ಅಪ್ಪ, ತಾತನ ಹೆಸರು ಬಿಟ್ಟು ನಿಖಿಲ್ ಜಿಪಂ ಎಲೆಕ್ಷನ್ ಗೆದ್ದು ತೋರಿಸಲಿ: ಸುಮಲತಾ ಸವಾಲ್
* ಭಾರೀ ರಾಜಕೀಯ ಅನುಭವಿಯಂತೆ ಸಲಹೆ ನೀಡಿರುವ ನಿಖಿಲ್
* ಚಿಕ್ಕವರಾದರೂ ಪರವಾಗಿಲ್ಲ, ನನ್ನಿಂದ ತಪ್ಪಾಗಿದ್ದರೆ ಸಲಹೆ ಸ್ವೀಕರಿಸುವೆ
* ಫ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು ಎಂದು ಟಾಂಗ್ ನೀಡಿದ ಸುಮಲತಾ
ನವದೆಹಲಿ(ಮಾ.31): ನಿಖಿಲ್ ಕುಮಾರಸ್ವಾಮಿ(Nikhil Kumarswamy) ಪಕ್ಷ ಬಿಟ್ಟು, ತಂದೆ, ತಾತನ ಹೆಸರು ಬಿಟ್ಟು ಜಿಲ್ಲಾ ಪಂಚಾಯ್ತಿ ಚುನಾವಣೆ ಗೆಲ್ಲಲಿ. ಆಮೇಲೆ ಬಂದು ನನಗೆ ಸಲಹೆ ನೀಡಲಿ ಎಂದು ಸಂಸದೆ ಸುಮಲತಾ ಅಂಬರೀಷ್(Sumalatha Ambareesh) ಸವಾಲು ಹಾಕಿದ್ದಾರೆ.
ನಿಖಿಲ್ ಭಾರೀ ರಾಜಕೀಯ(Politics) ಅನುಭವಿಯಂತೆ ಸಲಹೆ ನೀಡಿದ್ದಾರೆ. ಸಂಸದರು ತಮ್ಮ ಸಾಧನೆ ಏನು? ಕೊಡುಗೆ ಏನು ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ. ಚಿಕ್ಕವರಾದರೂ ಪರವಾಗಿಲ್ಲ, ನನ್ನಿಂದ ತಪ್ಪಾಗಿದ್ದರೆ ಸಲಹೆ ಸ್ವೀಕರಿಸುವೆ. ಆದರೆ ಫ್ಯಾಕ್ಟ್ ಇಟ್ಟುಕೊಂಡು ಮಾತನಾಡಬೇಕು ಎಂದು ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಮುಂದುವರೆದ ಸುಮಲತಾ v/s ಜೆಡಿಎಸ್ ಸಮರ, ಗುದ್ದಲಿ ಪೂಜೆ ಮಾಡದೆ ವಾಪಸ್!
ನಾನು ವಿಧಾನಸಭೆಗೆ(Assembly Election) ಸ್ಪರ್ಧೆ ಮಾಡುವುದಿಲ್ಲ. ಅಭಿಷೇಕ್ ಅಂಬರೀಶ್(Abhishek Ambareesh) ಸ್ಪರ್ಧೆ ಮಾಡುವ ಬಗ್ಗೆ ಮುಂದಿನ ವರ್ಷದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಸಂಸದೆ ಕೊಡುಗೆ ಏನು?
ಮದ್ದೂರು: ಮಂಡ್ಯ(Mandya) ಜಿಲ್ಲೆ ಅಭಿವೃದ್ಧಿಗೆ ಸಂಸದೆ ಸುಮಲತಾ ಕೊಡುಗೆ ಏನು ಎಂದು ಜೆಡಿಎಸ್(JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸಾಮಿ ಭಾನುವಾರ ಪ್ರಶ್ನಿಸಿದ್ದರು. ಮಾ.26 ರಂದು ಪಟ್ಟಣದ ಲೀಲಾವತಿ ಬಡಾವಣೆಯ ಶಾಸಕ ಡಿ.ಸಿ.ತಮ್ಮಣ್ಣನವರ ನಿವಾಸಕ್ಕೆ ಭೇಟಿ ನೀಡಿ ಕೆ.ಬೆಳ್ಳೂರು ಗ್ರಾಪಂ ನೂತನ ಅಧ್ಯಕ್ಷೆ ಸುಂದ್ರಮ್ಮ ಹಾಗೂ ಉಪಾಧ್ಯಕ್ಷ ನಟರಾಜು ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಜಿಲ್ಲೆ ಅಭಿವೃದ್ಧಿ ಮಾಡುವುದಕ್ಕೆ ಸಂಸದರು ಬೇಕಾಗಿಲ್ಲ. ನಮ್ಮಲ್ಲಿ ದಕ್ಷತೆಯ ಶಾಸಕರು ಇದ್ದಾರೆ. ಅವರಿಗೆ ತಮ್ಮ ಕರ್ತವ್ಯದ ಬಗ್ಗೆ ಪರಿಜ್ಞಾನವಿದೆ ಎಂದು ವ್ಯಂಗ್ಯವಾಡಿದ್ದರು.
