Asianet Suvarna News Asianet Suvarna News

Karnataka election 2023: ದೇಶದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ: ಬಿಎಸ್‌ವೈ

ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಜಗತ್ತು ಮೋದಿ ಅವರನ್ನು ಕೊಂಡಾಡುತ್ತಿದೆ. ಮೋದಿ, ಅಮಿತ್‌ ಶಾ ನೇತೃತ್ವದಲ್ಲಿ 140 ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತ ಸಿದ್ಧ ಎಂದ​ರು.

Congress has reached the stage of bankruptcy in the country says BSY at maski at raichur rav
Author
First Published Mar 12, 2023, 7:46 AM IST

ಮಸ್ಕಿ (ಮಾ.12) : ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ದಿವಾಳಿ ಹಂತಕ್ಕೆ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇಡೀ ಜಗತ್ತು ಮೋದಿ ಅವರನ್ನು ಕೊಂಡಾಡುತ್ತಿದೆ. ಮೋದಿ, ಅಮಿತ್‌ ಶಾ ನೇತೃತ್ವದಲ್ಲಿ 140 ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಸರ್ಕಾರ ಅಸ್ತಿತ್ವಕ್ಕೆ ಬರುವುದು ಶತ ಸಿದ್ಧ ಎಂದ​ರು.

ಮಸ್ಕಿಯಲ್ಲಿ ವಿಜಯ ಸಂಕಲ್ಪಯಾತ್ರೆ ನಾಳೆ: ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ಕೆಆರ್‌ಎಸ್

ಮಸ್ಕಿ ಅಭಿವೃದ್ಧಿಗಾಗಿ ನಂದವಾಡಗಿ ಮೂರು ಹಂತದಲ್ಲಿ ಯೋಜನೆ ಜಾರಿ, ಮಸ್ಕಿ ನಾಲಾ ಯೋಜನೆ(Maski Naala project)ಯ 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 52 ಕೋಟಿ ರು. ಕಾಮಗಾರಿ ಮಾಡಲಾಗುತ್ತಿದೆ. ಕೆರೆ ತುಂಬಿಸುವ ಯೋಜನೆ 470 ಕೋಟಿ ಕಾಮಗಾರಿ ಟೆಂಡರ್‌ ಪ್ರಗತಿಯಲ್ಲಿದೆ. ವಟಗಲ್‌ ಬಸವೇಶ್ವರ ನೀರಾವರಿ ಯೋಜನೆ(Vatagal Basaveshwar irrigation project) 1421 ಕೋಟಿ ರು. ತಾಂತ್ರಿಕ ಮಂಜೂರು ಆಗಿದೆ. ಈ ಕ್ಷೇತ್ರದ ಇನ್ನಷ್ಟುಅಭಿವೃದ್ಧಿಗಾಗಿ ಪ್ರತಾಪಗೌಡ ಪಾಟೀಲ್‌ರನ್ನು 35-40 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಇಲ್ಲಿ ನಿರೀಕ್ಷೆ ಮೀರಿ ತಾಯಂದಿರು ಸೇರಿದ್ದಾರೆ. ಮಹಿಳೆಯರಿಗೆ ಅಸಾಧ್ಯವಾದುದು ಯಾವುದು ಇಲ್ಲ. ಆದ್ದರಿಂದ ಪ್ರತಾಪಗೌಡ ಪಾಟೀಲ್‌ರನ್ನು ನಾನು ಭಾವಿ ಶಾಸಕರೆಂದು ಕರೆಯುತ್ತೇನೆ ಎಂದರು.

ಸಚಿವ ಬಿ.ಶ್ರೀರಾಮುಲು(B Sriramulu) ಮಾತನಾಡಿ, ಕಾಂಗ್ರೆಸ್‌ನವರು ಸುಳ್ಳು ಆಶ್ವಾಸನೆ ನೀಡಿ ಏತ ನೀರಾವರಿ, 5 ಕಾಲುವೆ ಜಾರಿ ಮಾಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರು ಉಚಿತ ಯೋಜನೆಗಳ ಗ್ಯಾರಂಟಿ ಪತ್ರ ಕೊಟ್ಟಿದ್ದಾರೆ. ಆದರೆ, ಗ್ಯಾರಂಟಿ ವಾರೆಂಟಿ ಏನೂ ನಡೆಯಲ್ಲ. ಎಲ್ಲ ಬರೀ ಸುಳ್ಳು, 2023ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್‌ರನ್ನ ಗೆಲ್ಲಿಸ್ತಾರೆ. ಸಮಗ್ರ ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ವೋಟ್‌ ಕೊಡಿ. ಡಬಲ್‌ ಎಂಜಿನ್‌ ಸರ್ಕಾರ, ಜನಪರ ಆಡಳಿತ ನೀಡುತ್ತಿದೆ. ಪ್ರತಾಪಗೌಡ ಪಾಟೀಲ್‌(Pratap gowda Patil) ರಿಗೆ ಉಜ್ವಲವಾದ ಭವಿಷ್ಯವಿದೆ ಆದ್ದರಿಂದ ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

Forest fire: ಪಶ್ಚಿಮ ಘಟ್ಟದಲ್ಲಿ ಹಬ್ಬಿದ ಕಾಡ್ಗಿಚ್ಚು ನಿಯಂತ್ರಣ, 250 ಎಕರೆ ಅರಣ್ಯ ನಾಶ!

ನಂತರ ಮಾಜಿ ಶಾಸಕ ಪ್ರತಾ​ಪ​ಗೌಡ ಪಾಟೀ​ಲ್‌, ಸಂಸದ ಸಂಗಣ್ಣ ಕರಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡ​ರು,​ ಕಾ​ರ್ಯ​ಕ​ರ್ತರು, ಸಾರ್ವ​ಜ​ನಿ​ಕರು ಭಾಗ​ವ​ಹಿ​ಸಿ​ದ್ದರು.

Follow Us:
Download App:
  • android
  • ios