Asianet Suvarna News Asianet Suvarna News

ಕುಮಾರಣ್ಣಗೆ 21ಕ್ಕೆ ಸರ್ಜರಿ ನಿಗದಿಯಾಗಿದೆ. ಸರ್ಜರಿ ಬಳಿಕ ಹೆಚ್ಚು ಓಡಾಡೋಕೆ ಆಗೊಲ್ಲ: ನಿಖಿಲ್

ಕುಮಾರಣ್ಣಗೆ ಇದೇ ತಿಂಗಳು 21 ರಂದು ಸರ್ಜರಿ ನಿಗದಿಯಾಗಿದೆ. ಸರ್ಜರಿ ಬಳಿಕ ಕುಮಾರಣ್ಣ ಹೆಚ್ಚು ಓಡಾಡಲು ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

Mandya Lok sabha election 2024 Nikhil kumaraswamy react about HDKumaraswamy rav
Author
First Published Mar 15, 2024, 3:48 PM IST

ಮಂಡ್ಯ (ಮಾ.15): ಕುಮಾರಣ್ಣಗೆ ಇದೇ ತಿಂಗಳು 21 ರಂದು ಸರ್ಜರಿ ನಿಗದಿಯಾಗಿದೆ. ಸರ್ಜರಿ ಬಳಿಕ ಕುಮಾರಣ್ಣ ಹೆಚ್ಚು ಓಡಾಡಲು ಆಗುವುದಿಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಇಂದು ಮಂಡ್ಯಕ್ಕೆ ಆಗಮಿಸಿದ ವೇಳೆ ಮಾತನಾಡಿದ ನಿಖಿಲ್, ಕುಮಾರಣ್ಣ ಸ್ಪರ್ಧೆ ನಿಮ್ಮೆಲ್ಲರ ಪ್ರೀತಿಯ ಬಯಕೆ. ಕಳೆದ ವಿಧಾನಸಭಾ ಚುನಾವಣೆ ಸೋಲಿಗೆ ಈ ಬಾರಿ ಉತ್ತರ ಕೊಡಬೇಕಾಗಿದೆ ಎಂದು ನನಗೂ ಆಹ್ವಾನ ಕೊಟ್ಟಿದ್ದೀರಿ. ನಮಗೆ ಸಿಗುವ ಕ್ಷೇತ್ರಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡೋಣ. ಪಕ್ಷ ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.

ದೇವೇಗೌಡರ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ: ಡಿಕೆ ಸುರೇಶ್‌

ಕುಮಾರಣ್ಣ ಸರ್ಜರಿ ಬಳಿಕ ಹೆಚ್ಚು ಓಡಾಡಲು ಆಗುವುದಿಲ್ಲ. ಚುನಾವಣಾ ಪ್ರಚಾರಕ್ಕಾಗಿ ಪ್ರವಾಸ ಮಾಡಲು ಸಹ ಆಗೊಲ್ಲ. ದಯಮಾಡಿ ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು. ವಿಧಾನಸಭೆ ಚುನಾವಣೆ ವೇಳೆ ಕುಮಾರಣ್ಣ ಸಾಕಷ್ಟು ಶ್ರಮ ವಹಿಸಿದ್ದಾರೆ. ನಿಖಿಲ್ ಯುವ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತಾನೆ. ಪ್ರತಿ ಹಳ್ಳಿಗೆ ತೆರಳಿ ಜನರ ಕಾಲು ಕಟ್ಟಿ ಸಂಘಟನೆ ಮಾಡುತ್ತೇನೆ. ಮಂಡ್ಯ ಅಭ್ಯರ್ಥಿ ಆದರೆ ಬೇರೆ ಕ್ಷೇತ್ರಕ್ಕೆ ಹೋಗಲು ಆಗಲ್ಲ. ನಿಮ್ಮ ಜೊತೆಯಲ್ಲೇ ಇರುತ್ತೇನೆ, ಪ್ರೀತಿ ವಿಶ್ವಾಸಕ್ಕೆ ತಲೆ ಬಾಗುತ್ತೇನೆ ಎಂದರು ಈ ವೇಳೆ ನಿಖಿಲ್ ಮಾತಿಗೆ ಕಾರ್ಯಕರ್ತರ ಬೇಸರಗೊಂಡರು ನೀವೇ ಅಭ್ಯರ್ಥಿಯಾಗಬೇಕು ಎಂದು ಘೋಷಣೆ ಕೂಗಿದರು. ಮಧ್ಯೆ ಪ್ರವೇಶಿಸಿ ನಿಮ್ಮ ಆಸೆಗೆ ನಾನು ಧಕ್ಕೆ ತರೊಲ್ಲ ಎಂದ ಕುಮಾರಸ್ವಾಮಿ

ಎಚ್‌ಡಿ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಬೇಕಾ? ರಾಜ್ಯದಲ್ಲೆ ಇರಬೇಕ ಎಂಬ ಪ್ರಶ್ನೆ ಎಲ್ಲರಲ್ಲಿದೆ. ಜಿಲ್ಲೆಯಲ್ಲಿ ಸಮರ್ಥ ನಾಯಕರಿದ್ದಾರೆ. ಕೆಲವರ ಸ್ಪರ್ಧೆ ಆಯಾ ಕ್ಷೇತ್ರದ ಮುಖಂಡರ ಅಭಿಪ್ರಾಯವಾಗಿದೆ. ಇದನ್ನು ಪಕ್ಷದ ವರಿಷ್ಠರ ಗಮನಕ್ಕೂ ತಂದಿದ್ದೇನೆ. ಭಗವಂತ ಯಾವತ್ತೂ ಕೊಡುತ್ತಾನೋ ಅವತ್ತು ನಾನು MP MLA ಆಗುತ್ತೇನೆ. ಯೋಗ ದೇವರು ಕೊಡ್ತಾನೆ, ಯೋಗ್ಯತೆ ನಾವು ಸಂಪಾದಿಸಬೇಕು.

ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ ಪರ ಎಚ್‌ಡಿಕೆ ಬ್ಯಾಟಿಂಗ್; ಡಿಕೆ ಸುರೇಶ್‌ಗೆ ಕೊಟ್ಟ ಎಚ್ಚರಿಕೆ ಏನು?

ಪಕ್ಷದ ಕಾರ್ಯಕರ್ತನಾಗಿ ನಿಸ್ವಾರ್ಥ ಸೇವೆ ಮಾಡುತ್ತೇನೆ. ಬೇರೆಯವರ ರೀತಿ ಸ್ವಾಭಿಮಾನದ ಹೆಸರಲ್ಲಿ ಮಂಡ್ಯ ಜನರಿಗೆ ಮೋಸ ಮಾಡಲ್ಲ. ಮುಂದೆ ಒಂದು ದಿನ ನೀವೇ ನನಗೆ ಆಶೀರ್ವಾದ ಮಾಡುವ ದಿನ ಬರಲಿದೆ ಎಂದರು.

Follow Us:
Download App:
  • android
  • ios