Asianet Suvarna News Asianet Suvarna News

Mandya Politics: ರಾಜಕೀಯ ಪಕ್ಷ ಸೇರಲು ಆತುರ ಮಾಡಲ್ಲ: ಸಂಸದೆ ಸುಮಲತಾ

*  ಜನರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ
*  ರಾಜಕೀಯಕ್ಕೆ ಬರೋದು, ಬಿಡೋದು ಅಭಿ ನಿರ್ಧಾರಕ್ಕೆ ಬಿಟ್ಟಿರುವೆ
*  ಯಾರೂ ಕಾರ್ಡ್‌ ಕೊಟ್ಟು ಪಕ್ಷ ಸೇರಿ ಅಂತ ಹೇಳೋಲ್ಲ
 

Mandya MP Sumalatha Ambareesh React on Join Political Party grg
Author
Bengaluru, First Published Apr 17, 2022, 10:17 AM IST | Last Updated Apr 17, 2022, 10:17 AM IST

ಮದ್ದೂರು(ಏ.17):  ಚುನಾವಣೆಗೆ ಇನ್ನೂ ಸಮಯವಿದೆ. ಯಾವ ಪಕ್ಷ ಸೇರಬೇಕು ಎಂಬ ವಿಚಾರದಲ್ಲಿ ನಾನು ಆತುರದ ನಿರ್ಧಾರ ಮಾಡುವುದಿಲ್ಲ. ಜನರ ಅಭಿಪ್ರಾಯ ಸಂಗ್ರಹಿಸಿ ಸೂಕ್ತ ಸಮಯದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್‌(Sumalatha Ambareesh) ಹೇಳಿದರು.

ಶನಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಸೇರುವ ನಿರ್ಧಾರ ಸುಲಭದ ಮಾತಲ್ಲ. ಅದಕ್ಕೆ ಸೂಕ್ತ ವೇದಿಕೆ ನಿರ್ಮಾಣವಾಗಬೇಕು. ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕು. ಅಷ್ಟುಸುಲಭಕ್ಕೆ ಮಾಡುವ ನಿರ್ಧಾರವಲ್ಲ. ಏಕಾಏಕಿ ಅಂತಿಮ ನಿರ್ಧಾರಕ್ಕೆ ಬರಲಾಗದು ಎಂದು ಪ್ರತಿಕ್ರಿಯೆ ನೀಡಿದರು.

Mandya Politics: ಬೇರೆ ಪಕ್ಷ ಸೇರ್ಪಡೆ ಬಗ್ಗೆ ಮಂಡ್ಯ ಜನರೇ ಹೇಳಬೇಕು: ಸುಮಲತಾ

ಕಾಂಗ್ರೆಸ್‌-ಬಿಜೆಪಿ ಎರಡೇ ಆಯ್ಕೆ:

ಪಕ್ಷೇತರ ಅಭ್ಯರ್ಥಿಯಾಗಿರುವ ನೀವು ಮುಂದಿನ ಚುನಾವಣೆ(Election) ವೇಳೆಗೆ ಯಾವುದಾದರೂ ಪಕ್ಷ ಸೇರಬೇಕು ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ, ಪ್ಲಸ್‌ ಪಾಯಿಂಟ್‌ ಎಲ್ಲಿದೆ, ಮೈನಸ್‌ ಪಾಯಿಂಟ್‌ ಎಲ್ಲಿದೆ ಎನ್ನುವುದನ್ನೂ ನೋಡಬೇಕಲ್ಲವೇ. ಕಾಂಗ್ರೆಸ್‌(Congress) ಮತ್ತು ಬಿಜೆಪಿ(BJP) ಇವೆರಡು ಪಕ್ಷಗಳೇ ನನ್ನ ಮುಂದಿರುವ ಆಯ್ಕೆ. ಈ ಪಕ್ಷಗಳ ಪೈಕಿ ಜನರು ನನ್ನನ್ನು ಎಲ್ಲಿ ನೋಡೋಕೆ ಇಷ್ಟ ಪಡುತ್ತಾರೆ. ಅವೆಲ್ಲವನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಈಗ ಜನರು ಪಕ್ಷೇತರ ಅಭ್ಯರ್ಥಿಯಾಗಿರೋದೇ ನಮಗೆಲ್ಲರಿಗೂ ಚೆನ್ನಾಗಿದೆ ಎನ್ನುತ್ತಿದ್ದಾರೆ. ತಟಸ್ಥವಾಗಿದ್ದುಕೊಂಡೇ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೀರಾ. ಇದೇ ಚೆನ್ನಾಗಿದೆ ಎನ್ನುತ್ತಿದ್ದಾರೆ. ಮುಂದೆ ಈ ವಿಚಾರವಾಗಿ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡುತ್ತೇನೆ. ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿರುವುದರಿಂದ ಎಲ್ಲರ ಒಮ್ಮತದ ಅಭಿಪ್ರಾಯದೊಂದಿಗೆ ಅಂತಿಮ ನಿರ್ಧಾರಕ್ಕೆ ಬರುತ್ತೇನೆ ಎಂದು ನುಡಿದರು.

