Asianet Suvarna News Asianet Suvarna News

ಯಾವ ಪ್ರಧಾನಿಯೂ ಇಷ್ಟೊಂದು ಸುಳ್ಳು, ದ್ವೇಷದ ಭಾಷಣ ಮಾಡಿಲ್ಲ: ಮೋದಿ ವಿರುದ್ಧ ಮನಮೋಹನ್ ಸಿಂಗ್ ವಾಗ್ದಾಳಿ

ಪಂಜಾಬ್ ಜನತೆಗೆ ಮನಮೋಹನ್‌ ಸಿಂಗ್ ಪತ್ರ ಬರೆದಿದ್ದಾರೆ. ಸರ್ವಾಧಿಕಾರದ ಆಡಳಿತದಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವದಿಂದ ರಕ್ಷಿಸಲು ನಮ್ಮ ಮುಂದೆ ಅಂತಿಮ ಅವಕಾಶ ಬಂದಿದೆ ಎಂದಿದ್ದಾರೆ.

Manmohan Singh writes letter to punjab people and attacks pm narendra modi mrq
Author
First Published May 30, 2024, 7:08 PM IST

ನವದೆಹಲಿ:ಪಿಎಂ ನರೇಂದ್ರ ಮೋದಿ (PM Narendra Modi) ವಿರುದ್ಧ ಮಾಜಿ ಪ್ರಧಾನ ಮಂತ್ರಿಗಳಾದ ಮನಮಮೋಹನ್ ಸಿಂಗ್ (Former PM Manmohan Singh) ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರು ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಅಸಂಸದೀಯ ಪದಗಳನ್ನು ಬಳಕೆ ಮಾಡಿ ದ್ವೇಷ ಭಾಷಣ (hateful And unparliamentary Words) ಮಾಡುತ್ತಿದ್ದಾರೆ ಎಂದು ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

ಜೂನ್ 1ರಂದು ಪಂಜಾಬ್‌ನಲ್ಲಿ ಮತದಾನ ನಡೆಯಲಿದೆ. ಇದು ದೇಶದಲ್ಲಿ ಏಳು ಮತ್ತು ಕೊನೆಯ ಹಂತದ ಮತದಾನವಾಗಿದೆ. ಈ ಹಿನ್ನೆಲೆ ಪಂಜಾಬ್ ಜನತೆಗೆ ಮನಮೋಹನ್‌ ಸಿಂಗ್ ಪತ್ರ ಬರೆದಿದ್ದಾರೆ. ಸರ್ವಾಧಿಕಾರದ ಆಡಳಿತದಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಮುಂದೆ ಅಂತಿಮ ಅವಕಾಶ ಬಂದಿದೆ ಎಂದು ಮತದಾರರಲ್ಲಿ ಮನಮೋಹನ್ ಸಿಂಗ್ ಮನವಿ ಮಾಡಿಕೊಂಡಿದ್ದಾರೆ. 

ಪ್ರಧಾನಿಗಳದ್ದು ದ್ವೇಷಭರಿತ ಭಾಷಣ

ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂಕ ದ್ವೇಷಪೂರಿತ ಭಾಷಣಗಳಲ್ಲಿ ತೊಡಗಿಕೊಳ್ಳುವ ಮೂಲಕ ಸಾರ್ವಜನಿಕ ಭಾಷಣದ ಘನತೆಯನ್ನು ಕಡಿಮೆ ಮಾಡಿದ್ದಾರೆ. ಚುನಾವಣಾ ಪ್ರಚಾರವನ್ನು ನಾನು ಸಹ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮೋದಿಯವರ ಭಾಷಣವೂ ಜನರನ್ನು ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿರುವ ಮನಮೋಹನ್ ಸಿಂಗ್, ಪ್ರಧಾನಿ ಸ್ಥಾನದ ಗೌರವವನ್ನು ಕಡಿಮೆ ಮಾಡಿದ ಮೊದಲ ಪಿಎಂ ಮೋದಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. 

