ಎಲ್ಲರೂ ಹಸುವಿನ ಹಾಲು ಕರೆದರೆ ನಾವು ___ ಹಾಲು ಕರೆದೆವು ಎಂದ ಕೇಜ್ರಿವಾಲ್
ಎಎಪಿ ರಾಷ್ಟ್ರ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಈ ಗೆಲುವಿನ ಹಾದಿ ಬಗ್ಗೆ ಮಾತನಾಡಿದ್ದು, ಗುಜರಾತ್‌ನಲ್ಲಿ ಸೀಟುಗಳಿಸಲು ಪಟ್ಟ ಶ್ರಮವನ್ನು ಹೋರಿಯ ಹಾಲು ಕರೆದ ರೀತಿಗೆ ಹೋಲಿಸಿದ್ದಾರೆ.
ನವದೆಹಲಿ: ದೆಹಲಿಯಲ್ಲಿ ಆಡಳಿತದ ಚುಕಾಣಿ ಹಿಡಿದ ಬಳಿಕ ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದ ಆಮ್ ಆದ್ಮಿ ಪಾರ್ಟಿ, ಇತ್ತೀಚೆಗೆ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 14 ಶೇಕಡಾವಾರು ವೋಟುಗಳಿಸುವ ಜೊತೆ ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದರ ಜೊತೆಗೆ ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿಯೂ ಅಧಿಕಾರಕ್ಕೇರಿರುವ ಆಮ್ ಆದ್ಮಿ ಪಾರ್ಟಿ ಗೆಲುವಿನ ವಿಜಯ ಪಾತಕೆ ಹರಿಸಿ ಖುಷಿಯಲ್ಲಿರುವ ಎಎಪಿ ರಾಷ್ಟ್ರ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಈ ಗೆಲುವಿನ ಹಾದಿ ಬಗ್ಗೆ ಮಾತನಾಡಿದ್ದು, ಗುಜರಾತ್‌ನಲ್ಲಿ ಸೀಟುಗಳಿಸಲು ಪಟ್ಟ ಶ್ರಮವನ್ನು ಹೋರಿಯ ಹಾಲು ಕರೆದ ರೀತಿಗೆ ಹೋಲಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಇತ್ತೀಚೆಗಷ್ಟೇ ನಡೆದ ಗುಜರಾತ್ ಚುನಾವಣೆಯಲ್ಲಿ ಆಪ್ ಶೇಕಡಾ 14ರಷ್ಟು ಮತಗಳನ್ನು ಗಮನಿಸಿದ್ದು ಹಾಗೂ 5 ಸ್ಥಾನಗಳನ್ನು ಅಲ್ಲಿ ಗೆದ್ದಿದ್ದು ಎತ್ತಿನ ಹಾಲು ಕರೆದಷ್ಟು ಕಷ್ಟವಾಗಿತ್ತು ಎಂದು ಹೇಳಿದ್ದಾರೆ. ಒಂದು ವರ್ಷದಲ್ಲಿ ನಾವು ಪಂಜಾಬ್ ಅನ್ನು ಗೆದ್ದಿದ್ದೇವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD), ಗೋವಾದಲ್ಲಿ 2 ಶಾಸಕರು ಮತ್ತು ಗುಜರಾತ್‌ನಲ್ಲಿ 14 ಶೇಕಡಾ ಮತಗಳ ಜೊತೆ 5 ಶಾಸಕರನ್ನು ಗೆದ್ದಿದ್ದೇವೆ. ಗುಜರಾತ್ ಯಶಸ್ಸನ್ನು ಉಲ್ಲೇಖಿಸಿ, ಒಬ್ಬ ವ್ಯಕ್ತಿ ತಾನು ಹಸುವಿನ ಹಾಲು ಕರೆದೆ ಎಂದು ಹೇಳಬಹುದು. ಆದರೆ ನಾವು ಎತ್ತಿನ ಹಾಲು ಕರೆದಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್‌ಗೆ ಠಕ್ಕರ್ ನೀಡಲು ರೆಡಿಯಾದ ಆಮ್ ಆದ್ಮಿ ಪಾರ್ಟಿ!
ಅಲ್ಲದೇ 2027ರಲ್ಲಿ ನಾವು ಗುಜರಾತ್‌ನಲ್ಲಿ ಸರ್ಕಾರ ರಚಿಸಲಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಗುಜರಾತ್‌ನಲ್ಲೂ ಖಾತೆ ತೆರೆದ ಎಎಪಿಗೆ ಇತ್ತೀಚೆಗೆ ರಾಷ್ಟ್ರೀಯ ಸ್ಥಾನಮಾನ ಸಿಕ್ಕಿದ್ದು, ಇದಾದ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆ ಕರೆಯಲಾಗಿತ್ತು. ಈ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷದ ನಾಯಕರು ವಿವಿಧ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಜೊತೆಗೆ ಹಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಚೀನಾ ವಸ್ತುಗಳನ್ನು ಬಳಸುವುದನ್ನು ನಿಷೇಧಿಸುವಂತೆ ಕರೆ ನೀಡಿದರು. ಮೋದಿ ಸರ್ಕಾರ ಯೋಧರ ಜೀವದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಈ ಸಂದರ್ಭದಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಸಮಾವೇಶಗಳ ರಾಜಕೀಯ, ಗುಜರಾತ್‌ನಲ್ಲಿ ಬಿಜೆಪಿ, ಆಪ್, ಕಾಂಗ್ರೆಸ್‌ಗೆ ಲಾಭವಾಗಿದ್ದೆಷ್ಟು?
ಚೀನಾದ ಸರಕುಗಳನ್ನು ಯಾರು ಖರೀದಿಸುತ್ತಿದ್ದಾರೆ? ಚೀನಾದಿಂದ ಸರಕುಗಳನ್ನು ಖರೀದಿಸಲು ಬಿಜೆಪಿಯ ಒತ್ತಾಯವೇನು? ನಾವು ನಮ್ಮ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಿಲ್ಲವೇ? ನಮ್ಮ ದೇಶದಲ್ಲಿ ಉತ್ಪಾದಿಸುವಂತಹ ವಸ್ತುಗಳನ್ನು ನಾವು ಚೀನಾದಿಂದ ಖರೀದಿಸುತ್ತೇವೆ. ಸರ್ಕಾರವು ಭಾರತದ ಜನರನ್ನು ಓಡಿಸುತ್ತಿದೆ ಮತ್ತು ಚೀನಾದ ಜನರನ್ನು ಅಪ್ಪಿಕೊಳ್ಳುತ್ತಿದೆ, ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳು ಭಾರತವನ್ನು ತೊರೆಯುತ್ತಿದ್ದಾರೆ ಎಂದು ಕೇಜ್ರಿವಾಲ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.