ಅಪ್ಪ, ತಾತನ ಹೆಸರು ಬಿಟ್ಟು ನಿಖಿಲ್‌ ಜಿಪಂ ಎಲೆಕ್ಷನ್‌ ಗೆದ್ದು ತೋರಿಸಲಿ: ಸುಮಲತಾ ಸವಾಲ್‌

ಕಾರ್ಡ್‌ ಕೊಟ್ಟು ಕರೆಯೋಲ್ಲ:

ಯಾರೂ ಕಾರ್ಡ್‌ ಕೊಟ್ಟು ಪಕ್ಷ ಸೇರಿ ಅಂತ ಹೇಳೋಲ್ಲ. ಮಾತುಕತೆಗೆ ಸಿಕ್ಕ ಸಮಯದಲ್ಲಿ ಮುಂದೆ ನೀವು ಯಾವ ಪಕ್ಷ ಸೇರುತ್ತೀರಾ, ನಮ್ಮ ಪಕ್ಷಕ್ಕೆ ಬನ್ನಿ ಎಂಬ ಮಾತುಗಳನ್ನು ಹೇಳುತ್ತಾರೆ. ಸಂಸತ್‌ಗೆ(Parliament) ಹೋದಾಗಲೂ ಹಲವು ಕೇಂದ್ರ ನಾಯಕರು ಯಾವಾಗ ನಮ್ಮ ಪಕ್ಷ ಸೇರುತ್ತೀರಾ ಎಂದು ಕೇಳುತ್ತಿದ್ದಾರೆ. ಸಮಯ ಬರಲಿ ನೋಡೋಣ ಎನ್ನುತ್ತಿದ್ದೇನೆ. ಈ ವಿಚಾರದಲ್ಲಿ ಆತುರ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅಭಿಷೇಕ್‌ ಮೇಲೆ ಒತ್ತಡವಿಲ್ಲ:

ಅಭಿಷೇಕ್‌(Abhishek) ರಾಜಕೀಯಕ್ಕೆ(Politics) ಬರಬೇಕಾ, ಸಿನಿಮಾರಂಗದಲ್ಲೇ ಇರಬೇಕಾ ಎನ್ನುವುದು ಅವನ ವೈಯಕ್ತಿಕ ವಿಚಾರ. ಈ ವಿಷಯದಲ್ಲಿ ನಾನು ಅವನ ಮೇಲೆ ಒತ್ತಡವನ್ನೂ ಹಾಕುತ್ತಿಲ್ಲ, ಮಾರ್ಗದರ್ಶನವನ್ನೂ ನೀಡುತ್ತಿಲ್ಲ. ನಮ್ಮೂರ(ದೊಡ್ಡರಸಿನಕೆರೆ) ಕಡೆ ಹೋದಾಗ ಅಭಿಯನ್ನು ರಾಜಕೀಯಕ್ಕೆ ಕರೆತನ್ನಿ. ಅಭಿ ನಮಗೆ ಬೇಕು ಎಂದು ಜನರು ಕೇಳುತ್ತಿದ್ದಾರೆ. ಈ ವಿಚಾರದಲ್ಲಿ ಅವನು ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ. ನನ್ನ ಯಾವುದೇ ಹಸ್ತಕ್ಷೇಪವಿರುವುದಿಲ್ಲ ಎಂದು ಪುನರುಚ್ಚರಿಸಿದರು.
 

Latest Videos
Follow Us:
Download App:
  • android
  • ios