ಸಂಸದೆ ಸುಮಲತಾ ಅವರ ರೀತಿ ಒಂದು ಬಾರಿ ಆಯ್ಕೆಯಾದವರಲ್ಲ. ಶಾಸಕರು ಹಿಂದಿನ ಬಾಗಿಲಿಂದ ಬಂದು ರಾಜಕಾರಣ ಮಾಡುತ್ತಿಲ್ಲ. ಮೂರು ನಾಲ್ಕು ಬಾರಿ ಕ್ಷೇತ್ರದ ಜನರಿಂದ ಆಯ್ಕೆಯಾಗಿ ಅಭಿವೃದ್ಧಿ ಜೊತೆಗೆ ರಾಜಕಾರಣ ಮಾಡುತ್ತಿದ್ದಾರೆ. ಈ ವಿಚಾರವನ್ನು ಜನರು ಪ್ರಶ್ನಿಸಬೇಕೆ ಹೊರತು ಸಂಸದೆಯಲ್ಲ ಎಂದು ಹೇಳಿದ್ದರು.
ಸಂಸದೆ ಸುಮಲತಾ ಪ್ರತಿ ಸಂದರ್ಭದಲ್ಲೂ ಪಕ್ಷ ಮತ್ತು ಶಾಸಕರ ವಿರುದ್ಧ ಕಾಲು ಕೆರೆದುಕೊಂಡು ಜಗಳ ತೆಗೆಯುತ್ತಿದ್ದಾರೆ. ಜಿಲ್ಲೆಗೆ ಇವರ ಕೊಡುಗೆ ಏನು ಎಂದ ನಿಖಿಲ್ ಕುಮಾರಸ್ವಾಮಿ, ಇಂತಹ ಆಟಗಳು ಸದಾ ಕಾಲ ನಡೆಯುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸುಮಲತಾ ಅವರು ಮೊದಲು ಜೆಡಿಎಸ್ ಶಾಸಕರ ಜೊತೆ ಕೈ ಜೋಡಿಸಿ ಜನರ ಜೊತೆ ನಿಂತು ಕೆಲಸ ಮಾಡಲಿ ಎಂದು ಸಲಹೆ ನೀಡಿದ್ದರು. ಜೆಡಿಎಸ್ ಶಾಸಕರಿಗೆ ಸುಮಲತಾ ಪಾಠ ಮಾಡುವ ಅಗತ್ಯವಿಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಸಂಸದರ ಕೊಡುಗೆ ಏನು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು.
ಪಕ್ಷ ಸಂಘಟನೆಗಾಗಿ ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ನಾನು ರಾಜ್ಯ ಪ್ರವಾಸ ಮಾಡುತ್ತೇವೆ. ಇನ್ನು ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಎದುರಾಗುವುದರಿಂದ ಕುಮಾರಸ್ವಾಮಿ ಅವರು ಈಗಾಗಲೇ ಪ್ರವಾಸ ಕೈಗೊಂಡಿದ್ದಾರೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
Mandya Rain Effect: ಶೀಘ್ರ ಸರ್ಕಾರದಿಂದ ಪರಿಹಾರ ಬಿಡುಗಡೆ ಭರವಸೆ ನೀಡಿದ ಸಂಸದೆ ಸುಮಲತಾ
ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ(Karnataka) ಪ್ರವಾಸ ಮಾಡಬೇಕಾಗಿದೆ. ಹೀಗಾಗಿ ನಾನು ರಾಮನಗರ(Ramanagara) ಜಿಲ್ಲೆಯಲ್ಲಿ ಪಕ್ಷದ ನೇತೃತ್ವ ವಹಿಸಿಕೊಂಡು ಕೆಲಸ ಮಾಡುತ್ತೇನೆ. ಪ್ರತಿ ಗ್ರಾಪಂ ಮಟ್ಟದಲ್ಲೂ ಸಭೆ ನಡೆಸುವ ಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಭರವಸೆ ನೀಡಿದ್ದರು.
ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ , ಮುಖಂಡರಾದ ಕೆ.ಟಿ.ಶೇಖರ್ , ಕೆಂಗಲ್ ಗೌಡ, ಎಸ್‌ವಿಟಿ ರಾಮಚಂದ್ರ, ಕೆ.ಬೆಳ್ಳೂರು ಗ್ರಾಪಂ ಸದಸ್ಯರಾದ ಕವಿತಾ, ದಿವ್ಯರಾಮಚಂದ್ರ ಶೆಟ್ಟಿ, ಭಾಗ್ಯಮ್ಮ, ಮಹೇಂದ್ರ, ಚಿಕ್ಕಣ್ಣ, ನವೀನ, ಚುಂಚಗಹಳ್ಳಿ ಕುಮಾರಗೌಡ ಸೇರಿದಂತೆ ಹಲವರು ಇದ್ದರು.