ಮಸ್ಕಿ ತಾಲೂಕು ಕೇಂದ್ರವಾಗಿ ಇಷ್ಟುದಿನಗಳಾದರೂ ಇಲ್ಲಿನ ಜನರೂ ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಮೂರು ತಾಲೂಕುಗಳಿಗೆ ಅಲೆದಾಡುವಂತಾಗಿದೆ. ಈವರೆಗೆ ಫಾರ್ಮ್‌ ನಂಬರ್‌ 57ಅರ್ಜಿಗಳನ್ನು ವಿಲೇವಾರಿ ಮಾಡಲು ಆಗಿಲ್ಲ ಎಂದು ಆರೋಪಿಸಿದ ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ. 

ಮಸ್ಕಿ(ಮಾ.09): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಸ್ಕಿ ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯ ಮಾಡಿದೆ. ಆದ್ದರಿಂದ ಮಸ್ಕಿಯಲ್ಲಿ ಮಾ.11ರಂದು ನಡೆಯುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಬರುವ ಸರ್ಕಾರದ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಕೆಆರ್‌ಎಸ್‌ ತಾಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ ಎಚ್ಚ​ರಿ​ಸಿ​ದ​ರು.

ಪಟ್ಟಣದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸ್ಕಿ ತಾಲೂಕು ಕೇಂದ್ರವಾಗಿ ಇಷ್ಟುದಿನಗಳಾದರೂ ಇಲ್ಲಿನ ಜನರೂ ಸರ್ಕಾರಿ ದಾಖಲೆಗಳನ್ನು ಪಡೆದುಕೊಳ್ಳಲು ಮೂರು ತಾಲೂಕುಗಳಿಗೆ ಅಲೆದಾಡುವಂತಾಗಿದೆ. ಈವರೆಗೆ ಫಾರ್ಮ್‌ ನಂಬರ್‌ 57ಅರ್ಜಿಗಳನ್ನು ವಿಲೇವಾರಿ ಮಾಡಲು ಆಗಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲಾ ಕಡೆ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗೋದು ಗ್ಯಾರೆಂಟಿ: ಸಿ.ಟಿ.ರವಿ

ಇಷ್ಟೇ ಅಲ್ಲದೇ ಅಶೋಕ ಶಿಲಾಶಾಸನ ಸಾಕು ಇವರ ಮಾಡಿದ ಅಭಿವೃದ್ಧಿ ಗೊತ್ತಾಗುತ್ತದೆ. ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡುತ್ತದೆ. ಲಂಚ ತಿಂದ ಬಿಜೆಪಿ ಶಾಸಕ ಕೋರ್ಚ್‌ ಜಾಮೀನು ಪಡೆದುಕೊಂಡು ಅದ್ಧೂರಿ ಮೆರವಣಿಗೆ ಮಾಡಿರುವುದು ನಾಚೀಕೆಗೇಡಿನ ಸಂಗತಿ ಎಂದರು.

ಮಾ.11ರಂದು ನಡೆಯುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಬರುವ ಸಚಿವರಿಗೆ ಗೋ ಬ್ಯಾಕ್‌ ಹೋರಾಟ ಮಾಡಿ ಕಪ್ಪು ಬಾವುಟ ಪ್ರದರ್ಶನದ ಮಾಡಲಾಗುವುದು ಎಂದರು. ತಾಲೂಕು ಪ್ರಧಾನ ಕಾರ್ಯದರ್ಶಿ ಮಾರುತಿ ಜಿನ್ನಾಪೂರ, ಸಿಪಿಐ(ಎಂಎಲ್‌) ರೆಡ್‌ಸ್ಟಾರ್‌ ತಾಲೂಕು ಕಾರ್ಯದರ್ಶಿ ವೆಂಕಟೇಶ ನಾಯಕ, ತಿರುಪತಿ ಇತರರು ಇದ್ದರು.