ತಮ್ಮ ವಿರುದ್ಧದ ಹೇಳಿಕೆಗೆ ಸಿಂಗ್ ತಿರುಗೇಟು

ಪ್ರಧಾನಿಗಳ ಭಾಷಣ ದ್ವೇಷದಿಂದ ಕೂಡಿದ್ದು, ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಸಮಾಜದ ಒಂದು ವರ್ಗವನ್ನು ಗುರಿಯಾಗಿಸುತ್ತಿರುವ ಪ್ರಧಾನಿ ಮೋದಿ, ಭಾಷಣದಲ್ಲಿ ಹಲವು ಸುಳ್ಳುಗಳನ್ನು ಹೇಳಿದ್ದಾರೆ. ನನ್ನ ಕುರಿತು ಸಹ ಕೆಲವು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ನಾನೆಂದಿಗೂ ವಿಭಜನೆಯ ಬಗ್ಗೆ ಮಾತನಾಡಿಲ್ಲ ಎಂದು ಮೋದಿ ಹೇಳಿಕೆಗೆ ತಿರುಗೇಟು ನೀಡಿದರು. ದೇಶದ ಸಂಪನ್ಮೂಲ ಹಂಚಿಕೆಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು ಅಂತ ಪಿಎಂ ಮೋದಿ ಚುನಾವಣಾ ಸಮಾವೇಶದಲ್ಲಿ ಹೇಳಿದ್ರು.

ಬಿಸಿಲು: ವೇದಿಕೆಯಲ್ಲೇ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್!

ಬಿಜೆಪಿಯವರದ್ದು ನಕಲಿ ದೇಶಭಕ್ತಿ

ಬಿಜೆಪಿಯ ಮಹತ್ವಕಾಂಕ್ಷೆಯ ಯೋಜನೆಯನ್ನು ಟೀಕಿಸಿದ ಮನಮೋಹನ್ ಸಿಂಗ್, ಇದೊಂದು ಕೆಟ್ಟ ಕಲ್ಪನೆಯ ಯೋಜನೆಯಾಗಿದ್ದು, ದೇಶಭಕ್ತಿ, ಶೌರ್ಯ ಮತ್ತು ಸೇವೆಯನ್ನು ಕೇವಲ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸುವ ಮೂಲಕ ಸೇನೆಯನ್ನು ದುರ್ಬಲಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು. ಬಿಜೆಪಿಯವರದ್ದು ನಕಲಿ ದೇಶಭಕ್ತಿ ಎಂದು ಮನಮೋಹನ್ ಸಿಂಗ್ ಕುಟುಕಿದರು.

ವೇದಿಕೆ ಮೇಲೆ ಕಮಲಾ ಕಾಲಿಗೆರಗಿದ ಪ್ರಧಾನಿ ಮೋದಿ ವಿಡಿಯೋ ವೈರಲ್, ಯಾರು ಈ ಮಹಿಳೆ?

ಅಗ್ನಿವೀರ್ ಯೋಜನೆಯಡಿಯಲ್ಲಿ ತರಬೇತಿ ಪಡೆದ ಯುವಕರು ಸೇನೆಗೆ ಆಯ್ಕೆಯಾಗದಿದ್ದರೆ ಹೊರಗೆ ಹೋಗಿ ಏನು ಮಾಡಬೇಕು ಎಂಬ ಆತಂಕಕ್ಕೆ ಒಳಗಾಗಿದ್ದಾರೆ. ಪಂಜಾಬಿನ ಮಕ್ಕಳು ದೇಶಸೇವೆ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ.  ಆದ್ರೆ ಅಗ್ನಿವೀರ್ ಯೋಜನೆಯಿಂದಾಗಿ ಸೇನೆಗೆ ಸೇರ್ಪಡೆಯಾಗಲು ಎರಡೆರಡು ಬಾರಿ ಯೋಚಿಸುವಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಗ್ನಿವೀರ್ ಯೋಜನೆ ತೆಗೆದು ಹಾಕಲಿದೆ ಎಂದು ಮನಮೋಹನ್ ಸಿಂಗ್ ಭರವಸೆ ನೀಡಿದ್ದಾರೆ.

Latest Videos
Follow Us:
Download App:
  • android
  • ios