Asianet Suvarna News Asianet Suvarna News

ದೆಹಲಿ ಪಾಲಿಕೆ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ಕಚೇರಿ ಖಾಲಿ ಖಾಲಿ!

ಸ್ವಾತಂತ್ರ್ಯ ಬಂದ ಬಳಿಕ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸಹಜ ಹಾಗೂ ಸುಲಭವಾಗಿ ಗೆಲುವು ಸಾಧಿಸುತಿತ್ತು. ಕಾಂಗ್ರೆಸ್ ಕಚೇರಿಗಳಲ್ಲಿ ಸಂಭ್ರಮ, ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು. ಆದರೆ ದೆಹಲಿ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ದೆಹಲಿ ಕಾಂಗ್ರೆಸ್ ಕಚೇರಿ ಖಾಲಿ ಖಾಲಿಯಾಗಿದೆ. ಕಾಂಗ್ರೆಸ್ ದಯನೀಯ ಸ್ಥಿತಿ ಇದೀಗ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ.

MCD Election Result Delhi Congress office empty after AAp winning municipal corporation power ckm
Author
First Published Dec 7, 2022, 5:17 PM IST

ನವದೆಹಲಿ(ಡಿ.07): ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಏರಿದೆ. ಅಧಿಕಾರದಲ್ಲಿದ್ದ ಬಿಜೆಪಿ ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಆದರೆ ಈ ಚುನಾವಣೆ ಆಪ್ ಹಾಗೂ ಬಿಜೆಪಿ ನಡುವಿನ ಪೈಪೋಟಿಯಾಗಿತ್ತು. ಕಾಂಗ್ರೆಸ್ ಹೇಳ ಹೆಸರಿಲ್ಲದಂತಾಗಿದೆ. ಹಲವು ಕಡೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಧಪತನದತ್ತ ಸಾಗುತ್ತಿದೆ. 15 ವರ್ಷಕ್ಕೂ ಮೊದಲು ಕಾಂಗ್ರೆಸ್ ದೆಹಲಿ ಪಾಲಿಕೆ ಅಧಿಕಾರದಲ್ಲಿತ್ತು. ಆದರೆ ಬಿಜೆಪಿ ಅಧಿರಾಕಕ್ಕೆ ಬಂದ ಬಳಿಕ ಕಾಂಗ್ರೆಸ್ ಬಲ ಕ್ಷೀಣಿಸಿತು. ಇತ್ತ ಆಮ್ ಆದ್ಮಿ ಪಾರ್ಟಿ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿದೆ. ದೆಹಲಿಯಲ್ಲಿ ಆಪ್ ಗೆಲುವಿನ ನಗೆ ಬೀರಿದೆ. ಬಿಜೆಪಿ ಸೋಲಿನ ಕಹಿ ಅನುಭವಿಸಿದರೂ 100ಕ್ಕಿಂತ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಕಾಂಗ್ರೆಸ್ ಕೇವಲ 9 ಸ್ಥಾನ ಗೆದ್ದುಕೊಂಡಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಕಚೇರಿ ಖಾಲಿ ಖಾಲಿಯಾಗಿದೆ.

ದೆಹಲಿ ಕಾಂಗ್ರೆಸ್‌ನಲ್ಲಿ ಯಾರೊಬ್ಬರು ಕಾಣಿಸುತ್ತಿಲ್ಲ. ನಾಯಕರು ಯಾರ ಕಣ್ಣಿಗೂ ಕಾಣುತ್ತಿಲ್ಲ. ಇತ್ತ ದೆಹಲಿ ಬೀದಿ ಬೀದಿಯಲ್ಲಿ ಆಮ್ ಆದ್ಮಿ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಎಲ್ಲಿ ತಪ್ಪಾಯಿತು? ಯಾಕೆ ಹೀಗಾಯಿತು ಅನ್ನೋ ಚರ್ಚೆಯಲ್ಲಿ ಮುಳುಗಿದೆ. ದೆಹಲಿಯಲ್ಲಿ ನಿಧಾನವಾಗಿ ಬಲಿಷ್ಠಗೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿ ಇದೀಗ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದೆ.

