Asianet Suvarna News Asianet Suvarna News

ಬಿಸಿಲು: ವೇದಿಕೆಯಲ್ಲೇ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್!

ದೇಶದಲ್ಲಿ ಲೋಕಸಭಾ ಚುನಾವಣೆ ಕಾವೇರಿರುವ ಹೊತ್ತಲ್ಲಿಯೇ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ರುದ್ರಪುರದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಸಿಲಿನ ಝಳ ತಡೆಯಲಾಗದೇ ಸಾವರ್ಜನಿಕರ ಮುಂದೆಯೇ ತಲೆಯ ಮೇಲೆ ನೀರು ಸುರಿದುಕೊಂಡಿರುವ ಘಟನೆ ನಡೆದಿದೆ. 

Rahul Gandhi pours water over his head At UP poll rally rav
Author
First Published May 30, 2024, 3:04 PM IST

ರುದ್ರಪುರ (ಮೇ.30) : ದೇಶದಲ್ಲಿ ಲೋಕಸಭಾ ಚುನಾವಣೆ ಕಾವೇರಿರುವ ಹೊತ್ತಲ್ಲಿಯೇ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ರುದ್ರಪುರದಲ್ಲಿ ಚುನಾವಣಾ ಪ್ರಚಾರ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಸಿಲಿನ ಝಳ ತಡೆಯಲಾಗದೇ ಸಾವರ್ಜನಿಕರ ಮುಂದೆಯೇ ತಲೆಯ ಮೇಲೆ ನೀರು ಸುರಿದುಕೊಂಡಿರುವ ಘಟನೆ ನಡೆದಿದೆ. 

ವೇದಿಕೆ ಮುಂಭಾಗದಲ್ಲಿ ನಿಂತು ಮಾತನಾಡುತ್ತಿದ್ದ ರಾಹುಲ್‌ ಗಾಂಧಿ, ಬಾಟಲಿಯಿಂದ ನೀರು ಕುಡಿದಿದ್ದಾರೆ. ತಾಪಮಾನದಿಂದ ಕೊಂಚ ಸುಧಾರಿಸಿಕೊಳ್ಳಲು ಪ್ರಯತ್ನಿಸಿದರು. ಆ ಬಳಿಕ ‘ಗರ್ಮಿ ಹೈ ಕಾಫಿ’( ಸಾಕಷ್ಟು ಬಿಸಿಯಾಗಿದೆ) ಎನ್ನುತ್ತಲೇ ಅದೇ ಬಾಟಲಿ ನೀರನ್ನು ತಲೆಮೇಲೆ ಸುರಿದುಕೊಂಡಿದ್ದಾರೆ.

ಮೋದಿಗೆ ಮಂದಿರ ಕಟ್ಟಿಸುತ್ತೇವೆ, ಬಯಸಿದ್ರೆ ಡೋಕ್ಲಾ ಪ್ರಸಾದ ವಿತರಣೆ ಮಾಡುತ್ತೇವೆ : ಸಿಎಂ ಮಮತಾ ವ್ಯಂಗ್ಯ

Latest Videos
Follow Us:
Download App:
  • android
  • ios