ಆಪ್ ಬಿಜೆಪಿ ನಡುವೆ ಮಾರಾಮಾರಿ, ದೆಹಲಿ ಮೇಯರ್ ಚುನಾವಣೆ ರದ್ದಾಯ್ತು ಮೊದಲ ಬಾರಿ!
ದೆಹಲಿ ಮಹಾನಗರ ಪಾಲಿಕೆ ಗೆದ್ದ ಆಮ್ ಆದ್ಮಿ ಪಾರ್ಟಿ ಸವಾಲಿಗೆ ಕೆರಳಿದ ಬಿಜೆಪಿ ಮೇಯರ್ ಚುನಾವಣೆಗ ಧುಮುಕಿತ್ತು. ಇಂದು ಮೇಯರ್ ಚುನಾವಣೆ ನಡೆಯಬೇಕಿತ್ತು. ಆದರೆ ಪಾಲಿಕೆ ಲೋಕಲ್ ಮಾರ್ಕೆಟ್ ರೀತಿ ಬದಲಾಗಿತ್ತು. ಕಿತ್ತಾಟ, ಘೋಷಣೆ, ಮಾರಾಮಾರಿ ನಡೆದು ಹೋಗಿದೆ. ಇದರ ಪರಿಣಾಮ ದೆಹಲಿ ಪಾಲಕೆ ಮೊದಲ ಬಾರಿಗೆ ಮುಂದೂಡಲ್ಪಟ್ಟಿದೆ.
ನವದೆಹಲಿ(ಜ.06): ದೆಹಲಿ ಮಹಾನಾಗರ ಪಾಲಿಕೆ ಗೆದ್ದ ಆಮ್ ಆದ್ಮಿ ಪಾರ್ಟಿ ತನ್ನ ಮೊದಲ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಘೋಷಣೆ ಕೂಗಿದ ಘಟನೆ ನಡೆದಿದೆ. ಇದು ಬಿಜೆಪಿಯನ್ನು ಕೆರಳಿಸಿದೆ. ಇದರ ಪರಿಣಾಮ ಇಂದು ನಡೆಯಬೇಕಿತ್ತ ದೆಹಲಿ ಪಾಲಿಕೆ ಮೇಯರ್ ಚುನಾವಣೆ ಸ್ಥಗಿತಗೊಂಡಿದೆ. ಆಪ್ ಹಾಗೂ ಬಿಜೆಪಿ ಮರಾಮಾರಿಯಿಂದ ಇದೀಗ ಮುಂದಿನ ಆದೇಶದವರೆಗೆ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಆಮ್ ಆದ್ಮಿ ಸದಸ್ಯರು ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದಂತೆ ಬಿಜೆಪಿ ಕೆರಳಿದೆ. ಇತ್ತ ಬಿಜೆಪಿ ಸದಸ್ಯರ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರ ಪರಿಣಾಮ ಹಗ್ಗಜಗ್ಗಾಟ ನಡೆದಿದೆ. ಇದರ ಪರಿಣಾಮ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಮೀಟಿಂಗ್ ಸ್ಥಗಿತಗೊಳಿಸಿ, ಮುಂದಿನ ಆದೇಶದ ವರೆಗೆ ಚನಾವಣೆಯನ್ನು ಸ್ಥಗಿತಗೊಳಿಸಲಾಗಿದೆ.
ಪಾಲಿಗೆ(Municipal Corporation of Delhi) ಸಭಾಂಗಣ ಸ್ಥಳೀಯ ಮಾರುಕಟ್ಟೆಗಿಂತ ಕಡೆಯಾಗಿತ್ತು. ಆಮ್ ಆದ್ಮಿ ಪಾರ್ಟಿ(AAP) ಸದಸ್ಯರು ಹಾಗೂ ಬಿಜೆಪಿ(BJP) ಸದಸ್ಯರು ಒಬ್ಬರನ್ನೊಬ್ಬರು ತಳ್ಳುತ್ತಾ, ಅವಾಚ್ಯಶಬ್ದಗಳಿಂದ ನಿಂದಿಸುತ್ತಾ ಜಟಾಪಟಿ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇಜ್ರಿವಾಲ್ ಆಪ್ ಪಕ್ಷಕ್ಕೆ ಸಂಕಷ್ಟ: 97 ಕೋಟಿ ವಸೂಲಿಗೆ ಗವರ್ನರ್ ಆದೇಶ
ಡೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಇತ್ತೀಚಗೆ ಸತ್ಯ ಶರ್ಮಾ ಅವರನ್ನು ಪಾಲಿಕೆಯ ತಾತ್ಕಾಲಿಕ ಸ್ಪೀಕರ್ ಆಗಿ ನೇಮಕ ಮಾಡಿದ್ದರು. ಇಂದು ಸಭೆ ಆರಂಭಗೊಳ್ಳುತ್ತಿದ್ದಂತೆ, ಸತ್ಯ ಶರ್ಮಾ ನಾಮನಿರ್ದೇಶಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದು ಆಮ್ ಆದ್ಮಿ ಪಾರ್ಟಿಯನ್ನು ಕೆರಳಿಸಿದೆ. ಮಧ್ಯಭಾಗಕ್ಕೆ ತೆರಳಿದ ಆಪ್ ಸದಸ್ಯರು ಮೊದಲು ಚುನಾಯಿತ ಪ್ರತಿನಿಧಿಗಳು ಪ್ರಮಾಣವಚನ ಸ್ವೀಕರಿಸಬೇಕು. ಬಳಿಕ ನಾಮನಿರ್ದೇಶಿತ ಪ್ರತಿನಿಧಿಗಳ ಸರದಿ. ಆದರೆ ಸ್ಪೀಕರ್ ಬಿಜೆಪಿ ಅಣತಿಯಂತೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ್ದಾರೆ. ಇದು ಬಿಜೆಪಿಯನ್ನು ಕೆರಳಿಸಿತ್ತು.
