ಮೈಕ್ ಕಂಡಲ್ಲಿ ಮಾತಾಡುವ ಮೋದಿ ಮಣಿಪುರ ಬಗ್ಗೆ ಮೌನ: ಉಗ್ರಪ್ಪ ಕಿಡಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಕಾಸುರನಾಗಿ ಕಾಣುತ್ತಿದ್ದಾರೆ. ಮೈಕ್ ಎಲ್ಲಿ ಕಾಣುತ್ತದೆಯೋ ಅಲ್ಲಿ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ, ಮಣಿಪುರ ಗಲಭೆ ಬಗ್ಗೆ ಚಕಾರ ಎತ್ತಿಲ್ಲ. ಪ್ರಧಾನಿಗೆ ತಮ್ಮ ಕುಟುಂಬದ ರಕ್ಷಣೆಯೇ ಸಾಧ್ಯವಿಲ್ಲ, ಇನ್ನು ಜನರ ರಕ್ಷಣೆ ಮಾಡುತ್ತಾರಾ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಬೆಂಗಳೂರು (ಆ.3): ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಕಾಸುರನಾಗಿ ಕಾಣುತ್ತಿದ್ದಾರೆ. ಮೈಕ್ ಎಲ್ಲಿ ಕಾಣುತ್ತದೆಯೋ ಅಲ್ಲಿ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆದರೆ, ಮಣಿಪುರ ಗಲಭೆ ಬಗ್ಗೆ ಚಕಾರ ಎತ್ತಿಲ್ಲ. ಪ್ರಧಾನಿಗೆ ತಮ್ಮ ಕುಟುಂಬದ ರಕ್ಷಣೆಯೇ ಸಾಧ್ಯವಿಲ್ಲ, ಇನ್ನು ಜನರ ರಕ್ಷಣೆ ಮಾಡುತ್ತಾರಾ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ(VS Ugrappa) ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ(Narendra Modi) ಸಂಸತ್‌ಗೆ ಹೋಗುವುದಿಲ್ಲ. ಮಣಿಪುರಕ್ಕೆ ಹೋಗಿಲ್ಲ. ಅವರಿಗೆ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ಬದ್ಧತೆಯಿದ್ದರೆ ಮಣಿಪುರದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡಲು ಕೃಷಿ ಮಾಡುತ್ತಿದ್ದರು. ನಿಜವಾಗಿಯೂ ಅವರಿಗೆ ಬದ್ಧತೆಯಿದ್ದರೆ ಮಣಿಪುರ ಸರ್ಕಾರ ಉಚ್ಛಾಟಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ ಶಾಂತಿ ಕಾಪಾಡಲಿ ಎಂದು ಆಗ್ರಹಿಸಿದರು.ಮಣಿಪುರ ಗಲಭೆ, ಪ್ರಕೃತಿ ವಿಕೋಪದಿಂದ ಸಾಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಸಮಯವಿಲ್ಲ. ಬದಲಿಗೆ ಮೆಡಲ್‌ಗಳ ಜತೆ ಆಟ ಆಡುತ್ತಿದ್ದಾರೆ. ಈ ದೇಶ ಕಂಡಂತಹ ಅತ್ಯಂತ ಶೋಕಿಲಾಲ ಪ್ರಧಾನಿ ನರೇಂದ್ರ ಮೋದಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರ ಸಮಸ್ಯೆ ಶೀಘ್ರ ಇತ್ಯರ್ಥವಾಗದಿದ್ದರೆ ದೇಶದ ಭದ್ರತೆಗೆ ಅಪಾಯ: ಇಂಡಿಯಾ ಕಳವಳ
ಮಾಜಿ ಸಚಿವ ಎಚ್.ಎಂ.ರೇವಣ್ಣ(HM Revanna) ಮಾತನಾಡಿ, ಮೋದಿ ಅವರ ಜನವಿರೋಧಿ ಆಡಳಿತ ವಿರುದ್ಧ ಹೋರಾಡಲು ಇವತ್ತು ಇಂಡಿಯಾ ಎಂಬ ವಿರೋಧಪಕ್ಷಗಳ ಒಕ್ಕೂಟ ಸ್ಥಾಪನೆಯಾಗಿದೆ. ಇಂಡಿಯಾ ಪದವನ್ನು ಮೌನೇಶ್ವರ ಯಾವುದಕ್ಕೆ ಹೋಲಿಸಿದ್ದಾರೆ ಎಂಬುದನ್ನು ನೋಡಿದ್ದೀರಿ. ಇವೆಲ್ಲದಕ್ಕೂ ಜನರೇ ಪಾಠ ಕಲಿಸುತ್ತಾರೆ ಎಂದರು.
ದಕ್ಷಿಣ ಕನ್ನಡ: ಮಣಿಪುರ ಘಟನೆ ಖಂಡಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