ್ಪಷ್ಟನೆ ನೀಡಿದ್ದೇನೆ ಎಂದು ತಿಳಿಸಿದರು.

Karnataka Politics: ಡಿಕೆಶಿ ಜೊತೆ ಆನಂದ್ ಸಿಂಗ್, ಕಾಲವೇ ಉತ್ತರಿಸುತ್ತೆ: ಸಲೀಂ ಅಹ್ಮದ್

ಬಿಜೆಪಿ ಮತ್ತು ಯಡಿಯೂರಪ್ಪ ನಮಗೆ ವಿಜಯನಗರ(Viijayanagara) ಜಿಲ್ಲೆ ನೀಡಿದವರು. ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ. ಆ ರೀತಿ ಹೋಗಬೇಕು ಎಂದರೆ, ಬ್ಯಾಕ್‌ ಡೋರ್‌ ಎಂಟ್ರಿ ಬೇರೆ ಇವೆ. ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು. ಮಾಧ್ಯಮಗಳು ನನ್ನನ್ನು ಸಂಶಯ ದೃಷ್ಟಿಯಿಂದ ನೋಡಿದವು ಎಂದು ಹೇಳಲ್ಲ. ನಾನೇ ಅದಕ್ಕೆ ಅವಕಾಶ ಮಾಡಿಕೊಡಬಾರದಿತ್ತು ಎನ್ನಿಸಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರವಾಸೋದ್ಯಮ ಖಾತೆಯಲ್ಲಿ ನಾನು ಸಂತೋಷವಾಗಿದ್ದೇನೆ. ಈ ಹಿಂದೆ ಖಾತೆ ಬದಲಾವಣೆ ಮಾಡಿ ಎಂದು ಕೇಳಿದ್ದು ನಿಜ. ಆದರೆ ಈಗ ನೀಡಿರುವ ಖಾತೆಯಲ್ಲಿಯೇ ಸಮರ್ಥವಾಗಿ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಇದೇ ಖಾತೆಯಲ್ಲಿಯೇ ಮುಂದುವರಿಯುತ್ತೇನೆ. ಕೊಟ್ಟಿರುವ ಖಾತೆಯಿಂದ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.

ನಮಗೆ ವಿಜಯನಗರ ಜಿಲ್ಲೆ ನೀಡಿದ್ದು ಬಿಜೆಪಿ

ಬಿಜೆಪಿ ಮತ್ತು ಯಡಿಯೂರಪ್ಪ ನಮಗೆ ವಿಜಯನಗರ ಜಿಲ್ಲೆ ನೀಡಿದವರು. ಬಿಜೆಪಿ ಪಕ್ಷವನ್ನು ಬಿಡುವ ಬಗ್ಗೆ ಯೋಚನೆಯನ್ನೂ ಮಾಡಲ್ಲ. ಆ ರೀತಿ ಹೋಗಬೇಕು ಎಂದರೆ, ಬ್ಯಾಕ್‌ ಡೋರ್‌ ಎಂಟ್ರಿ ಬೇರೆ ಇವೆ. ಹಾಗಿದ್ದರೆ ನೇರವಾಗಿ ಏಕೆ ಭೇಟಿ ಮಾಡಬೇಕಿತ್ತು? ಅಂತ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ. 

ಕೊರೋನಾ ಯಾರಿಗೂ ಹೇಳಿ, ಕೇಳಿ ಬರುವುದಿಲ್ಲ: ಆನಂದ್‌ ಸಿಂಗ್‌

ಹೊಸಪೇಟೆ: ಕೊರೋನಾಗೆ(Coronavirus) ಬಿಜೆಪಿ(BJP), ಕಾಂಗ್ರೆಸ್‌(Congress), ಹೆಣ್ಣು, ಗಂಡೆಂಬ ಭೇದ ಇರೊಲ್ಲ. ಯಾರಿಗೂ ನೋಡಿ ಕೊರೋನಾ ಬರೋಲ್ಲ ಎಂದು ಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್‌ ಸಿಂಗ್‌ ಹೇಳಿದ್ದರು. 

Anand Singh-DKS Meeting ಡಿಕೆ ಶಿವಕುಮಾರ್‌ ಮನೆಗೆ ಹೋಗಿದ್ಯಾಕೆ? ಸ್ಪಷ್ಟನೆ ಕೊಟ್ಟ ಸಚಿವ ಆನಂದ್ ಸಿಂಗ್

ಜ.9 ರಂದು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೊರೋನಾ ಏನಾದರೂ ಹೇಳಿ, ಕೇಳಿ ಬರುತ್ತಾ? ಕಾಂಗ್ರೆಸ್‌ ಪಾದಯಾತ್ರೆ(Congress Padayatra) ಇದೆ. ಆ ಮೇಲೆ ಬರ್ತಿನಿ ಅಂತ ಏನಾದರೂ ಹೇಳಿ ಬರುತ್ತಾ? ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡುತ್ತದೆ ಎಂದು ಕಾಂಗ್ರೆಸ್‌ ನಾಯಕರಿಗೆ ಕುಟುಕಿದ್ದರು. 

ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ(BJP Government) ವೀಕೆಂಡ್‌ ಕರ್ಫ್ಯೂ(Weekend Curfew) ಹೇರಿದೆ ಅಂತ ಆರೋಪ ಮಾಡ್ತಿದ್ದಾರೆ ಕಾಂಗ್ರೆಸ್‌ ನಾಯಕರು. ಆದ್ರೆ ಅಕ್ಕಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಲಾಕ್‌ಡೌನ್‌(Lockdown) ಆಗಿದೆ. ಕೇಸಸ್‌ಗಳನ್ನು ನೋಡಿಕೊಂಡು ಸರ್ಕಾರ ಆದೇಶ ಮಾಡಿದೆ. ಮೊದಲೇ ಫಿಕ್ಸ್‌ ಮಾಡಿದ್ವಿ, ಆನಂತರ ಬಿಜೆಪಿ ವೀಕೆಂಡ್‌ ಕರ್ಫ್ಯೂ ಹಾಕಿದೆ ಅಂತ ಆರೋಪ ಮಾಡ್ತಿದ್ದಾರೆ ಎಂದರು. ಕಾಂಗ್ರೆಸ್‌ನವರು ನಿಯಮ ಉಲ್ಲಂಘನೆ ಮಾಡಿದ್ರೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಮ ಕೈಗೊಳ್ಳುವುದು ಗ್ಯಾರಂಟಿ ಎಂದರು.
 

Follow Us:
Download App:
  • android
  • ios