ಲೆಫ್ಟಿನೆಂಟ್ ಗವರ್ನರ್ ಇತ್ತೀಚೆಗೆ ದೆಹಲಿ ಪಾಲಿಕೆಗೆ 10 ನಾಮನಿರ್ದೇಶಿತರನ್ನು ಸೂಚಿಸಿದ್ದರು. ಪಾಲಿಕೆ ಗೆದ್ದುಕೊಂಡ ಆಮ್ ಆದ್ಮಿ ಪಾರ್ಟಿಯನ್ನು ಸಂಪರ್ಕಿಸಿದ 10 ಸದಸ್ಯರನ್ನು ದೆಹಲಿ ಪಾಲಿಕೆಗೆ ನಾಮನಿರ್ದೇಶನ ಮಾಡಿರುವುದು ತಪ್ಪು ಎಂದು ದೆಹಲಿ ಪ್ರತಿಭಟನೆ ನಡೆಸಿದೆ. ಇಂದು ಈ ನಾಮನಿರ್ದೇಶಿತ ಸದಸ್ಯರು ಮೊದಲು ಪ್ರಮಾಣವಚನ ಸ್ವೀಕಾರಕ್ಕೆ ಅನುಮಾಡಿಕೊಟ್ಟಿರುವುದೇ ರದ್ದಾಂತಕ್ಕೆ ಕಾರಣವಾಗಿದೆ.
ವಿಕೆ ಸಕ್ಸೇನಾ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಸದಸ್ಯರು ಆರೋಪಿಸಿದ್ದರು. ಇಷ್ಟೇ ಅಲ್ಲ ವಿಕೆ ಸಕ್ಸೇನಾ ದೆಹಲಿ ಬಿಜೆಪಿಗೆ ನೆರವು ನೀಡುತ್ತಿದ್ದಾರೆ. ದೆಹಲಿ ಪಾಲಿಕೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿಗೆ ಇದೀಗ ಕನಿಷ್ಠ ಮೇಯರ್ ಸ್ಥಾನ ದೊರಕಿಸಿಕೊಡಲು ಗವರ್ನರ್ ಪ್ರಯತ್ನಪಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪ ಮಾಡಿದೆ.
ಎಲ್ಲರೂ ಹಸುವಿನ ಹಾಲು ಕರೆದರೆ ನಾವು ___ ಹಾಲು ಕರೆದೆವು ಎಂದ ಕೇಜ್ರಿವಾಲ್
ದಿಲ್ಲಿ ಮೇಯರ್ ಆಯ್ಕೆ ವೇಳೆ, ಪಾಲಿಕೆಯ 250 ಸದಸ್ಯರ ಜೊತೆಗೆ, ದಿಲ್ಲಿ ವ್ಯಾಪ್ತಿಯ ಲೋಕಸಭೆ, ರಾಜ್ಯಸಭಾ ಸದಸ್ಯರು, ದಿಲ್ಲಿ ವಿಧಾನಸಭೆಯಿಂದ ಸ್ಪೀಕರ್ ಮೂಲಕ ಪಾಲಿಕೆಗೆ ನಾಮನಿರ್ದೇಶನವಾಗುವ ಸದಸ್ಯರು (ಒಟ್ಟು ಸದಸ್ಯರ ಪೈಕಿ ಶೇ.20ರಷ್ಟು), ವಿವಿಧ ಮುನ್ಸಿಪಲ್ ಸಮಿತಿ ಸದಸ್ಯರು, ಲೆಫ್ಟಿನೆಂಟ್ ಗವರ್ನರ್ ನಾಮನಿರ್ದೇಶನ ಮಾಡುವ 10 ಸದಸ್ಯರು ಕೂಡಾ ಮತದಾನದ ಹಕ್ಕು ಹೊಂದಿರುತ್ತಾರೆ. ಜೊತೆಗೆ ಯಾವುದೇ ಪಕ್ಷದ ಸದಸ್ಯರು ಇನ್ನೊಂದು ಪಕ್ಷದ ಅಭ್ಯರ್ಥಿಗೆ ಮತಹಾಕಿದರೂ, ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದು.