ಕುಮಾರಸ್ವಾಮಿ ಗೆಲ್ತಿದ್ದಂತೆ ಮಂಡ್ಯದಲ್ಲಿ ಮತ್ತೆ ಶುರುವಾಯ್ತು ಕೈ-ದಳ ಫೈಟ್!

ಚಿವ ಚಲುವರಾಯಸ್ವಾಮಿ ಅಧಿಕಾರ ತ್ಯಾಗ ಮಾಡುತ್ತಾನೆಂದು ನಿರೀಕ್ಷೆ ಮಾಡಬೇಡಿ. ಸಿಎಂ ಬೇಕಾದರೆ ಅಧಿಕಾರ ಬಿಡಬಹುದು ಆದ್ರೆ ಆತ ಬಿಡೊಲ್ಲ. ಮಹಾನ್ ಭ್ರಷ್ಟ. ಹಣ ಅಧಿಕಾರಕ್ಕೆ ಏನು ಬೇಕಾದರೂ ಮಾಡ್ತಾನೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶಗೌಡ ವಾಗ್ದಾಳಿ ನಡೆಸಿದರು.

Mandya Lok sabha election result 2024 highlights former MLA suresh gowda outraged against chaluvarayaswamy rav

ಮಂಡ್ಯ (ಜೂ.7): ಸಚಿವ ಚಲುವರಾಯಸ್ವಾಮಿ ಅಧಿಕಾರ ತ್ಯಾಗ ಮಾಡುತ್ತಾನೆಂದು ನಿರೀಕ್ಷೆ ಮಾಡಬೇಡಿ. ಸಿಎಂ ಬೇಕಾದರೆ ಅಧಿಕಾರ ಬಿಡಬಹುದು ಆದ್ರೆ ಆತ ಬಿಡೊಲ್ಲ. ಕೊಟ್ಟ ಮಾತಿನಂತೆ ನಡೆಯೊಲ್ಲ. ಅಧಿಕಾರ, ಹಣಕ್ಕಾಗಿ ಏನು ಬೇಕಾದರೂ ಮಾಡ್ತಾನೆ. ಆತನಿಗೆ ಇದು ಕೊನೆ ಅವಕಾಶ ಹೀಗಾಗಿ ಲೂಟಿಗೆ ಇಳಿದಿದ್ದಾನೆ ಎಂದು ರಾಜೀನಾಮೆ ಹೇಳಿಕೆ ಬಗ್ಗೆ ಉಲ್ಟಾ ಹೊಡೆದ ಚಲುವರಾಯಸ್ವಾಮಿ ವಿರುದ್ದ ಮಾಜಿ ಶಾಸಕ ಸುರೇಶಗೌಡ ವಾಗ್ದಾಳಿ ನಡೆಸಿದರು.

ಇಂದು ಮಂಡ್ಯದ ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಶಾಸಕ , ಶಾಸಕರು, ತಾನು ರಾಜ್ಯ ನಾಯಕ ಎನ್ನುತ್ತಿದ್ದ ಆದ್ರೆ ಮಂಡ್ಯ ಕ್ಷೇತ್ರದಲ್ಲೇ ಲೀಡ್ ಸಿಕ್ಕಿಲ್ಲ. ಚುನಾವಣೆ ಪ್ರಚಾರದ ವೇಳೆ ಸೋತ್ರೆ ರಾಜೀನಮೆ ಕೊಡ್ತೇನೆ ಎಂದಿದ್ದ. ಕೊಟ್ಟ ಮಾತಿನಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಅದೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಆತನೊಬ್ಬ ಮಹಾನ್ ಭ್ರಷ್ಟ, ಲೂಟಿ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾನೆ. ನಾನೇ ಮಂಡ್ಯ ಶಿಲ್ಪಿ ಎಂದು ಹೊರಟ್ರೆ ಹೀಗೆ ಆಗೋದು. ಜನ ಮನಸು ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಇದು ಉದಾಹರಣೆ ಎಂದು ಮಾತಿನ ಮೂಲಕ ತಿವಿದರು.

ಮಂಡ್ಯ ಸೋಲಿಗೆ ಪಕ್ಷ ಕೇಳಿದರೆ ರಾಜೀನಾಮೆ ನೀಡುವೆ: ಸಚಿವ ಚಲುವರಾಯಸ್ವಾಮಿ

ಕಾಂಗ್ರೆಸ್‌ನವರು ಸ್ಟಾರ್ ಚಂದ್ರುವನ್ನ ಹರಕೆ ಕುರಿಯನ್ನಾಗಿ‌ ಮಾಡಿಕೊಂಡ್ರು. ರಾಜಕೀಯ ಗೊತ್ತಿಲ್ಲದವರನ್ನು ಕರೆದುಕೊಂಡುಬಂದು ಬಲಿಕೊಟ್ರು. ಚುನಾವಣೆ ಮುಗಿದ  ಬಳಿಕವೂ ಸ್ಟಾರ್ ಚಂದ್ರು ಬಳಿ ಹಣ ಕೇಳಿದ್ದಾರೆ. ಹೆಚ್ಚು ಖರ್ಚಾಗಿದೆ ಎಂದು ಹೇಳಿ ಮಹಾನ್ ನಾಯಕ ಚಂದ್ರು ಬಳಿಗೆ ಹೋಗಿದ್ದನಂತೆ. ಚಲುವರಾಯಸ್ವಾಮಿ ವಿರುದ್ಧ ಸುರೇಶ್ ಗೌಡ ಗಂಭೀರ ಆರೋಪ ಮಾಡಿದರು.

ಇನ್ನು ಹಾಸನ ಪೆನ್ ಡ್ರೈವ್ ಪ್ರಕರಣ ವಿಚಾರ ಸಂಬಂಧ ಮಾತನಾಡಿದ ಅವರು, ಈ ಚುನಾವಣೆ ಸಂದರ್ಭ ಯಾರಾರು ಏನು ಕರ್ಮ ಮಾಡಿದ್ದಾರೋ ಆ ಕರ್ಮವನ್ನು ಆ ಪುಣ್ಯಾತ್ಮರು ಅನುಭವಿಸುತ್ತಾರೆ. ದೇವರಾಜೇಗೌಡ ಹೊರಗೆ ಬರಬೇಕು ಅಷ್ಟೇ. ಈ ಚುನಾವಣೆಯಲ್ಲಿ ಕರ್ಮ ತಟ್ಟಿದೆ, ಮುಂದೆ ಇನ್ನೂ ತಟ್ಟಲಿದೆ. ದೇವರಾಜೇಗೌಡ ಹೊರಬಂದ್ರೆ ಎಲ್ಲ ವಿಷಯವನ್ನೂ ಹೇಳ್ತಾನೆ.

ಎಚ್‌ಡಿ ಕುಮಾರಸ್ವಾಮಿ ಗೆಲುವು ಮಂಡ್ಯ ಜಿಲ್ಲೆಯಲ್ಲಿ ದ್ವೇಷ ರಾಜಕಾರಣಕ್ಕೆ ನಾಂದಿ!

ಯಾರಾರು ಏನ್ ಮಾತಾಡಿದ್ರು, ಏನ್ ಮಾಡಿದ್ರು ಎಲ್ಲವನ್ನು ಹೇಳ್ತಾನೆ. ಕೃಕೃತ್ಯ ಮಾಡಿದವನು ಒಬ್ಬ ವ್ಯಕ್ತಿ ಅಪರಾಧಿ. ಹೆಣ್ಣು ಮಕ್ಕಳ ಮಾನವನ್ನ ಬೀದಿ ಬೀದಿಯಲ್ಲಿ ಹರಾಜು ಹಾಕುವ ಕೃತ್ಯ ಮಾಡಿದವರು ಅವರಿಗಿಂತ ದೊಡ್ಡ ಅಪರಾಧಿ. ದೇವರಾಜೇಗೌಡ ಜೈಲಿಗೋಗುವ ಮುನ್ನ ಒಂದಷ್ಟು ಜನರ ಮುಖವಾಡ ಬಯಲು ಮಾಡಿದ್ದಾನೆ. ಹೊರಗೆ ಬಂದು ಇನ್ನೊಂದಷ್ಟು ಮಂದಿಯ ಮುಖವಾಡ ಬಯಲು ಮಾಡ್ತಾನೆ ಎಂದರು.

 

Latest Videos
Follow Us:
Download App:
  • android
  • ios