ಮಂಗಳೂರು: ಕೈ - ಕಮಲ ಕಾರ್ಯಕರ್ತರ ನಡುವೆ ಘರ್ಷಣೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಧ್ವಂಸ

ಮಂಗಳೂರು ಹೊರವಲಯದ ಮುಡುಶೆಡ್ಡೆ ಎಂಬಲ್ಲಿ ಈ ಘರ್ಷಣೆ ನಡೆದಿದ್ದು, ಈ ಗಲಾಟೆಯಲ್ಲಿ ಮೂಡಬಿದರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ದ್ವಂಸವಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. 

mangaluru bjp congress workers collission mithun rai car damaged injury to police ash

ಮಂಗಳೂರು (ಮೇ 10, 2023): ಮಂಗಳೂರಲ್ಲಿ ಕರ್ನಾಟಕದ ಮತದಾನದ ದಿನವೇ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಮಂಗಳೂರು ಹೊರವಲಯದ ಮುಡುಶೆಡ್ಡೆ ಎಂಬಲ್ಲಿ ಈ ಘಟನೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿರೋ ಘಟನೆಯೂ ವರದಿಯಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದಾರೆ.

ಮಂಗಳೂರು ಹೊರವಲಯದ ಮುಡುಶೆಡ್ಡೆ ಎಂಬಲ್ಲಿ ಈ ಘರ್ಷಣೆ ನಡೆದಿದ್ದು, ಈ ಗಲಾಟೆಯಲ್ಲಿ  ಮೂಡಬಿದರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ದ್ವಂಸವಾಗಿದೆ. ಈ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. 

ಇದನ್ನು ಓದಿ: Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ

ಕೈ - ಕಮಲ ಕಾರ್ಯಕರ್ತರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಳಿದುಬಂದಿದೆ. ಇನ್ನು, ಈ ಕಲ್ಲು ತೂರಾಟದ ವೇಳೆ ಪೊಲೀಸ್ ಸಿಬ್ಬಂದಿ ತಲೆಗೆ ಸಹ ಗಾಯವಾಗಿದೆ. ಸ್ಥಳದಲ್ಲಿ ಬಿಜೆಪಿ - ಕಾಂಗ್ರೆಸ್‌ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 

ಇದನ್ನೂ ಓದಿ: Karnataka Election 2023: ಬೆಂಗಳೂರಲ್ಲಿ ಈ ಬಾರಿಯೂ ನೀರಸ ಮತದಾನ

 

Latest Videos
Follow Us:
Download App:
  • android
  • ios