 

ಮಹಾನಗರ ಪಾಲಿಕೆ ಗೆದ್ದ ಬೆನ್ನಲ್ಲೇ ಆಮ್ ಆದ್ಮಿಗೆ ಎದುರಾಯ್ತು ಸಂಕಷ್ಟ!

ಕಾಂಗ್ರೆಸ್ ದಯನೀಯ ಪರಿಸ್ಥಿತಿ ಇದೀಗ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಸ್ವಾತಂತ್ರ್ಯ ನಂತರ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲುವು ಸಾಧಿಸುತ್ತಿತ್ತು. ಸಹಜವಾಗಿ ಕಚೇರಿಗಳಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಆದರೆ ಇತ್ತೀಚೆಗೆ ಒಂದೊಂದೆ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್, ಮರಳಿ ಪಡೆಯುವ ಯತ್ನವನ್ನೂ ಮಾಡುತ್ತಿಲ್ಲ. ಪಂಜಾಬ್‌ನಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್ ಆಡಳಿತವನ್ನು ಆಪ್‌ಗೆ ಬಿಟ್ಟುಕೊಟ್ಟಿತು. ಇದೀಗ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೋರಾಟ ರಾಜಕೀಯವಾಗಿ ಅತ್ಯಂತ ಪ್ರಮುಖವಾಗಿದೆ.

Delhi MCD Election Result: ಮೇಯರ್‌ ರೇಸ್‌ನಲ್ಲಿ ಮೂವರ ಫೈಟ್‌, ಸಿಸೋಡಿಯಾಗೆ ಪ್ರಮೋಷನ್‌?

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದಲ್ಲಿ ಗೆಲುವಿನ ಕುದರೆ ಯಾರೇ ಆಗಿರಬಹುದು. ಆದರೆ ಕಾಂಗ್ರೆಸ್ ಗಳಿಸುವ ಸ್ಥಾನ ಅತ್ಯಂತ ಪ್ರಮುಖ. ಕಾರಣ ಇಲ್ಲೂ ಕೂಡ ಕಾಂಗ್ರೆಸ್ ಹೇಳ ಹೆಸರಿಲ್ಲದಂತಾದರೆ ಕಾಂಗ್ರೆಸ್ ಭವಿಷ್ಯ ಅತಂತ್ರವಾಗಲಿದೆ. ಮುಂದಿನ ಲೋಕಸಭೆಯಲ್ಲಿ ಕಾಂಗ್ರೆಸ್ ಬದಲು ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಎರ್ಪಡಲಿದೆ.

ಸಮೀಕ್ಷೆಯಲ್ಲಿ ಆಪ್‌ಗೆ ಅಧಿಕಾರ ನೀಡಿದ್ದ ಎಜೆನ್ಸಿ
ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿತ್ತು. ಬಹುತೇಕ ಎಲ್ಲ ಸಮೀಕ್ಷೆಗಳು ಅರವಿಂದ ಕೇಜ್ರಿವಾಲ್‌ರ ಆಮ್‌ ಆದ್ಮಿ ಪಕ್ಷ (ಆಪ್‌) ಮೊದಲ ಬಾರಿ ದಿಗ್ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಸಮೀಕ್ಷೆಗಳಲ್ಲಿ, 15 ವರ್ಷದಿಂದ ಅಧಿಕಾರದಲ್ಲಿದ್ದ ಬಿಜೆಪಿಗೆ ಭಾರಿ ಹಿನ್ನಡೆ ಆಗಲಿದೆ ಎಂದಿತ್ತು. ಆದರೆ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಆದರೆ ಕಾಂಗ್ರೆಸ್‌ 3ನೇ ಸ್ಥಾನಕ್ಕೆ ತಳ್ಳಲ್ಪಡಲಿದೆ ಎಮದು ಸಮೀಕ್ಷೆ ಹೇಳಿವೆ. ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದುಕೊಂಡು ತೀವ್ರ ನಿರಾಸೆ ಅನುಭವಿಸಿದೆ.

Follow Us:
Download App:
  • android
  • ios