ಟಿಕೆಟ್ ಮಿಸ್ ಆಗಿದ್ದಕ್ಕೆ ಅನಂತಕುಮಾರ್ ಹೆಗ್ಡೆ ಅಸಮಾಧಾನ: ದೇಶದ ಮುಂದೆ ಇವು ದೊಡ್ಡ ಸಮಸ್ಯೆ ಅಲ್ಲ: ವಿ ಸುನೀಲ್ ಕುಮಾರ್
ಸ್ಥಳೀಯ ಸಣ್ಣ ಪುಟ್ಟ ಸಮಸ್ಯೆಗಳು ದೇಶವನ್ನ ಎದುರು ನೋಡಿದಾಗ ದೊಡ್ಡದು ಎಂದು ಅನಿಸಲ್ಲ. ಸಹಜವಾಗಿ ಯಾವುದಾದರೂ ಅಸಮಾಧಾನವಿದ್ದರೆ. ಅದನ್ನ ಸರಿ ಮಾಡುವ ಕೆಲಸ ನಮ್ಮ ಪಾರ್ಟಿ ಮಾಡುತ್ತೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನೀಲ್ ಕುಮಾರ ತಿಳಿಸಿದರು.
ಮಂಗಳೂರು (ಏ.8): ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಅಭಿಯಾನ ಮಾಡುತ್ತಿದ್ದೇವೆ. ದೊಡ್ಡ ಕಾರ್ಯಕ್ರಮಗಳನ್ನ ಮಾಡುವ ಬದಲು ಮನೆ ಮನೆಗೆ ತೆರಳುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸುನೀಲ್ ಕುಮಾರ ತಿಳಿಸಿದರು.
ಇಂದು ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಪ್ರಿಲ್ 10, 11ರಂದು ಎಲ್ಲಾ ಕಡೆಗಳಲ್ಲಿ ಬೂತ್ ಮಟ್ಟದ ಸಭೆ ನಡೆಯಲಿದೆ. ಈ ವರ್ಷ ಮೂರು ಕಾರಣಕ್ಕಾಗಿ ಚುನಾವಣೆಗೆ ಮತ ಕೇಳಲು ಹೋಗುತ್ತಿದ್ದೇವೆ. ಸುರಕ್ಷಿತ ಭಾರತ, ಸಾಂಸ್ಕೃತಿಕ ಭಾರತ, ವಿಕಸಿತ ಭಾರತ ಈ ಮೂರು ವಿಷಯದಿಂದ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಎಂದರು.
'ಮಹಾಪ್ರಭುಗಳು ಫಕೀರರು, ನಾನು ಜಂಗಮ..' ಪ್ರಧಾನಿ ಮೋದಿ ಹೆಸರೇಳದೇ ನಟ ಪ್ರಕಾಶ್ ರಾಜ್ ವಾಗ್ದಾಳಿ
ಎಪ್ರಿಲ್ 14 ರಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬರುವವರಿದ್ದಾರೆ. ಅದೇ ದಿನ 3ಗಂಟೆಗೆ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಕರಾವಳಿಯಲ್ಲಿ ಇಲ್ಲಿಯವರೆಗೆ ಸೇರದ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ಬರುತ್ತಿದ್ದಂತೆ ನಕ್ಸಲ್ ಚುಟುವಟಿಕೆ ಮತ್ತೆ ಕಾಣಿಸುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ನಕ್ಸಲ್ ಚಟುವಟಿಕೆ ನಿಯಂತ್ರಣ ಮಾಡಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಕಾಣಿಸಿಕೊಂಡಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಅಕ್ಕಿ ಕೊಟ್ಟಿದ್ದು ಮೋದಿ, ಸಿದ್ದರಾಮಯ್ಯ ಕೊಟ್ಟಿದ್ದು ತಟ್ಟಿನ ಚೀಲ ಮಾತ್ರ: ಗೋವಿಂದ ಕಾರಜೋಳ ವಾಗ್ದಾಳಿ
ಇನ್ನು ಬಿಜೆಪಿ ಟಿಕೆಟ್ ವಂಚಿತ ಅನಂತ್ ಕುಮಾರ್ ಹೆಗಡೆ ಅಸಮಾಧಾನ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಸಣ್ಣ ಪುಟ್ಟ ಸಮಸ್ಯೆಗಳು ದೇಶವನ್ನ ಎದುರು ನೋಡಿದಾಗ ದೊಡ್ಡದು ಎಂದು ಅನಿಸಲ್ಲ. ಸಹಜವಾಗಿ ಯಾವುದಾದರೂ ಅಸಮಾಧಾನವಿದ್ದರೆ. ಅದನ್ನ ಸರಿ ಮಾಡುವ ಕೆಲಸ ನಮ್ಮ ಪಾರ್ಟಿ ಮಾಡುತ್ತೆ. ಎಲ್ಲರ ಜೊತೆಗೂ ನಾವು ಸಂಪರ್ಕದಲ್ಲಿದ್ದೇವೆ. ಎಲ್ಲರನ್ನು ಈ ಚುನಾವಣಾ ಕಣದಲ್ಲಿ ನಾವು ಇಳಿಸುತ್ತೇವೆ. ಮತ್ತೊಮ್ಮೆ ಮೋದಿ ಸರಕಾರ ಬರಬೇಕು ಅನ್ನೋದು ಎಲ್ಲರ ಮನಸಲ್ಲಿದೆ ಎಂದರು.